(ಅಮ್ಮೆಂಬಳದ ಕುರ್ನಾಡು ಸೋಮನಾಥ)
ಕಾಮಿತ ಫಲದಾತ ಕಟ್ಟೆಯ ಸ್ವಾಮಿ ಸೋಮನಾಥಾ
ಪೂಜೆಯ ನಿರುತದಿ ಕೊಳ್ಳುವ ಪ.
ಅಂಬಿಕೆಯನು ವರಿಸಿ ಗಜಚ
ರ್ಮಾಂಬರವನು ಧರಿಸಿ
ಶಂಬರಾರಿಯನು ಸುಲಭದಿ ಗೆಲಿದಂ-
ಮ್ಮೆಂಬಳಜನರನು ನಂಬಿಸಿ ಸಲಹುವ 1
ಒಡೆಯನು ನೀನೆಂದೂ ಊರಿನ
ಬಡ ಜನರುಗಳಿಂದೂ
ಕೊಡುವ ಪೂಜೆಯನು ಮಡದಿಸಮೇತೀ-
ಗಿಡದ ಬುಡದಿ ಕೊಂಬುಡುಪತಿಶಿಖರ 2
ದೋಷಗಳನು ತರಿವಾ ಪನ್ನಗ
ಭೂಷಣನೀ ಬರುವಾ
ತೋಷಪಡುವ ಸಜ್ಜನರಿಗೆ ಶೇಷಗಿ
ರೀಶನು ಸಕಲಭಿಲಾಷೆಯ ಸಲಿಸುವ 3