ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಢಚಿತ್ತದೊಳಗೆನ್ನ ಒಡೆಯನೀತಗೆ ಮುನ್ನ ಪಡಿಯೆನಿಪರಿನ್ನುಂಟೆ ಪೊಡವಿಯಲ್ಲಿ ಜನವಾರ್ತೆಯನೆ ಕೇಳಿ ವನಿತೆಯೊಳು ಖತಿತಾಳಿ ಇನಿತು ಕಾಡಿದ ಚಾಳಿಯೊರೆವೆ ಕೇಳಿ ಮಡಿವಳನ ನುಡಿಗಾಗಿ ಕಡುಮೂರ್ಖ ತಾನಾಗಿ ಅಡವಿಗಟ್ಟುವರೇನೆ ಮಡದಿಯನ್ನೆ ಧರ್ಮಪತ್ನಿಯುಮಂತು ಪೂರ್ಣಗರ್ಭವನಾಂತ ಅರ್ಧಾಂಗಿಯನ್ನುಳಿದ ನಿರ್ದಯಾತ್ಮ ದಯೆಯೆಂಬುದಿವನಲ್ಲಿ ತೋರದಿಲ್ಲಿ ಪ್ರಿಯರಾರು ಮತ್ತಿವಗೆ ಧಾತ್ರಿಯಲ್ಲಿ ಭಯವಿಲ್ಲ ಮಾತಿನೊಳು ನಯವದಿಲ್ಲ
--------------
ನಂಜನಗೂಡು ತಿರುಮಲಾಂಬಾ
ದೇವ ಕರುಣಾಳು ನೀ ಕಾವಲಾಗಿರುವುದಕೆ ಆವ ವೇತನ ಕೊಡುವೆ ಶ್ರೀ ವರನೆ ನಿನಗೆ ಪ. ರೂಢ ಕೈಪಿಡಿದು ಕಾಪಾಡುತಿಹ ಬಿರುದ ಪಾಡಿ ಪೊಗಳುತ ನಮಿಸಿ ಬೇಡಿಕೊಂಬುವೆನು ನಾ ಮಾಡಿದಪರಾಧಗಳು ನೋಡಲದ್ಭುತವು 1 ನಡೆ ತಪ್ಪು ನುಡಿ ತಪ್ಪು ನಿಂತಲ್ಲಿ ಬಹು ತಪ್ಪು ಖಡುಮೋಹ ಕೃತ ತಪ್ಪು ಕಾಮಕೃತ ತಪ್ಪು ಮಾಡದಿ ಮನೆ ಮಿತ್ರ ಧನ ಒಡವೆಯಾಶೆಯು ತಪ್ಪು ಒಡೆಯನೀ ಕ್ಷಮಿಸೆಂದು ವಂದಿಸುವೆ ನಿಂದು 2 ಯುಕ್ತಾಯುಕ್ತವನರಿಯೆ ಎನ್ನಹಂಕೃತಿ ಮರೆಯೆ ಭಕ್ತಿ ಮುಕ್ತಿದ ಸರ್ವ ಶಕ್ತಿ ಶ್ರೀ ಹರಿಯೆ ಭಕ್ತವತ್ಸಲ ವೆಂಕಟಾದ್ರಿ ಶೇಖರ ಸಿರಿಯೆ ಯುಕ್ತಿಯಿಂದಲಿ ಎನ್ನ ಪಾಲಿಸುವ ದೊರೆಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ. ಮಕರಕುಂಡಲಧರ ವಿಕಸಿತ ಮುಖಪದ್ಮ ಕೌಸ್ತುಭ ಶುಭ ವನಮಾಲಿ ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1 ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು ಬಿಡನೆಂದು ಭವಸಿಂಧು ಪೊತ್ತನಿಂದು ತಡವ ಮಾಡದಲೆ ಸಂಗಡ ಬಂದೀ ನಿಲಯದಿ ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2 ತುಳಸಿಧಾಮ ಸುಶೋಭಿತ ನಮಗೆ ಬೆಂ- ಬಲವಾಗಿರುವ ಸರ್ವ ಸ್ಥಳಗಳಲಿ ಅಲಸನಾಗದೆ ಶೇಷಾಚಲವಾಸನು ಶ್ರೀಭೂ- ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು 1 ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ 2 ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ 3 ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ ಮೆರೆದ4 ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ ವೇಲೂರ ಪುರಪಯೋನಿಧಿವಾಸ ಜಗದ ದೊರೆ ವಿಜಯವಿಠ್ಠಲನ್ನದಾಸ5
--------------
ವಿಜಯದಾಸ
ಶ್ರೀಶ ಶ್ರೀಹಯವದನ ಮೂರ್ತಿಗೊಂದಿಸುವೆಸಾಸಿರ ನಾಮದ ಒಡೆಯನೀನೆಂದು ಪನಿನ್ನ ನೋಡುವ ಇಚ್ಛೆಯಿಂದ ನಿನ್ನದಾಸರುಇನ್ನು ಗಾವುದ ದೂರದಿಂದ ಬರುತಿಹರುನಿನ್ನ ಭಕ್ತರ ಕೂಡಿ ನಿನ್ನ ಸೇವೆಯ ಮಾಡಿನಿನ್ನ ದರುಶನದಿಂದ ಧನ್ಯರಾಗುವರು 1ಹರಿದಾಸರೆಲ್ಲರೂ ಪರಮಸಂಭ್ರಮದಿಂದಹರಿದಿನದಜಾಗರಹರಿಸ್ಮರಣೆಯಿಂದಪರಮವೈಭವದಿ ತನ್ನ ಸ್ಮರಿಸುತಿಹ ಸುಜನರನುಕರುಣದಿಂದಲಿಕಾವಸಿರಿರಮಣನೆಂತೆಂದು2ಆಪತ್ತು ತಾಪತ್ರಯಂಗಳೆಲ್ಲವುನೀಗಿಶ್ರೀಪತಿಯೆ ರಕ್ಷಿಸು ರಕ್ಷಿಸೆಂದೆನುತಗೋಪತೀ ಕೃಷ್ಣನ್ನಪಾಡಿ ಪೊಗಳುವರನ್ನುಕಾಪಾಡುವನು ಸಕಲಪಾಪಗಳ ಹರಿಸಿ 3ಸೋದೆಯಲಿ ನೆಲೆಸಿರುವ ವಾದಿರಾಜರಿಗೊಲಿದುಆದರದಿ ಅವರಿತ್ತ ಸೇವೆ ಕೈಗೊಂಡುಶೋಭ ಕೃತುನಾಮ ಸಂವತ್ಸರದಿ ಸುಜನರಿಗೆಶೋಭನಂಗಳನಿತ್ತು ನೀದಯದಿ ಪೊರೆವೆ 4ಕಡು ಹರುಷದಿಂದಿತ್ತ ಕಡಲೆ ಹೂರಣ ಸವಿದುದೃಢ ಭಕ್ತರನು ಪೊರೆದೆ ಕಡುಹರುಷದಿಮೃಡನಸಖನಿನ್ನಂಘ್ರಿ ಬಿಡದೆ ಧ್ಯಾನಿಪ ಭಾಗ್ಯತಡೆಯದಲೆ ಪಾಲಿಸೈ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ