ಡೌಲಿನ ಡೌಲ್ಯಾಕೆ ಮಾಡ್ತೀ
ಕಾಲತೀರದ ಮೇಲೇನೆಂದು ಹೇಳ್ತೀ ಪ
ಹೊಯ್ಮಾಲಿತನದ್ಹೊಲೆಕೆಲಸ ಮಾಡಿಕೂತಿ
ಸೈಮಾಡಿ ಬರಕೊಟ್ಟದೆಲ್ಲ ಮರೆತಿ ಅ.ಪ
ಕಾಯವೆಂಬ ಹೊಲ ಕೌಲಿಗೆ ಹಿಡಿದಿ
ಮಾಯ ಮರವೆಯೆಂಬ ಮುಳ್ಳು ಬೆಳೆಸಿದಿ
ಹೇಯವಿಷಯವೆಂಬ ಸೆದೆಯ ಕೆಡವಿದಿ
ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ
ಕಾವಲಾದೆಲೆ ಮೂಳಿ ನಿನ್ನ ಎಡಬಲದಿ
ವಾಯಿದೆ ಸಮೀಪಬಂತು ಮುಂದೇನು ಹಾದಿ 1
ಕ್ರೋಧ ಎಂದೆಂಬ ಅಲಬು ಕಿತ್ತದೆ
ಭೇದ ಎಂದೆಂಬುವ ಜೇಕು ತೋಡದೆ
ವಾದವೆಂಬ ಬೋರೆ ಜಡ್ಡು ಕಡಿಯದೆ
ಖೇದಯೆಂದೆಂಬ ಕರಿಕೆದಡ್ಡ ನಳಿಯದೆ
ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ
ಕಾದುವ ಒಡೆಯನಿಗೀಡೇನು ಮಾಡ್ದೀ 2
ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ
ನಿತ್ಯ ನಿರ್ಮಲತೆಯೆಂಬ ಬಾಂದು ಒಡೆಸಿದಿ
ಸತ್ಯ ಸನ್ಮಾರ್ಗೆಂಬ ಸೀಮೆಯ ಮುರಿದಿ
ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ
ಕರ್ತು ಶ್ರೀರಾಮನ
ಅರ್ತು ಭಜಿಸಿದೆ ಯಮಗ್ವ್ಯೆರ್ಥ ತುತ್ತಾದಿ3