ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾನ ವಿಲೋಲನ ನಾಮ ಸುಧಾರಸ ಪಾನಮಾಡು ಸತತ ಪ ಹೀನ ಮನವ ಬಿಟ್ಟು ಸಾನುರಾಗದಿಂದ ಜಾನಕಿ ವಲ್ಲಭ ಆನಂದಮಯನೆಂದ ಅ.ಪ ಉಡಿಗೆ ತೊಡುಗೆಗಳ ಸಡಗರವೆಲ್ಲವು ಕಡು ದು:ಖ ದೇಹವು ನಡುಗುವತನಕ ನಡುಗಲು ದೇಹವು ಮಡದಿ ಮಕ್ಕಳುಗಳು ಒಡೆಯನಾದರು ನಿನ್ನ ಸಿಡುಗುಟ್ಟುವರು 1 ಹಸಿವು ಬಾಯಾರಿಕೆ ಶಿಶು ಮೋಹಗಳಿಂದ ಪಶುಪಕ್ಷಿಗಳೆಲ್ಲ ನಿನಗೆ ಸಮ ವಸುಧೆಯೊಳಗೆ ನಿನಗೆ ಅಸಮ ವಿವೇಕವ ಬಿಸಜಾಕ್ಷನೀಯಲು ಸುಸಮಯವೆಂದರಿತು 2 ತನ್ನನು ನೆನೆಯಲು ಘನ್ನ ಮಹಿಮೆ ಪ್ರ ಸನ್ನ ಮೂರುತಿಯು ಎನ್ನವನೆಂದು ನಿನ್ನಪರಾಧವ ಮನ್ನಿಸಿ ಸಲಹುವ ಚಿನ್ಮಯ ಮೂರುತಿ ಬಿನ್ನೈಸುವೆನೆಂದು 3
--------------
ವಿದ್ಯಾಪ್ರಸನ್ನತೀರ್ಥರು