ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏ ರಂಗಧಾಮ ರಂಗ ಏ ರಂಗಧಾಮ ಪ. ನಾರುವ ಮೈಯವನತ್ತ ಸಾರು ಮುಟ್ಟದಿರೊ ಎನ್ನ ದೂರನಿಲ್ಲು ತರವಲ್ಲ ಏ ರಂಗಧಾಮ ಧೀರ ಮತ್ಸ್ಯರೂಪಕಾಣೆ ಎಲೆ ಸತ್ಯಭಾಮೆ 1 ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು ಡÉೂಂಕಿದೇನೋ ಪೇಳೋ ಏ ರಂಗಧಾಮ ಮಂದರ ಮುಳುಗೆ ಕೂರ್ಮ ಎಲೆ ಸತ್ಯಭಾಮೆ 2 ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು ಗಾಡಿಕಾರ ನೀನಾರಯ್ಯ ಏ ರಂಗಧಾಮ ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ ಕಾಡವರಾಹನು ಕಾಣೆ ಎಲೆ ಸತ್ಯಭಾಮೆ 3 ಮನುಷ್ಯಾಗಿದ್ದಮೇಲಣಕಾನನದ ಮೃಗರಾಜ ಆನನವಿದೇನೊ ಪೇಳೊ ಏ ರಂಗಧಾಮ ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ 4 ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ ತಿರುಕನೆಂಬೋದರಿಯದಾದೆನೊ ಏ ರಂಗಧಾಮ ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ ಗರುವ ವಾಮನ ಕಾಣೆ ಎಲೆ ಸತ್ಯಭಾಮೆ 5 ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ ಮಡುಹಿ ಕ್ಷತ್ರೇರನೆಲ್ಲ [ಮುದದಿ] ಸೇರ್ದ ಮಾತೆಗಾಗಿ ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ 6 ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ [ಕಾರಣ]ವಿದೇನೊ ಪೇಳೊ ಏ ರಂಗಧಾಮ ಕ್ರೂರರಾವಣನ ಗೆಲಿದು ನಾರಿಸೀತೆಯನು ತÀಂದ ಧೀರರಾಘವನು ಕಾಣೆ ಎಲೆ ಸತ್ಯಭಾಮೆ 7 ವಲ್ಲಭೆಜನರಿಗೆಲ್ಲ ನೀ ವಲ್ಲಭನಾಗಿ ಗೊಲ್ಲನಂತೆ ಗೋವ ಕಾಯುವ ಕಾರಣವೇನೊ ಏ ರಂಗಧಾಮ ಬಿಲ್ಲಹಬ್ಬಕ್ಕೆ ಹೋಗಿ[ಮಲ್ಲ] ಕಂಸನ ಕೊಂದ ಬಲ್ಲಿದ ಶ್ರೀಕೃಷ್ಣ ಕಾಣೆ ಎಲೆ ಸತ್ಯಭಾಮೆ 8 ನಗೆಗೀಡು ಮಾಡಿಕೊಂಡು ದಿಗ್ವಸನನಾಗಿ ನಿಂತ ಹಗರಣವಿದೇನೊ ಪೇಳೊ ಏ ರಂಗಧಾಮ ಮಿಗೆ ಮೂರುಪುರದ ಸತಿಯರ ವ್ರತವ ಕೆಡಿಸಿ ಜಗವ ಮೋಹಿಸುವ ಬೌದ್ಧ ಎಲೆ ಸತ್ಯಭಾಮೆ 9 ಕರದಿ ಖಡ್ಗವನೆ ಪಿಡಿದು ತರಳ ಅಶ್ವವನೇರಿ ತಿರುಗುವುದಿದೇನು ಪೇಳೊ ಏ ರಂಗಧಾಮ ವರ ಹಯವದನ ಹರುಷದಿಂದಲಾಡಿ ಪಾಡಿ ಕಲ್ಕಿಯಾದೆ ಹರಿಲೋಚನೆ ಎಲೆ ಸತ್ಯಭಾಮೆ 10
--------------
ವಾದಿರಾಜ
ಗಾನ ವಿಲೋಲನ ನಾಮ ಸುಧಾರಸ ಪಾನಮಾಡು ಸತತ ಪ ಹೀನ ಮನವ ಬಿಟ್ಟು ಸಾನುರಾಗದಿಂದ ಜಾನಕಿ ವಲ್ಲಭ ಆನಂದಮಯನೆಂದ ಅ.ಪ ಉಡಿಗೆ ತೊಡುಗೆಗಳ ಸಡಗರವೆಲ್ಲವು ಕಡು ದು:ಖ ದೇಹವು ನಡುಗುವತನಕ ನಡುಗಲು ದೇಹವು ಮಡದಿ ಮಕ್ಕಳುಗಳು ಒಡೆಯನಾದರು ನಿನ್ನ ಸಿಡುಗುಟ್ಟುವರು 1 ಹಸಿವು ಬಾಯಾರಿಕೆ ಶಿಶು ಮೋಹಗಳಿಂದ ಪಶುಪಕ್ಷಿಗಳೆಲ್ಲ ನಿನಗೆ ಸಮ ವಸುಧೆಯೊಳಗೆ ನಿನಗೆ ಅಸಮ ವಿವೇಕವ ಬಿಸಜಾಕ್ಷನೀಯಲು ಸುಸಮಯವೆಂದರಿತು 2 ತನ್ನನು ನೆನೆಯಲು ಘನ್ನ ಮಹಿಮೆ ಪ್ರ ಸನ್ನ ಮೂರುತಿಯು ಎನ್ನವನೆಂದು ನಿನ್ನಪರಾಧವ ಮನ್ನಿಸಿ ಸಲಹುವ ಚಿನ್ಮಯ ಮೂರುತಿ ಬಿನ್ನೈಸುವೆನೆಂದು 3
--------------
ವಿದ್ಯಾಪ್ರಸನ್ನತೀರ್ಥರು
ರಾಮ ರಾಮ ರಾಮ ಶ್ರೀರಾಮನೆನ್ನಿರೊ ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ ಅಂದದಿಂದ ಈ ದಶರಥನಂದನೆಂದು ---- ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ ಕಾಲ ಕಳೆಯ ಹೊಂದಿ ದೇವರ ಚರಣ ಕಮಲಾ ನಂದ ಅರ್ಚಿಸುವ ಮಂದಿರದಿ ಭಜಿಸಿರೊ 1 ಕಾಮನಯ್ಯನ ಕಡಲೊಳಾಳ್ದÀ್ದನ ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ ವಾಮನ ಪರಶುರಾಮನಾದನಾ ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ 2 ಪಿತೃವಾಕ್ಯ ಪಾಲಿಸಿದವನು ಸತತ ಭಕ್ತರ ಸಲಹುತಿಹನು ಕ್ಷಿತಿಗೆ ಒಡೆಯನಾದ ದೇವನು 'ಶ್ರೀ ಹೊನ್ನ ವಿಠ್ಠಲಾ’ ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ--------ಸದ್ಗತಿಯ ತೋರುವನಧಿಕ ಸಂಪನ್ನ 3
--------------
ಹೆನ್ನೆರಂಗದಾಸರು