ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ದ್ವಾದಶನಾಮ ನಿರ್ವಚನ ಶ್ರೀಕೃಷ್ಣ ನಿನ್ನ ಚರಣಾರವಿಂದಕ್ಕೆರಗಿ ಭಕುತಿಯಿಂ ನಿನ್ನ ಪನ್ನೆರಡು ರೂಪಗಳ ನಾಮ ನಿರ್ವಚನದಿಂ ಕೂಡಿ ನುತಿಸುವೆ ನಾನು ಸರ್ವಸಿದ್ಧಿಯನ್ನಿತ್ತು ಕಾಪಾಡು ಹರಿಯೆ 18 ಸೃಷ್ಟಿಲಯಕಾರಿಗಳು ಬೊಮ್ಮರುದ್ರರು ಇವರೆ ಕೇಶವೆಂಬಕ್ಷರದಿ ಮೆರೆಯುತ್ತಲಿಹರು ವರ್ತನವು ಯಾರಿಂದಲಹುದವನೆ ಪರದೇವ ಕೇಶವಾತ್ಮಕನವನು ಶ್ರೀಕೃಷ್ಣ ದೇವ 19 ನಾರವೆಂದರೆ ದೋಷ ಲೇಶವಿಲ್ಲದ ಗುಣವು ನಾರವೆಂದರೆ ನೀರು ಜೀವನಾಧಾರ ನಾರವಯನವು ಯಾರಿಗವನೆ ನಾರಾಯಣನು ರಜತಪೀಠದ ಪುರದ ಪರದೈವವವನು 20 ಮಾಧವನು ಮಾಲಕುಮಿಗೊಡೆಯನವ ಪರಮಾತ್ಮ ಮಾಯೆಯನು ಎದೆಯಲ್ಲಿ ತಾಳ್ದ ಸಿರಿವರನು ಮಾಯೆಯಿಂದಲಿ ಮಾನವಗೆ ಮುಸುಕನು ಹಾಕಿ ತನ್ನ ರೂಪವನಾರು ನೋಡದಂತಿಹನು 21 ಹಿರಿ ಬೆಟ್ಟವನು ತಾನು ಕಿರಿ ಬೆಟ್ಟಿನಲಿ ಹೊತ್ತು ಗೋವುಗಳ ರಕ್ಷಿಸಿದ ಗೋಪಾಲ ನೀನು ವೇದರಕ್ಷಕನಾಗಿ ಗೋವಿಂದನೆನಿಸಿರುವೆ ಶ್ರೀಕೃಷ್ಣ ನಿನ್ನ ಮಹಿಮೆಯನೇನ ಪೇಳ್ವೆ 22 ಚೇಷ್ಟಕನು ಬಲರೂಪನಾಗಿರುವ ಕಾರಣದಿ ವಿಶ್ವದಲ್ಲೆಲ್ಲು ವ್ಯಾಪಿಸಿರುವುದರಿಂ ವಿಷ್ಣುನಾಮದ ನೀನು ವೈಷ್ಣವರ ಕುಲದೊಡೆಯ ಮಧ್ವಹೃನ್ಮಂದಿರದ ನೆಲೆಯಲ್ಲಿ ಇರುವೆ 23 ಮಧುವೆಂಬ ದೈತ್ಯನನು ಸೃಜಿಸಿಯವನನು ಕೊಂದು ಮಧುಸೂದನನು ಎಂಬ ಬಿರುದು ನೀ ಪೊತ್ತೆ ದುರ್ಜನರ ಸಂಹಾರ ಸಜ್ಜನರ ಉದ್ಧಾರ ಎಂಬೆರಡು ಕಾರ್ಯಗಳಿಗಾಗಿಯವತಾರ 24 ತ್ರೈವಿಕ್ರಮಾವತಾರವ ತಾಳ್ದು ದೇವ ಕಾಲ ತೊಳೆದು ಮೂರು ಲೋಕದ ಭಕುತರಿಗೆ ದರ್ಶನವ ಕೊಟ್ಟು ಭಕ್ತರಕ್ಷಕನಾಗಿ ಮೆರೆದೆ ಸಿರಿವರನೆ25 ವಾಮನನು ನೀನಾಗಿ ವಾಮಪಂಥದಿ ಹೋಗಿ ಬಲಿ ಚಕ್ರವರ್ತಿಯಲಿ ಮೂಹೆಜ್ಜೆ ಬೇಡೆ ಭಕುತಿಯಿಂದವ ಕೊಡಲು ಮುಕುತಿಯನು ಕೊಡಲೆಂದು ಬಲಿಯ ಮನೆಯೂಳಿಗವ ಗೈದೆ ಪರಮಾತ್ಮ26 ಸಿರಿಯನೆದೆಯಲಿ ಪೊತ್ತು ಶ್ರೀಧರನು ನೀನಾಗಿ ಸರ್ವ ಭೂಷಣಗಳಿಂ ಶೋಭಿಸುತಲಿರುವೆ ಅನ್ನದಾತನು ನೀನು ಅನ್ನಭೋಕ್ತøವು ನೀನು ಭುಕ್ತಿ ಮುಕ್ತಿ ಪ್ರದನು ನೀನಿರುವೆ ದೇವ 27 ಇಂದ್ರಿಯಗಳು ಹೃಷೀಕಾಭಿಧಾನದಲಿಹವು ನೀನವುಗಳಿಗೆ ಎಲ್ಲ ಒಡೆಯನಾಗಿರುವೆ ಹೃಷೀಕೇಶ ನಾಮವದು ನಿನಗೊಪ್ಪುವದು ಹರಿಯೆ ನನ್ನ ಮನ ನಿನ್ನಡಿಯೊಳಿರುವಂತೆ ಮಾಡು28 ಸಾಗರವನುದರದಲ್ಲಿರಿಸಿ ನೀನದರಿಂದ ನಾಭಿಯಲಿ ಪದುಮವನು ಸೃಷ್ಟಿಸಿದೆ ದೇವಾ ಪದುಮನಾಭನು ನೀನು ಬೊಮ್ಮಪಿತನಾಗಿರುವೆ ಮಾಯಾ ರೂಪವನೇನಪೇಳ್ವೆ29 ಮೊಸರ ಕುಡಿಕೆಯನೊಡೆದು ತಾಯಿಯಿಂ ಬಂಧಿತನು ದಾಮೋದರನು ಎನಿಸಿ ಉಜಡೆಯನ್ನೊಯ್ದು ಮರಗಳೆಡೆಯಲಿ ಪೊಕ್ಕು ಬೀಳಿಸುತಲವುಗಳನು ಭಕುತರಾ ಶಾಪಮೋಚನೆಯ ನೀ ಮಾಡ್ದೆ30 ಕೇಶವನೆ ಮೊದಲಾದ ಪನ್ನೆರಡು ನಾಮಗಳ ಅರ್ಥವರಿತನವರತ ಪೇಳಲವಗೊಲಿದು ಸಂಸಾರ ಬಂಧನವ ತೊಲಗಿಸಿಯೆ ಪರಮಾತ್ಮ ತನ್ನ ಬಳಿಗೊಯ್ಯುವನು ನಿಜ ಪೇಳ್ವೆ ನಾನು31 ಶ್ವೇತ ರಕ್ತವು ಪೀತ ಕೃಷ್ಣ ವರ್ಣಗಳೆಂಬ ನಾಲ್ಕು ಬಣ್ಣದ ದೇವನೊಬ್ಬನೇ ಇಹನು ಕಲಿಯುಗದ ಕಾಲದಲಿ ಕೃಷ್ಣನೊಬ್ಬನ ನೆನೆದು ನಾಮಜಪ ಮಾಡಿದರೆ ಮುಕ್ತಿಯನು ಕೊಡುವ 32
--------------
ನಿಡಂಬೂರು ರಾಮದಾಸ
ನಡೆದು ಬಾರಯ್ಯ ಪ್ರಾಣರಾಯ ಪಿಡಿ ಎನ್ನ ಕೈಯಾ ಪ ಕಡುಬಡಜನರಿಗೆ ಒಡೆಯನಾಗಿ ನೀ ಕರ ಪಿಡಿದು ಪೊರೆವುದಕೆ 1 ಭಾಗ್ಯಪುರಿಯೊಳಗೆ ಭಾಗವತರಿಗೆಲ್ಲ ಯೋಗ್ಯಮಾರ್ಗವನು ಬೇಗನೆ ತೋರಲು 2 ಅನಾಥನಾಥ ಪ್ರಾಣನಾಥ ವಿಠ್ಠಲನ ದೂತನೀ ನೆನೆಸಿ ಭಕ್ತಜನರ ಸಂತೋಷಪಡಿಪುದಕೆ 3
--------------
ಬಾಗೇಪಲ್ಲಿ ಶೇಷದಾಸರು
ಕೊಡುವಕರ್ತ ಬೇರೆ ಇರುತಿರೆ -<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಡುಬಿಡು ಚಿಂತೆಯನು ಪ.ಒಡೆಯನಾಗಿ ಮೂಜಗವನು ಪಾಲಿಪ |ಬಡವರಾಧಾರಿಯು ಭಕ್ತರ ಪ್ರಿಯನು ಅಪಕಲ್ಲಿನೊಳಗೆ ಇರುವ - ಕಪ್ಪೆಗೆ - |ಅಲ್ಲೆ ಉದಕಕೊಡುವ |ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |ವಲ್ಲಭಶ್ರೀಹರಿ ಎಲ್ಲಿಯು ಇರುತಿರೆ|1||ಆನೆಗೈದುಮಣದಾ - ಆಹಾರವ |ತಾನೆ ತಂದು ಕೊಡುವ |ದೀನರೊಡೆಯ ಶ್ರೀನಿವಾಸ ದಯಾನಿಧಿ |ಮಾನದಿಂದಲಿ ಕಾಯ್ವ ಭಾನುಕೋಟಿತೇಜ2ಸರಸಿಜಾಕ್ಷ ತನ್ನ - ಸೇರಿದ |ನರರನು ಬಿಡನಣ್ಣ |ಪರಮದಯಾನಿಧಿ ಭಕುತರ ಸಲಹುವ |ಪುರಂದರವಿಠಲನು ಪುಷ್ಪಶರನ ಪಿತ 3
--------------
ಪುರಂದರದಾಸರು