ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ ಪ ಮಂದವಾರ ದಿವಸದಲ್ಲಿ ಮಿಂದು ಮಡಿಯನುಟ್ಟುಕೊಂಡು ಗೋ ವಿಂದ ಎನುತ ನಾಮವಿಕ್ಕಿ ವಂದನೆಯ ಮಾಡದನಕ 1 ಗರ್ವವನು ಉಳಿದು ಮನದಿ ಸಾರ್ವಭೌಮನನ್ನು ನೆನೆದು ನಿರ್ವಹಿಸಿ ಶೇಷನು ಸುತ್ತಿದ ಪರ್ವತವನ್ನು ಏರದನಕ 2 ಕಾಸು ದುಡ್ಡು ಚಕ್ರ ನಾಣ್ಯ ವೀಸವುಳಿಯದಂತೆ ಬಡ್ಡಿ ವಾಸಿಯಿಕ್ಕಿ ಗಂಟ ಕಟ್ಟ ಈಸುಕೊಂಡು ಸೂಸದನಕ 3 ದೇಶ ದೇಶದಿಂದ ಕಪ್ಪ ಗಾಸಿಯಾಗದಂತೆ ತರಿಸಿ ಕೋಶಕಿಕ್ಕಿ ಕೊಂಬ ಲಕ್ಷ್ಮಿಯ ಈಶನನ್ನು ನೆನೆಯದನಕ 4 ಗುಡವ ಕದಡಿಕೊಂಡು ಸಂಗಡ ಕಡಲೆಯನ್ನು ನೆನಸಿಯಿಟ್ಟು ಒಡೆದ ನಾರಿಕೇಳವು ಸಹಿತ ಒಡೆಯಗೆಂದು ಇಡದ ತನಕ 5 ಆಶಾಪಾಶವನ್ನು ಬಿಟ್ಟು ದೇಶವನ್ನು ತೊಳಲಿ ಬಳಲಿ ಕೇಶವಾದಿ ನಾಮದೊಳಗೆ ವಾಸುದೇವನ ನೆನೆಯದನಕ 6 ಸೃಷ್ಟಿಪಾಲ ಮೆಟ್ಟಿದಂಥ ಬೆಟ್ಟವನ್ನು ಏರಿ ಹೋಗಿ ವರಾಹ ತಿಮ್ಮ ಶೆಟ್ಟಿಯನ್ನು ನೋಡದನಕ 7
--------------
ವರಹತಿಮ್ಮಪ್ಪ