ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ ಸಾರ ವೇದಗಳ ವಿಧಿಗಿತ್ತ ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ- ತಾರಗಾರತಿಯ ಬೆಳಗಿರೆ 1 ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ ತೋರಿ ಬೆನ್ನಾಂತ ಸುರನುತ ತೋರಿ ಬೆನ್ನಾಂತ ಸುರನುತ ಕೂರ್ಮಾವ- ತಾರಗಾರತಿಯ ಬೆಳಗಿರೆ 2 ಧಾತ್ರಿಯ ಕದ್ದೊಯ್ದ ದೈತ್ಯನÀ ಮಡುಹಿದ ಎತ್ತಿ ದಾಡೆಯಲಿ ನೆಗಹಿದ ಎತ್ತಿ ದಾಡೆಯಲಿ ನೆಗಹಿದ ವರಾಹ- ಮೂರ್ತಿಗಾರತಿಯ ಬೆಳಗಿರೆ 3 ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ ಒಡಲ ಸೀಳಿದ ಹಿರಣ್ಯಕನ ಒಡಲ ಸೀಳಿದ ಹಿರಣ್ಯಕನ ನರಸಿಂಹ ಒಡೆಯಗಾರತಿಯ ಬೆಳಗಿರೆ 4 ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ ಈ ಮೂರು ಜಗವ ಈರಡಿಯ ಈ ಮೂರು ಜಗವ ಈರಡಿ ಮಾಡಿ ಅಳೆದ ವಾಮನಗಾರತಿಯ ಬೆಳಗಿರೆ 5 ಅಂಬರಕೇಶನ್ನ ನಂಬಿದ ಕತ್ರಿಯರ ಸಂಭ್ರಮ ಕುಲವ ಸವರಿದ ಸಂಭ್ರಮ ಕುಲವ ಸವರಿದ ಪರಶುರಾ- ಮೆಂಬಗಾರತಿಯ ಬೆಳಗಿರೆ 6 ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ ತಂದ ರಾವಣನ ತಲೆಹೊಯ್ದ ತಂದ ರಾವಣನ ತಲೆಹೊಯ್ದ ರಘುರಾಮ- ಚಂದ್ರಗಾರತಿಯ ಬೆಳಗಿರೆ 7 ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ ದುಷ್ಟ ಕಂಸನ್ನ ಕೆಡಹಿದ ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ ಕೃಷ್ಣಗಾರತಿಯ ಬೆಳಗಿರೆ 8 ರುದ್ರನ್ನ ತ್ರಿಪುರದೊಳಿದ್ದ ಸತಿಯರ ಬುದ್ಧಿ ಭೇದಮಾಡಿ ಕೆಡಿಸಿದ ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ ಬೌದ್ಧಗಾರತಿಯ ಬೆಳಗಿರೆ 9 ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು ತಾ ಪಿಡಿದು ಖಡ್ಗ ತುರಗವ ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ- ರೂಪಗಾರತಿಯ ಬೆಳಗಿರೆ 10 ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ ಹತ್ತವತಾರಿ ಹಯವದನ ಹತ್ತವತಾರಿ ಹಯವದನನ ಪಾಡುತ ಚಿತ್ರದಾರತಿಯ ಬೆಳಗಿರೆ 11
--------------
ವಾದಿರಾಜ