ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ