ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ನೋಡಮ್ಮಾ ಗೋಪೆಮ್ಮಾ ಪ. ಗಡಿಗೆಯ ಒಡೆದಾನು ಕೊಡಹಾಲು ಕುಡಿದಾನು ಹುಡುಗರ ಬಡಿದು ಓಡಿ ಪೋದಾನು ನಿಮ್ಮ ಹುಡುಗಾ ಸಿಕ್ಕಿದ ಮೇಲೆ ಭಿಡಿಯಾವಿಲ್ಲದೆ ಗಿಡದಾ ನೆರಳಿಗೆ ಕಟ್ಟುವೆನು ಬೆನ್ನಟ್ಟುವೆನು 1 ನೆಲವಿನಲ್ಲಿದ್ದ ಪಾಲುಮೊಸರು ಬೆಣ್ಣೆ ಕದ್ದಾನು ಬಾಲಕರೊದ್ದನು ಮುದ್ದು ಹೆಣ್ಣು ಬಾಲೆಯರಿಗೆ ಕಣ್ಣುಸನ್ನೆ ಮಾಡಲಿ ಬಂದಾನು ಭಂಡು ಮಾಡಿದಾನು ದುಂಡ ಕುಚವ ಕರದಿ ಪಿಡಿದಾ ಓಡಿ ಪೋದಾ 2 ಹೆಡೆಯ ಸರ್ಪಾವ ಕರದೊಳು ಹಿಡಿದು ಸಂಜೀಯ ಹೊತ್ತಿಲಿ ತಂದಾನು ನಮ್ಮನ್ನಂಜಿಸಲು ಬಂದಾನು ನಾಗಕನ್ನಿಕೆಯರಿಂದ ಸ್ತೋತ್ರ ಮಾಡಿಸಿಕೊಂಡಾನು ಕಾಲಿಮರ್ಧನಕೃಷ್ಣಾನು 3
--------------
ಕಳಸದ ಸುಂದರಮ್ಮ