ದುರಿತ ತರಿಯುವಾ ಪ
ಯಂತ್ರೋದ್ಧಾರರಾ | ಅಂತರಂಗರಾಮಂತ್ರ ಮಂದಿರಾ | ಕಾಂತಿ ಭೂತರಾ 1
ಕುಂತಿ ಜಾತರಾ ಏ | ಕಾಂತ ಭಕ್ತರಾಸಂತ ಗುರಗಳ ನೀ | ವಿಂತು ನಂಬಿರೊ 2
ಪಂಕಜಾಕ್ಷನಾ | ಅಣಕ ಧರಿಸಿಹಾಬಿಂಕ ಗುರುಗಳಾ | ಲಂಕೇಶನನುಜರಾ 3
ಖಂಪಾತಾಳ ಭೂ | ವ್ಯಾಪಿಸಿರುವರಾಅಪಾರ ಮಹಿಮರಾ | ಕೋಪ ರಹಿತರಾ 4
ಮೂಕ ಬಧಿರರಾ | ನೇಕ ರೋಗಿಯರಾನೂಕಿ ತಾಪವಾ | ದುಃಖ ಕಳೆಯುವಾ 5
ಮಾಯಿ ಮತಗಳಾ | ಸಾಯ ಒಡೆದರಾಆರ್ಯ ಮಧ್ವರಾ | ಪ್ರೀಯ ಶಿಷ್ಯರಾ 6
ಗುರುಗೋವಿಂದ ವಿಠಲನಾ | ಚರಣ ಸರಸಿಜಾನಿರುತ ಸ್ಮರಿಪರಾ | ವರವ ಕೊಡುವರಾ 7