ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ ಕೊಂಡು ಮುದ್ದಿಸಿದಳೆ ಯದುನಾಥನ್ನ ಪ ಪಾಲವಾರಿಧಿ ಮಧ್ಯದಲ್ಲಿ ಶ್ರೀದೇವಿ ಸಹಿತ್ವೊಂ ದಾಲದೆಲೆಯ ಮ್ಯಾಲಾಡುತಲಿ ಕಾಲಬೆರಳು ಕಟಬಾಯಲಿ ಚೀಪುವ ನೀಲವರ್ಣದಲಿ ತನ್ನ ಬಾಲನೆಂದೆನುತ 1 ಕೋಟಿ ಸೂರ್ಯದ ಕಾಂತಿ ಹರಣಮಾಡುವ ಮುಖ ಕಿ- ರೀಟ ಕೌಂಸ್ತುಭ ಮಣಿಯಾಭರಣ ಹಾಟಕಾಂಬರನುಟ್ಟ ನಾಟಕಧಾರಿ ಕಿ ಸಾರಥಿ ಪಕ್ಷಿರಾಟವಾಹನನ 2 ಚೆನ್ನವಾಗೀರೇಳು ಲೋಕವನು ತನ್ನುದರದೊಳಡಗಿಸಿ ಪನ್ನಂಗಶಾಯಿ ಪರಮಾತ್ಮನ್ನ ಚಿನ್ನ ಮಾಣಿಕ್ಯದ ತೊಟ್ಟಿಲೊಳಿಟ್ಟು ತೂಗುತ ಎನ್ನ ಕಂದ ನೀ ತೋಳನ್ನಾಡೆಂದೆನುತ 3 ಕಡಗ ಕಿರುಗೆಜ್ಜೆ ಚರಣದಿಂದಲಿ ನಡೆಯುತಲಿ ಬಂದು ದಧಿ- ಗಡಿಗೆ ತಾ ಒಡೆದನೆ ಕಡಗೋಲಿಂದ ಹಿಡಿದು ಕಟ್ಟಲು ಒರಳೆಳೆದ್ವಿಮಳಾರ್ಜುನ ಗಿಡವ ಕೆÀಡಹಿ ಮುಕ್ತಿಕೊಡುವ ಶ್ರೀ ಕೃಷ್ಣನ 4 ಭವ ಭಯ ನಾಶ ಮಾಡುವಾತ ಭುವ- ನೇಶ ಹದಿನಾಲ್ಕು ಲೋಕದ ವಾಸ ರಾಸಕ್ರೀಡೆಲಿ ವ್ರಜದ್ವನಿತೆಯರ ಸಂತೋಷಬಡಿಸಿದ ಭೀ- ಮೇಶ ಕೃಷ್ಣನ ಮುಖ5
--------------
ಹರಪನಹಳ್ಳಿಭೀಮವ್ವ