ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ಪ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಹಾದರಹಳು ನಾರಿ | ಮಾದಿಗÀನ ಪೋದಂತೆ 1 ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ2 ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ 3 ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ 4 ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ 5
--------------
ವಿಜಯದಾಸ
ಸಾಲವ ಕೊಡದಿದ್ದರೆ ನಿನಗೆ | ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ ಏಸು ದಿವಸದಿಂದ ಎಲ್ಲರ ಸೇವಿಸಿ | ಕಾಸು ಕಾಸಿಗೆ ನಾನು ಕೂಡಹಾಕಿ | ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು | ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ 1 ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ | ಗಡ್ಡ ಬೀಳುವೆನೊ ಸಾಲವ ತೀರಿಸೊ | ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ | ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು 2 ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ ಕೆ ನಿಲ್ಲದೆ ನಿನಗೆ ಸಾಲವಿತ್ತೆ | ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು | ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ3 ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು | ಮೇಲೆ ಮೇಲೆ ಬಿದ್ದು ನಿನ್ನ | ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ 4 ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ | ನೆತ್ತಿಯೆತ್ತಿ ಮೋರೆ ತೋರ ಬೇಕೊ | ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ | ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು 5 ಬಡತನ ಬಂದರಾಗ ನಾ ನಿನಗೆ ಬಾಯಿ | ಬಿಡುವೆನೆ ದೈನ್ಯದಲಿ ಭಾಗ್ಯವಂತಾ | ತಡ ಮಾಡಲಾಗದು ಕೊಡು ಎನ್ನ ಒಡಿವೆ | ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ 6 ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು | ಸಂತತ ಸಂತರ ಮುಂದೆ ನುಡಿದು ಬಿಡುವೆ | ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ | ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ 7
--------------
ವಿಜಯದಾಸ