ಒಡಿಯನಹುದೊ ಎನ್ನ ನೀ ಎನ್ನ
ಪಿಡಿದಿಹ ಕೈಯಲ್ಲಿ ನಿನ್ನ ಧ್ರುವ
ನೋಡದವಗುಣನ್ನ ಅವಗುಣನ್ನ
ಮಾಡುವೆ ನೀ ಪಾವನ
ನೀಡುವೆ ಪಡೆದೆನ್ನ ಪಡೆದೆನ್ನ
ಕೂಡು ದಯದಲಿ ಸಂಪನ್ನ 1
ಭಿನ್ನವಿಲ್ಲದೆ ನೀಯೆನ್ನ ನೀಯೆನ್ನ
ಚನ್ನಾಗ್ಯಾದೆ ಪ್ರಸನ್ನ
ಉನ್ನತಗುಣ ನಿನ್ನ ನಿನ್ನ
ಚಿನ್ಮಯದ ಚಂದ್ರನ್ನ 2
ಬಿರುದಿನ ಪ್ರಖ್ಯಾತ ಪ್ರಖ್ಯಾತ
ಬಿರುದು ಪ್ರಾಣನಾಥ
ತರಳ ಮಹಿಪತಿದಾತ ಸುದಾತ
ಗುರುಶಿರೋಮಣಿ ಸಾಕ್ಷಾತ 3