ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ, ಕುಣಿಯೆನುತ -ನರ -ಹರಿಯೆ, ಕುಣಿಯೆಂದು ಕುಣಿಸಿದರಯ್ಯ ಪಲೋಕವ ತಾಳ್ದನ ಮನೆಯಲಿ ಪುಟ್ಟಿ |ತೂಕದ ನುಡಿಗಳ ಕದ್ದವನ ||ನಾಕರಿಸಲು ನಿಜ ಗೋಪರೂಪದಿಂದ |ಆಕರಿಸಿದನಾ ಕುಣಿಸಿದರಯ್ಯ 1ಎಡೆಯಿಲ್ಲದೆ ನಡೆವನ ಕೂಡಿರುವವನ |ಹಿಡಿಲೆಂಬನ ಒಡಹುಟ್ಟಿದನ ||ಒಡೆಯನ ಕಂದನ ವೈರಿಯ ಬಂಡಿಯ |ಹೊಡೆದ ಮಹಾತ್ಮನ ಕುಣಿಸಿದರಯ್ಯ 2ಒಣಗಿದ ಮರ ಎಲೆಯಿಲ್ಲದ ಬಳ್ಳಿ |ಬಣತಿಗೆ ಪುಟ್ಟಿದ ವನದಲ್ಲಿ ||ಕ್ಷಣ ಮುನ್ನರಿಯದೆ ಅದರ ಆಹಾರಕೆ |ಫಣಿಯ ಮೆಟ್ಟಿದನ ಕುಣಿಸಿದರಯ್ಯ 3ಮಾವನೊಡನೆ ಮನೆಮಾಡಿ ಗೋಕರ್ಣದಿ |ಆ ವುರಗನ ಮೇಲ್ಮಲಗಿದನ ||ಮೂವರ ಮೊಲೆಯುಂಡ ಮೂಲೋಕವರಿಯದ |ಮೂವರಣ್ಣನೆಂದು ಕುಣಿಸಿದರಯ್ಯ 4ಗೋಕುಲದೊಳಗಿನ ಗೋಪಿಯರೆಲ್ಲ |ಏಕಾಂತದಿ ತಮ್ಮೊಳು ತಾವು ||ಶ್ರೀಕಾಂತನ ನಮ್ಮ ಪುರಂದರವಿಠಲನ |ಏಕ ಮೂರುತಿಯೆಂದು ಕುಣಿಸಿದರಯ್ಯ 5
--------------
ಪುರಂದರದಾಸರು