ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವದೇವ ನಿನಗೆ ನಾ ಕೈಮುಗಿದು ಬೇಡ್ವೆ ಕಾಮಜಪಿತ ಎನ್ನ ಕಾಯಮೋಹ ಬಿಡಿಸೈ ಪ ಮಸಣಬುದ್ದಿಯ ಮರೆಸು ಪುಸಿನುಡಿಯ ಪರಿಹರಿಸು ವಸನ ಒಡವ್ಯೆಂದೆಂಬ ವ್ಯಸನ ಕಡೆಹಾಯ್ಸು ದಿಸೆಗೆಡಿಸಿ ಬಳಲಿಸುವ ಹಸಿವು ತೃಷೆಯನಡಗಿಸಿ ಹಸನಗೆಡಿಸುವ ಮಮ ರಸನೆರುಚಿ ಕೆಡಿಸು 1 ಅಳದ್ಹೋಗ್ವ ಇಳೆಸುಖದ ಹಲುಬಾಟವನೆ ಬಿಡಿಸು ಮಲಿನಸಂಸಾರಮಾಯ ಕಳವಳಿಕೆ ತಪ್ಪಿಸು ಸಲೆ ಸಾಧುಸಂತತಿಯ ಬಳಗದೊಳು ಕೂಡಿಸು ಹೊಳೆಯಮನಸಿನ ಸಕಲ ಚಲನೆ ದೂರೆನಿಸುತ 2 ದೋಷರಾಶಿಯ ತೊಡೆದು ಮೋಸಪಾಶವ ಕಡಿದು ಆಸೆ ನಾಶಗೈದು ನಿರ್ದೋಷನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಸಾಸಿರ ನಾಮವೆನ್ನ ಧ್ಯಾಸದಲಿ ಸ್ಥಿರನಿಲಿಸಿ ಪೋಷಿಸನುದಿನದಿ3
--------------
ರಾಮದಾಸರು