ಪಿಡಿದೆಲೆ ಬಿಡಬೇಡ್ಹುಡುಗಹುದು ಇದು
ಕೆಡದ ವಸ್ತು ನಿಜ ಪಿಡಿ ಬಿಗಿದು ಪ
ಎಡರುತೊಡರಿಗೆದೆಒಡೆಯದೆ ದೃಢವಿಡಿ
ಜಡಭವ ತೊಡರನು ಕಡಿಯುವುದು ಅ.ಪ
ಭಕ್ತಿಯಿಂದೆಂಬುವ ಗೂಟ ಜಡಿದು ಮಹ
ಸತ್ಯವೆಂದೆಂಬ ಹಗ್ಗ ಸುತ್ತ ಬಿಗಿದು
ಚಿತ್ತೆಂಬ ಗಂಟ್ಹಾಕು ಎತ್ತವದಲದಂತೆ
ನಿತ್ಯ ಮುಕ್ತಿಸುಖ ಕೊಡುತಿಹ್ಯನು 1
ಸುಜನ ಸಂಗವೆಂಬ ಮಂದಿರದಿ ಮಹ
ಭಜನವೆಂದೆಂಬುವ ಗೋದಿಲದಿ
ನಿಜಧ್ಯಾನ ಮೇವು ಹಾಕಿ ಭುಜಶಾಯಿಪಾದ
ನಿಜಧೇನುವನು ಕಟ್ಟಿ ಮಜದಲಿ ನಲಿಯೊ 2
ಆರಿಗೆ ಸಿಗದಂಥ ಒಡವೆಯಿದು ಸರ
ದಾರನೆ ನಿನಗೆ ಸಿಕ್ಕಿಹ್ಯದು
ಸಾರಸೌಖ್ಯಕ್ಕೆ ಮೂಲಧಾರನಾಗಿಹ್ಯ
ಧೀರಶ್ರೀರಾಮಪಾದ ಶೂರನೆ ಬಿಡದಿರು 3