ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇಎನ್ನ ಮನವೆಂಬ ಗಂಡನ ಪರಿಯ ಪೇಳುವೆನೆ ಪ
ಅಡಕಿಲಿಗಳನೆಲ್ಲವ ಹುಡುಕುವನೇಅಡುಗೆಯ ಮಡಕೆಯನೆಲ್ಲ ಒಡೆದನೇಗುಡುಗುಟ್ಟುತ ಯಾವಾಗಲೂ ಇಹನೇಗುಡ್ಡವನೇರುವನೇ 1
ಮುನಿಸಿಕೊಂಡು ಮೇಲಟ್ಟದಿ ಕೂರುವನೇಘನ ಹುಟ್ಟನೆ ಮುಂದಿಹನೇಮನೆಯಲೆಲ್ಲರ ಬಡಿವನೇಮತವನು ಕೆಡಿಸಿದನೆ 2
ದುಡಿವ ಕೋಣನನು ಕೊಂದನೇಕಡಿದುಬಿಟ್ಟನೆ ಕಾಯುವ ನಾಯನುಪುಡಿ ಮಾಡಿದ ಕಟ್ಟುವ ಹಗ್ಗವನೇ ಪಂಕ್ತಿಯ ಸೇರದಿಹನೆ 3
ಒತ್ತೆಯ ಒಡವೆಯನೆ ತಿಂದನೇಬತ್ತಿಯ ಹಿರಿದಾಗೆ ಚಾಚುವನೇಕಿತ್ತು ಒಗದನೇ ದೇವರನೇ ಕಡಿದನೇ ಮರವನ್ನೇ 4
ತ್ಯಜಿಸಿದ ನೆಚ್ಚಿದ ಮಡದಿಯನೇತ್ಯಜಿಸಿದ ಮೋಹದ ಮನೆಯನ್ನೇಭಜಿಸಿದ ಚಿದಾನಂದ ಗುರುವನ್ನೇನಿಜದಲಿ ಬೆರೆತನು ಅವರನ್ನೇ 5