ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇ ದಯಾಸಾಗರ ಸ್ವಾಮಿ ವೇದ ಮಾಧವ ಮುಕುಂದ ಮನುಮುನಿ ಪ್ರೇಮಿ ಪ ವೇದಗೋಚರ ಸಾಧುಸನ್ನುತ ನಾದಪ್ರಿಯ ಭವಬಾಧೆರಹಿತ ಭೇದಹರ ಜಗ ಪಾದ ಭಜಿಸುವೆ ಪಾಲಿಸೆನ್ನ ಅ.ಪ ಮದಗಜ ಮುದದಿಂದ ಪೊರೆದಿ ಪ್ರಭುವೆ ಮದಗಜಗಮನೆಯ ಮಾನದಿಂ ಕಾಯ್ದೆ ಪದುಮವದನೆಶಾಪ ಕಳೆದೆ ಕರುಣಿ ಸದಮಲಬಾಲನ ತಪಕೆ ನೀನೊಲಿದಿ ಸುದಯಹೃದಯ ಸುಸದನಪಾಲ್ಸಿದಿ ಸದಮಲಾಂಗನೆ ಪದುಮವದನ ಮುದದಿ ನಿಮ್ಮಡಿ ಪದುಮಗಳು ಎ ನ್ಹøದಯ ಮಂದಿರದಿರಿಸಿ ರಕ್ಷಿಸು 1 ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ ಸ್ಮರಿಪರಿಗೆ ದರುಶನಕೊಡುತಲಿ ನಡೆದಿ ತರುಣಿಯ ಎಂಜಲ ಸವಿದಿ ವನ ಚರನಿಗೆ ವಶನಾಗಿ ಅಭಯ ಪಾಲಿಸಿದಿ ಭರದಿ ದಕ್ಷಿಣಶರಧಿ ಹೂಳಿಸಿ ಮೆರೆವ ಲಂಕಾಪುರವ ಮುತ್ತಿದಿ ದುರುಳರ್ಹಾವಳಿ ದೂರಮಾಡಿ ಧರೆಯ ಭಾರವ ನಿಳುಹಿದಯ್ಯ 2 ನುಡಿಸಿದರೆನ್ನಿಂದಲಾವ ವಚನ ನುಡಿಸಿದ ಬಳಿಕದನು ನಡೆಸಿಕೊಡಭವ ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ ನ್ನೊಡಲೊಳಗದಂತೆಯಿರು ಅನುದಿನವು ಪೊಡವಿ ಮೂರನು ಒಡಲೊಳಿಟ್ಟಿಡೆ ಬಿಡದೆ ಆಳುವ ಒಡೆಯ ಶ್ರೀರಾಮ ದೃಢದಿ ನಿಮ್ಮಯ ಅಡಿಯ ನಂಬಿದೆ ಬಿಡಿಸು ಎನ್ನಯ ಮಂದಜ್ಞಾನವ 3
--------------
ರಾಮದಾಸರು