ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಯಶೋದೆಯ ನಂದ ಮುಕುಂದನೆಜೋ ಜೋ ಕಂಸಕುಠಾರಿ ಪ.ಜೋ ಜೋ ಮುನಿಗಳ ಹೃದಯಾನಂದನೆಜೋ ಜೋ ಲಕುಮಿಯ ರಮಣ ಅಪಹೊಕ್ಕುಳ ಹೂವಿನ ತಾವರೆಗಣ್ಣಿನಇಕ್ಕಿದಮಕರ ಕುಂಡಲದಜಕ್ಕುಳಿಸುವ ಕದಪಿನ ಸುಳಿಗುರುಳಿನಚಿಕ್ಕ ಬಾಯ ಮುದ್ದು ಮೊಗದ ||ಸೊಕ್ಕಿದ ಮದಕರಿಯಂದದಿ ನೊಸಲೊಳಗಿಕ್ಕಿದ ಕಸ್ತೂರಿ ತಿಲಕ |ರಕ್ಕಸರೆದೆದಲ್ಲಣ ಮುರವೈರಿಯೆಮಕ್ಕಳ ಮಾಣಿಕ್ಯ ಜೋ ಜೋ 1ಕಣ್ಣ ಬೆಳಗು ಪಸರಿಸುತಿರೆಗೋಪಿಅರೆಗಣ್ಣ ಮುಚ್ಚಿ ನೋಡಿ ನಗುತ |ಸಣ್ಣ ಬೆರಳುಗಳ ಬಾಯೊಳಗಳವಡಿಸಿಪನ್ನಗಶಯನ ತೊಟ್ಟಿಲಲಿ ||ನಿನ್ನ ಮಗನ ಮುದ್ದನೋಡು ಎಂದೆನುತಲಿತನ್ನ ಪತಿಗೆ ತೋರಿದಳು |ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸರನ್ನದ ಬೊಂಬೆಯೆ ಜೋ ಜೋ 2ನಿಡು ತೋಳ್ಗಳ ಪಸರಿಸುತಿರೆ ಗೋಪಿಯತೊಡೆಯ ಮೇಲ್ಮಲಗಿ ಬಾಯ್ದೆರೆಯೆ |ಒಡಲೊಳಗೀರೇಳು ಭುವನವಿರಲು ಕಂಡುನಡುಗಿ ಕಂಗಳನು ಮುಚ್ಚಿದಳು ||ಸಡಗರಿಸುತ ತಾನರಿಯದಂತೆಯೆಹೊಡೆ ಮರುಳಿ ಮೊಗವ ನೋಡುತಲಿಕಡಲಶಯನ ಮೊಗವ ನೋಡುತಲಿಕಡಲಶಯನ ಶ್ರೀ ಪುರಂದರವಿಠಲನುಬಿಡದೆ ನಮ್ಮೆಲ್ಲರ ರಕ್ಷಿಸುವ 3
--------------
ಪುರಂದರದಾಸರು