ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ ಬಡಿವಾರತನದಿಂದ ಕಡುದೈನ್ಯದೋರುವರು ಒಡಲೊಳಗಿನ ಹರಳು ಒಡೆದರಳುವಂತೆ ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ ಕಡುಪಾಪಿರೂಪಿನ ಮಡದಿಯರ ಮನವು 1 ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ ಘನಪಾಪಿ ವನಿತೆಯರ ಮನನಂಬಿಗಲ್ಲ 2 ತನ್ನ ಪುರುಷನಮುಂದೆ ಬಣ್ಣದಮಾತಾಡಿ ಹಣ್ಣಿಗೆತಂದವನ ತನ್ನೊಶದಲಿರಿಸಿ ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ ತನ್ನಯ ಅನುಕೂಲವನ್ನೆ ಸಾಧಿಪಳು 3 ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ ಭವ ಭವವ ತಿರುಗುವರು ಜೀವಘಾತಕಿಯರದಾವ ಭರವಸವೊ 4 ಹರಿದಿಯರ ಒಡನಾಟ ನರಕಕ್ಕೆ ಮೂಲವು ದುರಿತಕ್ಕೆ ತವರಿದು ಮರೆಮೋಸದುರುಲು ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ 5
--------------
ರಾಮದಾಸರು