ಆಳ್ವಾರಾಚಾರ್ಯ ಸ್ತುತಿಗಳು
1. ವಿಶ್ವಕ್ಸೇನ ಪ್ರಾರ್ಥನೆ
ಶ್ರೀನಾಥಜ್ಞಾಪ್ರಕಾರ ನಡೆಯುವ ಸೂತ್ರವತೀರಮಣ
ಮಾನಿತ ಪ್ರದಾನ ಮಂತ್ರೀ ಪೂಜಿಪೆ ವಿಘ್ನೇಶಾ ನಮಿಪೆ ಪ
ಬಿಳಿಯುಡೆ ತುಂಬಿದ ತಿಂಗಳ ಬೆಳಗಾ
ತೊಳಗುವ ನಾಲಕು ತೋಳುಗಳ
ಒಲಿದಿಹ ನಗೆಮೋಗ ವಿಷ್ಣು ನೆನೆವೆ
ಸುಲಭದಿ ಕಾರ್ಯವ ಗೈಸುವನೆ1
ದ್ವಿರದವಕ್ತ್ರತಾ ಮೊದಲಾಗಿರುವ
ಪರಿಜನ ನೂರ್ವರಿಂದೊಪ್ಪಿರುವೇ
ಪರಿಪರಿ ತಡೆಗಳ ತರಿದೋಡಿಸುತ
ಪೊರೆ ವಿಶ್ವಕ್ಸೇನಾಶ್ರಿತ ನಾನು 2
ಬಿಡುಗಣ್ಣರ ಬೆಡಗಿನ ಒಡಲುಳ್ಳ
ಕುಡಿನೋಟದ ತಾವರೆಗಣ್ಣ
ಪಿಡಿದಹ ಶಂಖ ಚಕ್ರ ಗದಾಯುಧ
ಒಡೆಯ ಮುಕುಂದ ದ್ವಾರನಿಲಯನೇ 3
ಬೊಮ್ಮ ಭವಸುರರು
ನಯದಿಂ ಮೊದಲಾರಾಧಿಪರು
ಶುಭ ಫಲದಾಯಕ