ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿ | ಪೋಷಿಸು ನೀ ಎನ್ನ | ಕರುಣಾರಸ ಪೂರ್ಣಾ ಪ ಶ್ರೀಶ ನೀನಲ್ಲದೆ | ಪೋಷಿಸುವರ ಕಾಣೇ | ಹುಸಿಯಲ್ಲ ಯನ್ನಾಣೆ ಅ.ಪ. ಗೋಪಿ ಜನರ ಪ್ರೀಯ | ಸುಮ್ಮನಿ ಜನ ಗೇಯಾಹೇ ಪರಮ ಪುರುಷ ತವ | ರೂಪ ಕಾಂಬುದೆಂದೂ | ಬಿನ್ನಪ ಸಲಿಸಿಂದೂ ||ಕಾಪಥ ಐಸದೆ | ಸುಪಧವ ನೀ ತೋರೋ | ಭಕುತ ಪೋಷ ಬಾರೋ |ದ್ರೌಪತಿಗಕ್ಷಯ | ವಸನವ ನೀನಿತ್ತು | ಕಳೆದೆಯೋ ಆಪತ್ತು 1 ಕಡಲ ಶಯನನೇ | ಮಡದಿ ಮಕ್ಕಳನ್ನ | ನಿನ್ನಡ್ಡಿಗ್ಹಾಕಿದೆನಿನ್ನಒಡಲಿಗಾಗಿ ದೈನ್ಯ | ಪಡಲಾರೆನೊ ಹರಿಯೇ | ಕೇಳೆನ್ನ ದೊರೆಯೇ ||ಮಡುವಿಲಿ ಮಕರಿಯ | ಬಿಡದೆ ಕಾಯ್ದ ಹರಿಯೇ | ಕರಿರಾಜನ ಪೊರೆಯೇಒಡಮೂಡಿ ಕಂಬದಿ | ದೃಡ ಭಕುತ ಜಂಗುಳಿಯ | ಪರಿಹರಿಸಿದೆ ಜೀಯ 2 ಪಾದ | ಲೀಲೆ ಬಹು ವಿನೋದ |ಪಾಪಿಯು ನಾ ನಿಜ | ಪಾವನ ನೀ ಕೇಳೋ | ನಾ ನಿನಗಡಿಯಾಳೋ ||ಗೋಪ ಗೋಪಿಯರ ಸ | ಲ್ಲಾಪಕೊಲಿದ ದೇವ |ಹೇ ಮಹಾನುಭಾವತಾಪ ಮೂರುಗಳ ಗುರು | ಗೋವಿಂದ ವಿಠಲ | ಪರಿಹರಿಪುದು ನಲ್ಲ 3
--------------
ಗುರುಗೋವಿಂದವಿಠಲರು
ಬರಿದೆ ಹಾಳು ಶರೀರ ಬಾಳು ಅರಿದಡಿದು ಮಹ ಟೊಳ್ಳು ಟೊಳ್ಳು ಪ ನಾರಿಪುರುಷರು ಮಾರಕದನದಿಂ ಸೇರಿ ಸುಖಿಸಲು ಜಾರಿದಿಂದ್ರಿಯ ಕಾರಣಾಗಿ ಮೂರುದಿನದಿ ತೋರಿ ಪೋಗ್ವಸಾರಮಯ 1 ಮಿಡುಮಿಡುಕಿ ಒಡಲಿಗಾಗಿ ದುಡಿದು ಮೂಢರಡಿಯ ಪಿಡಿದು ಬಿಡದೆ ರೋಗದೊಡನೆ ನರಳಿ ಪಡುತಕಷ್ಟ ಕಡೆಗೆ ಸಾಯ್ವ 2 ಪರರಸೇವೆ ನಿರುತಗೈದು ಪರಕೆ ಇಹ್ಯಕೆ ತಿರುಗಿ ತಿರುಗಿ ಗರುವದಿಂದ ಚರಿಸಿ ನಮ್ಮ ಸಿರಿಯರಾಮನ ಚರಣಕ್ಹೊಂದದ 3
--------------
ರಾಮದಾಸರು
ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ | ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಪ ಒಡಲಿಗಾಗಿ ಒಬ್ಬನ ಸಂಗಡ ಹೋಗಲು | ಕೊಡುವವನು ಇಲ್ಲೆಂದು ಪರಿಹರಿಸುವ || ಸುಡು ಈ ಶರೀರವ ಬಳಲಲಾರೆನೊ ವಿಷದ, ಮಡುವನಾದರು ಧುಮುಕಿ ಮರಣವಾಗುವೆ ರಂಗಾ 1 ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ | ಹುತವಾಗುವನು ಎನ್ನ ನೋಡುತಲಿ || ಪರಿ ಬದುಕಿ ಇಹೋದಕಿಂತ | ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ 2 ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ | ಒಲ್ಲೆನೋ ಸಾಕು ಈ ನರ ಜನ್ಮವು ಸಿರಿ ವಿಜಯವಿಠ್ಠಲ ನಿ- | ನ್ನಲ್ಲಿ ದೂತರ ಸಂಗದಲ್ಲಿ ಸುಖಬಡಿಸೊ 3
--------------
ವಿಜಯದಾಸ
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು