ಯಾಚಕ ಜನ್ಮಾ ಯಾಕೆ ಬರೆದನೊ ಬ್ರಹ್ಮಾ
ನಾಚಿಕೆಯಾಗಿ ನಷ್ಟಾಗುವಂತೆ ಸ್ವಧರ್ಮಾ ಪ
ಒಡಲಾಶೆಗಾಗಿ ಹೊಲೆಯನ ಹೊಗಳಬೇಕು
ಕಡುಲೋಭಿಯಾದ ಅರಸನೋಲಗವೆ ಸಾಕು
ಬಡತನವೆಂದು ಪರರ ಸೇರುವದೆ ಸಾಕು
ಒಡಲು ಪರಾಕು 1
ತ್ಯಾಗದಿ ಕರ್ಣಾ ಭೋಗದಿ ದೇವೇಂಧ್ರನೆಂದು ಕೊಂಡಾಡಲು
ಪೋಗಿ ಬಾ ನಾಳೆ ಎಂದು
ಎನುತ ಪೇಳಲಾಗಿ ಬೈದಾಡುತ ಬಂದು
ಬಳಲುತಿರಲಾಗ ಚಿತ್ತಕ್ಕೆ ತಂದು 2
ಪರ್ವತವನ್ನು ಕಂಡು ಕೈತಿಕ್ಕಿ ಕೋರಿದೆ
ಬರಿದೆ ಇಂಥಾ ಗರ್ವದಿಂದುಕ್ಕಿ ಏರಿದೆ
ಗುರುವಿಮಲಾನಂದ ಸರ್ವೋತ್ತಮನ ನೆನೆಯ ಬಾರದೇ 3