ಬಾಲಲೀಲ ಲೋಲ ಕೃಷ್ಣನ|ನೆನೆವೆನಾ|
ಬಾಲಲೀಲ ಲೋಲ ಕೃಷ್ಣ ಈ ಲೋಕಾಳಿ ಪಾಲಿಪಾ|ವಿ-
ಶಾಲ ಬಾಲ ನೀಲಗಾತ್ರನಾ|ನೆನೆವೆನಾ ಪ
ಪಡುಲ ಕರಿಯಕಣ್ಣಲಿಟ್ಟರು|ಒಡನೆ ಕೇಳಿ ಕರ್ತನೃಪನ|
ಮಡದಿ ಜನಕನಹಿತ ಸರಿಕನಾ|ವೈರಿಯ
ಒಡಲಲುದಿಸಿದಾತ್ಮಭವನ|ಸಡಗರದಿ ಕಿರಿಯ ತಮ್ಮನ
ಪಡೆದ ಜನನಿಯಣ್ಣ ಕಂದನಾ||ನೆನೆವನಾ 1
ಮುದದಲಿಂದ ಮಸುಧೆಯನ್ನು|ಎದೆಯಲೊತ್ತಿ ನಡೆವನಿಂದ|
ಒದಗಿ ತನ್ನ ಶರೀರ ತೊರೆದನಾ|ತಂದೆಯಾ
ವಿದಿತ ಮುತೈಯ್ಯನ ಮಗನ|ಚದುರತಮ್ಮನರಸಿ ಪಡೆದ
ಉರದಿ ಮಗಳ ಪ್ರಾಣದರಸನಾ||ನೆನೆವೆನಾ 2
ನೃಪನಬಿಂಕ ಶಿಷ್ಯರಿಂದ|ಅಪಹರಿಸಿದವನ ಮಗನ|
ಚಪಲ ಬಾಣ ಬರಲು ಸ್ಥಳವನು|ತಪ್ಪಿಸಿ
ವಿಷದ ಹರಿಸಿ ಕಾಯ್ದೆನೈವರ|ನಿಪುಣ ಮಹೀಪತಿನಂದನ|
ಕೃಪೆಲಿ ಪೊರೆವ ಉತ್ತುಮೊತ್ಮನಾ||ನೆನೆವೆನಾ 3