ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ ಪ
ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು
ಸುಮ್ಮನೆ ಕೂತಳ ಗುಮ್ಮವ್ವ ಅ.ಪ
ಆರುಮೂರುಮರ ರೊಟ್ಟಿಗಳು ಒಂದೆ
ಸಾರಿಗೆ ಮುದ್ದೆ ಮಾಡಿ ನುಂಗಿದಳು
ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ
ವಾರೆಲಿ ಕೂತು ಸೂರೆ ಮಾಡಿದಳು 1
ಎತ್ತಿ ತುಪ್ಪದ ಮೂರು ಡಬ್ಬಿಗಳು
ಕುತ್ತಿಗ್ಗೆ ಬೀಳಹಾಗೆ ಕುಡಿದಳು
ಹತ್ತ್ಹೆಡಿಗ್ಹೋಳಿಗೆ ಪತ್ತೆಯಿಲ್ಲದೆ ತಿಂದು
ಮೆತ್ತಗೆ ಸುತ್ತಿಕೊಂಡು ಮಲಗಿದಳು 2
ಒಡಲನಿಲ್ಲದೆ ಕಾಯುವಳು ಇವಳು
ಇಡೀ ಬ್ರಹ್ಮಾಂಡವ ನುಂಗಿದಳು
ಪಿಡಿದೊಕ್ಕುಡಿತೆಲಿ ಕಡಲೇಳನು
ಕುಡಿದೊಡೆಯ ಶ್ರೀರಾಮನ ಕೂಡಿದಳು 3