ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ ಉಚ್ಚೆಕುಣಿಯಲಿ ಬಂದು ಭವದ ಮಾಯಾ ಜಗವ ನೆಚ್ಚಿ ಸಕಲ ಮರೆದು ಮುಂದಿನ ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು ಮಲದ ಭಾಂಡದಿ ಸಿಲುಕಿ ಅನುದಿನ ಮಲಿನಗುಣದಿಂ ತೊಳಲಿಬಳಲುತ ಗಳಿಸಿಕೊಂಡು ಬಂದ ಸಮಯ ಕಳೆದುಕೊಳ್ಳುವಿಯಲ್ಲೋ ಪಾಪಿ 1 ಹಿಂದೊಂದು ಮುಂದೊಂದು ವಂದಿಸಿ ನುಡಿಯುತ ಮಂದ ನೀನಾಗಿ ಹಂದಿಯು ಮಲ ಮೆದ್ದತೆರದಿ ಕುಂದಿಪೋಗುವ ಬಂಧುಬಳಗಕೆ ನಂದುನಂದೆಂಬ ವಿಷಯಲಂಪಟ ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ 2 ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ ಒಡಲಕಿಚ್ಚಿಗೆ ಬಲು ಮಿಡುಕುತಲಿ ಕೆಡುವ ತನುವಿನ ಮೋಹ ಬಿಡದೆ ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ ನಡಿಯ ನಂಬದೆ ಮಡಿದುಪೋಗುವಿ ಕಡೆಗೆ ಹೆಡತಲೆಮೃತ್ಯುಗೆದೆಯಾಗಿ 3
--------------
ರಾಮದಾಸರು
ಇಷ್ಟುಪಾಪವನು ಮಾಡಿದುದೆ ಸಾಕೊ |ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
--------------
ಪುರಂದರದಾಸರು