ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕನಾದ ಹರಿಗುರುಗಳ ಬಿಟ್ಟು ನರಸ್ತುತಿಗಳನು ಮಾಡಬಾರ್ದು ಪ ಸಿರಿವುರಿಯಲಿ ಸಿಕ್ಕಿ ನರಹರಿ ಚರಣವ ಬಿಡಬಾರ್ದು ಅ.ಪ. ಒಂಟಿಲಿ ಸತಿಯನು ಪತಿವ್ರತೆ ಎನ್ನುತ ಬಿಡಬಾರ್ದು ನೆಂಟೆಗೆ ಮಿತ್ರಗೆ ಸೂಳೆಗೆ ಸಾಲವ ಕೊಡಬಾರ್ದು ತುಂಟರ ಕುಡುಕರ ಜಾರರ ನೆರೆಹೊರೆ ಇರಬಾರ್ದು ಒಂಟಿಯ ಊಟವ ಪಯಣವ ಕಲಹವ ಬೆಳೆಸಬಾರ್ದು 1 ಮಾವನ ಮನೆಯಲಿ ದುಡಿಯದ ಅಳಿಯನು ನಿಲ್ಲಬಾರ್ದು ಕೋವಿದರಡಿಗಳ ಸುಜನರ ಸಂಗವ ಬಿಡಬಾರ್ದು ಜೀವರು ಹರಿ ಸಮ ಮಾಯವೆ ಜಗಸರಿ ಎನಬಾರ್ದು ದೇವನ ದೂಡುತ ವಿಷಯವ ಹರಿಸುತ ಕೆಡಬಾರ್ದು 2 ಮನೆಕದ ಮುಂದಿಲಿ ಪತಿವ್ರತೆ ತಾನು ನಿಲಬಾರ್ದು ತನುವನು ತೋರುತ ಸೆರೆಗನು ಬೀರುತ ನಡಿ ಬಾರ್ದು ವನಿತೆಯ ಸಂಗಡ ಗುಟ್ಟಿನ ವಿಷಯವ ನುಡಿಬಾರ್ದು ಮಣಿಯದೆಲೆಂದಿಗು ಹಿರಿಯರ ಚರಣಕೆ ನಡಿಬಾರ್ದು3 ನುಡಿಯುವ ತೆರೆದಲಿ ನಡೆಯದ ಮನುಜನ ನಂಬಬಾರ್ದು ತಡೆಯದೆ ಕೋಪವ ದುಡುಕುವ ನೆಡೆಯಲಿ ನಿಲ್ಲಬಾರ್ದು ಬೆಡಗನು ತೋರುವ ನಾರಿಯ ಕಡೆಯಲಿ ನೋಡಬಾರ್ದು ದುಡುಕುತ ಲೊಡನೆಯೆ ಯಾವುದು ನಿಶ್ಚಯ ಮಾಡಬಾರ್ದು 4 ಕೆಟ್ಟರೆ ನೆಂಟರನೆಂದಿಗು ಮಾನಿಯು ಸೇರಬಾರ್ದು ಕಷ್ಟವು ಬಂದೆಡೆ ಧೈರ್ಯವನೆಂದಿಗು ಬಿಡಬಾರ್ದು ಗುಟ್ಟಿನ ಮಂತ್ರವು ಘಟ್ಟಿಲಿ ಜಪಿಸುತ ಕೂಗಬಾರ್ದು ಶಿಷ್ಯರಿಗಲ್ಲದೆ ದುಷ್ಟಗೆ ಶಾಸ್ತ್ರವ ನುಡಿಬಾರ್ದು 5 ತಿಂಡಿಯ ಚಪಲವ ನರಹರಿ ತೊಂಡನು ಮಾಡಬಾರ್ದು ಹೆಂಡರ ಭಜಕನ ಜಾರನ ನುಡಿಗಳ ನಂಬಬಾರ್ದು ಸತಿ ಸಹ ಸರಸವ ಮಾಡಬಾರ್ದು ಮಂಡೆಲಿ ಚರಣದಿ ಬರಿತೆರ ವೆಂದಿಗು ಹೋಗಬಾರ್ದು 6 ಹುಡುಗರ ಶಾಲೆಗೆ ಕಲಿಯಲು ಹುಡುಗಿಯ ಕಳಿಸಬಾರ್ದು ಮಡದಿಗೆ ಭಂಟಗೆ ಒಡನೆಯೆ ಸದರವ ನೀಡಬಾರ್ದು ಹುಡುಗಿಯ ಕಾಣದ ಜನರಿಗೆ ದೇಶಕೆ ಕೊಡಬಾರ್ದು ನಡೆನುಡಿ ನೋಟ ವಿಶೇಷದಿ ನೇಮವನಿಡದಲೆ ಇರಬಾರ್ದು 7 ಯಾಚಕ ಸವಿನುಡಿ ವಿನಯ ವಿವೇಕವ ಮರಿಬಾರ್ದು ಯೋಚನೆ ಗೈಯದೆ ನೆರೆಹೊರೆ ಹಗೆತನ ಗಳಿಸಬಾರ್ದು ಒಗೆತನ ಹುಳುಕನು ಹಾಕಬಾರ್ದು ಮೋಚಕ ನಿಜ ಸಖ ಹರಿತಾನೆಂಬುದ ಮರಿಬಾರ್ದು 8 ದೊಡ್ಡವರೆಡೆಯಲಿ ಹುಡುಗರು ಸರಸವ ಮಾಡಬಾರ್ದು ದುಡ್ಡಿನ ಜನಗಳನೆದುರಿಸಿ ಬಡವನು ನಿಲ್ಲಬಾರ್ದು ಸಡ್ಡೆಯ ಮಾಡದೆ ಅಡ್ಡಿಗಳೆಲ್ಲವ ಸರ್ವರಿಂ ದೊಡ್ಡವ ಶ್ರೀ ಕೃಷ್ಣವಿಠಲನ ಭಜನೆಯ ಬಿಡಬಾರ್ದು 9
--------------
ಕೃಷ್ಣವಿಠಲದಾಸರು
ಪೋಗದೋ ಛಳಿ ಪೋಗದೋ ಪ ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆಬಿಳಿಯ ಕಂಬಳಿ ಪೊತ್ತರೆ ಪೋಗದೋನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟುಕಳಸ ಕುಚದ ಮೇಲೆ ಕೈಯಿಕ್ಕಿದಲ್ಲದೆ1 ಬಡನಡುವಿನ ಬಟ್ಟಕುಚದ ಕಾಮಿನಿರನ್ನೆಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲುಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ2 ಛಳಿಗಾರದೆ ವಿಷ್ಣು ಛಳಿಗಾರದೆ ಶಿವಘಳಿಲನೆ ಗಂಗೆಯ ಬೀಸಾಡಲುಛಳಿಯ ಕಾರಣವೇನು ನೆಲೆಯಾದಿಕೇಶವತಿಳಿದು ನೀ ಹೇಳಯ್ಯ ಕಳಿಯ ವಿವರವನು 3
--------------
ಕನಕದಾಸ
ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
--------------
ಪುರಂದರದಾಸರು