ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರು ಜಯೇಶವಿಠಲನೆ ಪಾಲಿಸಯ್ಯ ಈ ಸತಿಯ ಕರಪಿಡಿದು ಪ ಮೂರ್ತಿ ಸರ್ವೇಶ ಶರ್ವಸಖ ಸರ್ವತ್ರ ಒಡನಿದ್ದು ಸಲಹು ಸತತ ಉರ್ವಿಯಲಿ ಸತ್ಕೀರ್ತಿ ಸಂಪದದಿ ನಿಲಿಸಿವಳ ನಿತ್ಯ ತೃಪ್ತ 1 ಗುಣವಂತಳನು ಮಾಡು ಗುಣ ಗಣಾಂಬುಧಿ ದೇವ ಘನವೆನಿಸು ಈ ಸತಿಯ ಸಂಸಾರವೆಲ್ಲ ಅನಿಲ ಜನರಲಿ ನಿಲಿಸು ಅನುಕೂಲ ನೀನಾಗಿ ದನುಜಾರಿ ಸಂಪದವ ಹರುಷದಲಿ ಬೆಳೆಸುವುದು 2 ಶೀಲ ಭಕ್ತಿ e್ಞÁನ ಸತತ ಸಜ್ಜನ ಸಂಘ ಮೇಲಾಗಿ ನೀಡುವುದು ಮೈದುನನ ಸೂತ ಪಾಲುಸಾಗರದೊಡೆಯ ಜಯೇಶವಿಠಲನೆ ಕೊರತೆ ಇಲ್ಲದೆ ನೀಡು ಕಲ್ಯಾಣ ಈ ಸತಿಗೆ 3
--------------
ಜಯೇಶವಿಠಲ