ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮ ಬೆನ್ನ್ಹತ್ತಿ ಕಾಡಲು ನೀ ಮಾಡುವುದೇನೊ ರಂಗ ಪ ಕೊಟ್ಟು ಕುದಿದೆನು ಮನದಿ ಇಟ್ಟ್ಹಂಗಿಸಿದೆ ಜವÀದಿ ಬಿಟ್ಟುಂಡೆನತಿಥಿಗಳೆಷ್ಟೆಷ್ಟೋ ನಾನು ಕೆಟ್ಟ ಕೃತ್ಯವ ಮಾಡಿ ಕೊಟ್ಟೆ ಪರರಿಗನಿಷ್ಟ ನಿಷ್ಠವಂತರ ಕಂಡು ನಿಷ್ಠೂರವಾಡಿದೆ 1 ಮತಿಭ್ರಷ್ಟನಾಗಿ ಪರಸತಿಯರಿಗೆ ಮನಸೋತೆ ಇತರ ವನಿತೆಯ ಗರ್ಭ ಪತನಗೈಸಿದೆನೊ ಕೃತಿಮಥನದಿ ಬಲುಹಿತಬೋಧವನೆ ಬೋಧಿ ಸುತ ನಾಶಗೈದೆನ್ನಹಿತಕಾಗಿ ಪರರ 2 ಕೊಡುವರಿಗೆ ಕಿಡಿಯಿಟ್ಟೆ ಬಡವರನು ಬಳಲಿಸಿದೆ ಒಡನುಡಿದ ಭಾಷೆಯ ನಡೆಸಲಿಲ್ಲೊಂದು ಒಡಗೂಡಿರ್ದರರೊಳು ಕೆಡಕುಹುಟ್ಟಿಸಿ ನಾನು ಜಡತನದಿ ದಿನಗಳೆದೆ ಕಡುಭ್ರಷ್ಟನಾಗಿ 3 ಪರಧನಪಹರಿಸಿದೆ ಪರರ ಗೃಹ ಮುರಿದೆನು ವರ ಮಾತಾಪಿತರ ಬಲ್ಪರಿಯಿಂ ನೋಯಿಸಿದೆ ಗುರುಹಿರಿಯರ ಜರೆದೆ ಪರನಿಂದೆಗೆಳಿಸಿದೆ ಗರುವದಿಂ ಚರಿಸಿದೆ ಶರಣಜನರೊಂದಿಸದೆ 4 ಕೃಪಣತ್ವ ಕಳಿಲಿಲ್ಲ ಚಪಲ ಚೇಷ್ಟಳಿಲಿಲ್ಲ ಚಪಲಾಕ್ಷನ ದಿನದಿ ಉಪವಾಸ ಗೈಯಲಿಲ್ಲ ಸುಪಥದಿ ಮನವಿಟ್ಟು ಶಪಿಸುತಲೆಡೆವಿಡದೆ ಜಪಿಸಿ ಶ್ರೀರಾಮಪಾದ ಕೃಪೆಯ ಪಡೆದವನಲ್ಲ 5
--------------
ರಾಮದಾಸರು