ಥಳ ಗುಟ್ಟೊಳುತೊಬ್ಬಳೆವಾಗೆದ ತಾ
ವಳಗುಟ್ಟಲೆ ದಟ್ಟದ ಬೆಳಗು ತಾಂ
ತಿಳಿಗೊಟ್ಟರೆ ಸದ್ಗುರು ಭಾಸುದು ತಾ
ಕಳೆಮುಟ್ಟಿದು ನೋಡಲು ಶಾಶ್ವತ 1
ಅರಿಯೊ ಸುರಿಯೊ ಪರಮಾಮೃತ
ಬೆರಿಯೊ ಗುರುವೆಂದು ನೀ ಸುಗುರುತಾ
ಜರಿಯೊ ಮರಿಯೊ ಮದಗರ್ವನೆ ತಾ
ನೆರಿಯೊ ಗುರುಪಾದಕೆ ನೀ ತ್ವರಿತ 2
ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ
ಅಳಿ ತರ್ಕದ ಮಾತಿನ ಗರ್ವನೆ ತಾ
ತೊಳಿ ನರ್ಕಕೆ ಬೀಳುವ ತಾಮಸ ತಾ
ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3
ಬಿಡು ಮರ್ಕಟ ಬುದ್ಧಿಯ ಭಾವನೆ ತಾ
ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ
ಸುಡು ನರ್ಕಕೆ ಬೀಳುವ ಪಾಶÀವ ತಾ
ತೊಡು ಮರ್ಕಟವಾದ ಸದ್ಗುಣ ತಾ 4
ಹಿಡಿಯೊ ಪಡಿಯೊ ದೃಢಭಾವನೆ ತಾ
ಜಡಿಯೊ ಒಡನೆ ಗುರುಪಾದನಿ ತಾ
ಕಡಿಯೊ ಬಿಡದೆ ಭವಬಂಧನ ತಾ
ಅಮೃತ 5
ನಡಿಯೊ ನುಡಿದಂತೆನೆ ಸನ್ನಮತ
ಹಿಡಿಯೊ ಪಡೆದಂತೆನೆ ಪಾದವ ತಾ
ಇಡದಂತೆನೆ ತುಂಬೆದ ಸದ್ಘನ ತಾ
ಕಡೆಗಾಂಬುದು ನೋಡಿದು ಶಾಶ್ವತಾ 6
ತಿಳಿಯೊ ಬಳಿಯೊ ಒಳಗುಟ್ಟನೆ ತಾ
ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ
ಕಳಿಯೊ ಅಳಿಯೊ ಅನುಮಾನವ ತಾ
ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7
ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ
ಥಳಗುಟ್ಟುದು ಸಾಸಿರ ಪದ್ಮ ದಳ
ನೆಲೆಗೊಂಡರೆ ವಾಗುವ ತಾ ಸಫಲಾ
ತಿಳಕೊಂಬುದು ಸದ್ಗುರು ಸ್ವಾಮಿ ಬಲ 8
ಬಿಡಬಾರದು ಸಂಗತಿ ಸಜ್ಜನರ
ಹಿಡಿಬೇಕಿದು ಒಂದೇ ನೋಡಿ ಸ್ಥರ
ಅಡಿ ಇಟ್ಟನೆ ಬಾಹುದು ಪುಣ್ಣಿದರಾ
ಪಡಕೊಂಡರೆ ಅಹುದು ಇಹಪರ 9
ತಡಮಾಡದೆ ನೋಡುವುದೀ ಸುಪಥ
ಪಡಿಬೇಕಿದು ಒಂದೇ ಸುಸ್ವಹಿತ
ಒಡಗೂಡದೆ ಬಾರದು ಕೈಗೂಡಿ ತಾ
ಎಡಬಲಕೆ ತುಂಬಿದೆ ತುಳುಕುತ 10
ಜಾಗರ ತಾ
ಎಡಿಎಡಿಗೆ ಸಂದಿಸಿ ತುಂಬಿದೆ ತಾ
ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ
ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11