ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು ಇಂದು ಮುಖಿಯರು ಬಂದು ನೆರದು ಕಂದರ್ಪನಯ್ಯಗೋವಿಂದ ಮುಕುಂದನೊಳು ದ್ವಂದ್ವದಿಂದೊಲಿದು ವಸಂತವಾಡಿದರೂ ಪ ನವರತ್ನ ಖಚಿತ ಮೋಹನದ ಮಂಟಪದಲ್ಲಿ ನವಕುಸುಮ ಫಲಗಳನು ಕಟ್ಟಿದರು ನಲವಿನಲಿ ನವಮೋಹನಾಂಗಿಯರು ನವರಸ ಪ್ರೌಢೆಯರು ನವನೀತ ಚೋರನನು ನಿಲಿಸಿ ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ 1 ಕಳಹಂಸ ಗಮನೆಯರು ತಳಿರಡಿಯ ನೀರೆಯರು ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು ಅಳವಟ್ಟ ಚಲುವೆಯರು ನಳಿನನೇತ್ರನಿಗೆ ಕಮ್ಮಲರ ಸೂಸಿದರೂ 2 ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು ಘಣಿರಾಜಶಯನ ಬಾಬಾಯೆಂದು ಪ್ರೇಮದಿ ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು ಪ್ರಣವಗೋಚರಗೆ ಚಂದನವ ಮಾಡಿದರೂ 3 ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು ತ್ತುವರಿಯುತ್ತ ಹಾಹಾಯೆಂದು ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ 4 ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು ಸುರರು ಪೂಮಳೆಗರೆದು ಹಾಯೆಂದು ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ ಪೊಂಬಟ್ಟೆಯಂ ಪಿಡಿದು ಸರಸದಿ ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು ಸಂಭ್ರಮದಲೋಕುಳಿಯನಾಡಿದರು 5
--------------
ಕವಿ ಲಕ್ಷ್ಮೀಶ
ಕೃಷ್ಣ ರುಕ್ಮಿಣಿ ವಿವಾಹದೈದು ದಿನದಲ್ಲಿ ಅರ್ಥಿ(ಯಿಂ)ಂದೋಕುಳಿಯನಾಡಿ ಕುಂಕುಮ ಗಂಧ ಬುಕ್ಕಿ ್ಹಟ್ಟಲೂ(ಲುರು?) ಟಣಿಯ ಮಾಡಿ ಆರತಿನೆತ್ತಿ ಮುತ್ತೈದೇರು ಪಾಡಿ ವೀಳ್ಯಗಳ ನೀಡಿ ಸರ್ಪಶಯನನು ತನ್ನ ಸತಿಯ ಎತ್ತಿ ಬರುವೋ ಕಾಲದಲ್ಲಿ ಚಿಕ್ಕ ಸುಭದ್ರೆ ತಾ ಬಾಗಿಲು ಕಟ್ಟಿ ತಾ ನಗುತ ನುಡಿದಳು 1 ಪಟ್ಟದರಸಿಕೂಡ ಮತ್ತೆಲ್ಲಿ ಪಯಣ ಈ ವಾರ್ತೆ ಹೇಳುವುದೆನಗೆ ಕೇಳುವೆ ಕೊಟ್ಟು ಎನಮನ ಕಾಮಿತಾರ್ಥವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 2 ನಾರಿಮಣಿಯೆ ನವರತ್ನದ ಹೆರಳು ಬಂ- ಗಾರ ರಾಗಟೆಯು ಗೊಂಡ್ಯ ಕಂಕಣ ವಂಕಿ ದ್ವಾರಾ ಹರಡಿಯು ಚೆಂದ ಒಪ್ಪುವ ಗೆಜ್ಜೆ ನಾಗಮುರಿಗೆಯು ಕಾಲ ಪೈಜಣ ಗೆಜ್ಜೆ ರುಳಿ ವೈಡೂರ್ಯದ್ವೊಡ್ಯಾಣವನೆ ಮಾಣಿಕ್ಯದ್ವಾಲೆ ಮೋಹನ್ಮಾಲೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 3 ಪಚ್ಚಮಾಣಿಕದ ಗೊಂಡ್ಯಗಳು ಬಾಜುಬಂದು ರತ್ನಹ್ಹೆರಳುಬಂಗಾರ ಕಂಕಣವಂಕಿ ಹಸ್ತಕಡಗವು ದ್ವಾರ್ಯ ಪುತ್ಥಳಿ ಏಕಾವಳಿಯ ಸರ ಚಿಂತಾಕು ಸರಿಗೆ ತೆತ್ತಿಸಿಯರಚಂದ್ರರಾಗಟೆÉ ಮತ್ತೆ ಎನಗಮ್ಮಯ್ಯಕೊಡುವಳು ಅರ್ಥಿಯಿಂದೀಗೆನ್ನ- ಮನೋರಥ ದಂiÀiಮಾಡಣ್ಣಯ್ಯ ಶ್ರೀಕೃಷ್ಣಯ್ಯ 4 ಹರದಿ ನಿನಗೆ ಹವಳದ ಕಾಲ್ವಜ್ರದ ಮಂಚ ಜರದ ಸುಪ್ಪತ್ತಿಗೆಯು ಹಾಸಿಕೆ ಲೋಡು ವರಪೀಠ ವಸನಂಗಳು ಚ- ಪ್ಪರ ಮಂಚಕ್ಕೊಲೆವೋ ಮುತ್ತಿನ ಗೊಂಚಲು ರವಿಪೋ- ಲ್ವ ರಥವು ಕರಿತುರಗ ಕರೆವೆಮ್ಮೆ ಗೋವ್ಗಳು ತರತರದ ಛತ್ತರಿಗೆ ಚಾಮರ ಜರತಾರಂಚಿನ ಸೀರೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 5 ಪನ್ನಂಗಶಯನ ಕೇಳೆನ್ನ ಗಲ್ಲದಲೊಪ್ಪೋ ಸಣ್ಣ ಮುತ್ತಿನ ಗೊಂಚಲು ದ್ರಾಕ್ಷಿಯ ಬಳ್ಳಿ ಹೊನ್ನಾ ್ವಲೆ ಸರಪಳಿಯು ಹೊಸ ಪ್ರೀತಿಯಲಿನ್ನು ನಾ ಬೇಡಿದ್ದು ಕೊಡುವನು ಮನ್ಮಥನ ಪಿತ ಎನ್ನ ಮನೋರಥ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 6 ಮುದ್ದು ಸುಭದ್ರ ಮೇಲಾದ ಜೊತೆಯ ಮುತ್ತು ವÀಜ್ರ ಕೆಂಪನು ಕೆತ್ತಿಸಿ ಕೊಡುವೆನೀಗ ತಿದ್ದಿ ಮಾಡಿದ ಮೂಗುತಿ ಪಾರ್ಥನ ರಥಕಿದ್ದು ಆಗುವೆ ಸಾರಥಿ ನಡೆಸುವೆನು ಕೀರ್ತಿ ಉಗ್ರಸೇನಗೆ ಹೇಳಿ ಇದರೊಳ- ಗರ್ಧ ರಾಜ್ಯವ ಕೊಡಿಸಿ ನಾ ನಿನ್ನುದ್ದ ಹಣ ಬಿಡು ತಂಗಿ ಕೋಮಲಾಂಗಿ 7 ಅಚ್ಚುತ ಬಲರಾಮರೆಂಬೊ ಎನಗೆ ಜೋಡು ಹೆಚ್ಚಿನ ಭುಜಗಳಿನ್ನು ಯಶೋದ ದೇವಕ್ಕಿ ರೋಹಿಣೀದೇವೇರು ಇರಲು ತಂದೆ ಶ್ರೇಷ್ಠನಾದ್ವಸುದೇವನು ನೀ ಕೊಡುವುದೇನು ಮುತ್ಯನಾಗಿದ್ದುಗ್ರಸೇನನು ಮತ್ತೆ ನಾ ಬೇಡಿದರೆ ಈ ಕ್ಷಣ ಕೊಟ್ಟು ಬಿಡನೇ- ನಧರ್À ರಾಜ್ಯವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 8 ಎಷ್ಟು ಹೇಳಿದರು ಸನ್ಮತವಿಲ್ಲೆ ಸುಭದ್ರೆ ಮತ್ತೇನು ಕೊಡಲೆ ನಾನು ಮನಕೆ ಬೇಕಾದಿಷ್ಟವ ಬೇಡೆ ನೀನು ಭಾರ ಎಷ್ಟು ತಡೆಯಲಾರೆನೆ ನೀನು ಕೈಬಿಟ್ಟು ಬಿಡುವೆನು ಬೆಟ್ಟವನು ಕಿರು ಬೆಟ್ಟಿಲಿಂದೆ ಎತ್ತಿನಿಂತಿದ್ದೇಳು ದಿವಸ ಕದವ ಬಿಡು ತಂಗಿ ಕೋಮಲಾಂಗಿ 9 ಪಕ್ಷಿವಾಹನ ನಿನ್ನ ಚೊಚ್ಚಲಮಗಳ ಎನ್ನಚ್ಛದ ಅಭಿಮನ್ಯುಗೆ ಮಾಡುವುದು ಅ- ಪೇಕ್ಷವಾಗೇದೆ ಎನಗೆ ಬೇಡುವೆನು ನಿಶ್ಚಯ ಮಾಡಿ ಜನರೊಳಗೆ ಕೊಡು ಕೀರ್ತಿ ನಿನಗೆ ಪಟ್ಟದರಸಿಯ ಸಹಿತ ನೀ ಒಡಂಬಟ್ಟು ಎನಗ್ವಚನವನೆ ಪಾಲಿಸು ಕಟ್ಟಿದ್ಹಾದಿಯ ಬಿಟ್ಟು ಪೋಗುವೆ ದಯಮಾಡಣ್ಣಯ್ಯ ನೀ ಕೃಷ್ಣಯ್ಯ 10 ತರವಲ್ಲೆ ರುಕ್ಮಣಿ ಬೀಗತನವ ಭಾಳ ಪರಿ- ಯಾಲೋಚನೆ ಮಾಡು ರುಕುಮನ ಗಡ್ಡ ಶಿರ ಪಟ್ಟಿ ಪನ್ನಿ ನೋಡು ದೊರೆ ಶಿಶುಪಾಲ ವರನವಸ್ಥೆಯ ಕೊಂಡಾಡು ಧೈರ್ಯವನೆ ಮಾಡು ಬರೆದು ಓಲೆಯ ಕಳಿಸಿ ಎನ್ನ ಕರೆಸಿ ಬೆನ್ನ ್ಹತ್ತೋಡಿಬಂದ ಬಿರುದನರಿಯೇ ನ್ವರ ಶುಭಾಂಗಿನಿ ಕದವ ಬಿಡು ತಂಗಿ ಕೋಮಲಾಂಗಿ 11 ಕೃಷ್ಣ ಸುಭದ್ರೆ ಮಾತುಗಳ ರುಕ್ಮಿಣಿ ಕೇಳಿ ಮತ್ಯಾತಕೆನ್ನ ದೂರು ಯತಿಗಳ ಬೆನ್ನ ್ಹತ್ತಿ ಹೋದವರು ದಾರು ಕೃತ್ಯವ ನಡೆಸಿದರೆನ್ನ ನಾದಿನೇರು ಚಿತ್ರಾಂಗಿಯೇರು ಹಸ್ತಿನಾವತಿ ಅರಸು ಧರ್ಮರು ಹೆಚ್ಚಿನ್ಹಿರಿ ಯಣ್ಣಯ್ಯ ಭೀಮನು ಪಾರ್ಥಸುತ ಎನ್ನ ಸೋದರಳಿಯಗೆ ಕೊಟ್ಟೇನು ತೌರುಮನಿಗ್ಹೆಣ್ಣು 12 ರಂಗ ಸುಭದ್ರೆ ಮಾತಿಗೆ ಬಪ್ಪಿ ್ವ್ವಳ್ಯವ ಕೊಟ್ಟು ಚಂದ್ರಗಾವಿಯ ಕುಪ್ಪಸ ಜರದ ಪೀ- ತಾಂಬ್ರದುಡುಗೊರೆ ಕೊಡುತ ಮುತ್ತಿನ ಹಾರ ತಂದು ಕೊರಳಿಗೆ ಹಾಕುತ ರುಕ್ಮಿಣಿಯ ಸಹಿತ ಬಂದ ಭೀಮೇಶ ಕೃಷ್ಣ ಪಾರ್ಥನ ರಂಭೆ ಕನ್ಯವಗೆದ್ದಳೆನುತಲಿ ಸಂಭ್ರಮದಿ ದೇವೇಂದ್ರ ಬ್ಯಾಗನೆ ಚೆಂದದÀಲ್ಹೂಮಳೆಯ ಕರೆದರು 13
--------------
ಹರಪನಹಳ್ಳಿಭೀಮವ್ವ
ಕೇಳಿದ್ಯಾ ಈ ಕೌತುಕ ಕೇಳಿದ್ಯಾ ಕೇಳಿದ್ಯಾ ಕೌತುಕವನ್ನು ಈಗ ಪ ಪೇಳುವೆ ನಾ ನಿಮಗಿನ್ನು ಆಹಾ ಜಾರ ಚೋರ ಕೃಷ್ಣ ಅ.ಪ. ಕರೆಯೆ ಬಂದಿಹನೊಬ್ಬ ಚೋರಾ ತನ್ನ ಕಿರಿಯಯ್ಯನಂತೆ ಅಕ್ರೂರಾ ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ ಹಿರಿಯನೆಂದು ಕಾಲಿಗೊರಗೋರಾ ರಾಮಕೃಷ್ಣರ ಭರದಿ ಅಪ್ಪಿಕೊಂಡು ಮರುಳು ಮಾಡಿದ ಸುದ್ದೀ 1 ಸೋದರಮಾವನ ಮನೆಯೋಳ್ ಬೆಳ - U್ಫದ ನಾಳಿನ ದಿನದೋಳ್ ಕೃಷ್ಣ ಪೋದರೆ ನೆರೆದ ಜನರೋಳ್ ಆಹಾ ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ 2 ಹುಟ್ಟಿದ ಸ್ಥಳವಂತೆ ಮಧುರೀ ಕಂಸ - ನಟ್ಟುಳಿಗಾಗಿ ತಾ ಬೆದರೀ ಇ - ಲ್ಲಿಟ್ಟಳಾತನ ತಂಗಿ ಚದುರೀ ತೋರಿ ಕೊಟ್ಟರೆ ತನ್ನನು ಬೆದರೀ ಆಹಾ ಇಷ್ಟು ಸ್ನೇಹವು ಶ್ರೀದವಿಠಲ ಮಾವನ ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ 3
--------------
ಶ್ರೀದವಿಠಲರು
ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ. ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ 1 ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ 2 ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ3
--------------
ಶ್ರೀಪಾದರಾಜರು
ವ್ಯರ್ಥವಾಗೊದÉೂ ಜನ್ಮ ಸಾರ್ಥಕಾಗದೊ ಭಕ್ತಿ ಭಾವದಿಂದ ಪುರುಷೋತ್ತಮನ ಪೂಜಿಸದ ಜನ್ಮ ಪ ಪರಮ ಶ್ರೇಷ್ಠಜನ್ಮದಿ ಬಂದು ಪರಮ ಭಕುತಿಯಿಂದಲೀಗ ಪರಮಾತ್ಮನ್ನ ಪಾದವ ಭಜಿಸದೆ ಪಾಮರನಾಗಿ ಕಳೆವೋ ಜನ್ಮ 1 ಲಕ್ಷ್ಯ ಇಟ್ಟಧೋಕ್ಷಜ ನಿನ್ನನುಗ್ರಹ ಅಪÉೀಕ್ಷಿಸದಲೆ ಲಕ್ಷ್ಮೀಪತಿಯ ಪಾದವನ್ನಲಕ್ಷ್ಯ ಮಾಡದವನ ಜನ್ಮ 2 ಕರ್ಮ ಕಳೆದು ಪಂಚಮುಖನ ಪ್ರಿಯನ ನಾಮ ಮುಂಚೆ ನೆನೆಯದವನ ಜನ್ಮ 3 ನಿತ್ಯ ನಿನ್ನ ನಾಮ ಬಿಟ್ಟನಿತ್ಯ ಮಾರ್ಗ ಹಿಡಿದು ಮುಂದೆ ಕೆಟ್ಟು ಹೋಗೋದಕ್ಕೆ ಒಡಂಬಟ್ಟು ಹರಿಯ ಬಿಟ್ಟ ಜನ್ಮ 4 ಏಸುಏಸು ಜನ್ಮದಲ್ಲಿ ಬ್ಯಾಸರದಲೆ ಸಲಹುತಿಹ ಭೀ- ಮೇಶ ಕೃಷ್ಣನಂಘ್ರಿಗಳನು ದರ್ಶನ ಮಾಡದವನ ಜನ್ಮ 5
--------------
ಹರಪನಹಳ್ಳಿಭೀಮವ್ವ
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ಘÀಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು
ಪ್ರಸನ್ನ ಶ್ರೀ ರುಕ್ಮಿಣೀಶ ಕಲ್ಯಾಣ24ಪ್ರಥಮ ಅಧ್ಯಾಯಪ್ರಾದುರ್ಭಾವಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನುಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿನೀ ಲಯಾಬ್ಧಿ ಸುಖವ ರಮೆಗಿತ್ತಿಸ್ವರತ1ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನುಗುಣತ್ರಯಮಾನಿಮಾಅನಘಸಂಸ್ತುತಿಸಿಆನಂದಮಯನೀನು ಆನಂದ ಲೀಲೆಯಿಂಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ 2ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತವಿಧಿಯಪ್ರತಿದಿನದಲ್ಲಿ ಅವತಾರ ಮಾಡಿಸಾಧು ಸಾತ್ವಿಕರಿಗೆಅಭಯಸದ್ಗತಿ ಇತ್ತುಅಧಮ ಅಸುರರ ಸದೆದು ಭೂಭಾರ ಕಳೆದಿ 3ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳುಎಲ್ಲವೂ ಪೂರ್ಣವು ನಿತ್ಯವು ಅಭಿನ್ನಳಾಳುಕನೇ ನಿನ್ನಮಲ ರೂಪವಿಶೇಷವಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ 4ವೇದ ಉದ್ಧಾರನೇ ಮತ್ಸ್ಯರೂಪನೇ ನಮೋಮಧುಕೈಟಭಹಾರಿ ಹಯಗ್ರೀವ ಶರಣುಮಂಡಲಾದ್ರಿಯ ಪೊತ್ತಕೂರ್ಮಧನ್ವಂತರಿಸುಧೆಸುರರಿಗುಣಸಿದ ಸ್ತ್ರೀರೂಪಪಾಹಿ5ಸುರಪಕ್ಷಅಜಅಜಿತ ಸಿಂಧುಜಾಪತಿ ಧರೋ-ದ್ಧಾರವರಾಹನಮೋ ಪುರುಟಾಕ್ಷಹಾರಿಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದವರಚಕ್ರಧರಾಅಭಯಭೂಧರಶಾಮ6ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವುಹಸ್ತದ್ವಯ ಅಜಾನುದರಾರಿಧರ ಕೋಟಿಆದಿತ್ಯಾಮಿತತೇಜಮಾಲಕ್ಷ್ಮೀಯುತ ವೀರಉತ್ಕøಷ್ಟಬಲ ವಿಷ್ಣೋ ನರಸಿಂಹ ಶರಣು 7ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇಹಿರಣ್ಯಕಶಿಪುವ ಸೀಳ್ದಿ ಪ್ರಹ್ಲಾದಪಾಲಮೂರಡಿಯ ಕೇಳ್ದ ವಾಮನಬಲಿಬಂಧಕಶರಣು ಶ್ರೀತ್ರಿವಿಕ್ರಮನೇ ಧೂರ್ಜನಕಪಾಹಿ8ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿಕೋಟಿ ಸೂರ್ಯಮಿತೋಜ್ವಲ ಪರಶುರಾಮಸಾಟಿ ಇಲ್ಲದ ಹನುಮತ್ಸೇವ್ಯಸೀತಾರಮಣಪಟ್ಟಾಭಿರಾಮನಮೋ ರಾವಣ ಧ್ವಂಸೀ 9ಭಜಿಸುವೆ ನರಸೇವ್ಯ ನಾರಾಯಣ ವ್ಯಾಸಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶಕುಜನಮೋಹಕ ನಮೋ ಸುರ ಸುಬೋಧಕಬುದ್ಧದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ 10ಕ್ರೂರ ದೈತ್ಯರ ಭಾರಿಭಾರಧರಿಯಿಂದಿಳಿಸಿದೆವಾರಿಜಾಸನ ಶಿವಾದ್ಯಮರರ ಮೊರೆಕೇಳಿಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯಪರಮಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ11ವಸುದೇವ ದೇವಕೀಸುತನೆಂದು ತೋರಿದವಾಸುದೇವನೇ ನಿನ್ನ ಸುಚರಿತ್ರೆ ಕೇಳೆಶ್ರೀಶ ನಿನ್ನಯ ದಯದಿಕಲುಷಪರಿಹಾರವುಸುಶುಭ ಪಾವನಕರವು ಸರ್ವಭಕ್ತರಿಗೂ 12ಕಲಿಕಲಿಪರಿವಾರ ದೈತ್ಯ ದುರ್ಜನರುಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿಶೀಲ ಹರಿಭಕ್ತರ ಕಂಡು ಸಹಿಸದೇ ಬಹುಬಲಕಾರ್ಯ ವಂಚನೆಯಿಂದ ಪೀಡಿಸಿದರು 13ಎಂಟನೇ ಮಗು ತನ್ನ ಮೃತ್ಯುವಾಗುವುದೆಂದುದುಷ್ಟ ಕಂಸನು ತಂಗಿ ಸಪತಿ ದೇವಕಿಯಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ 14ಏಳನೇ ಗರ್ಭವು ವ್ಯಾಳದೇವನ ಅಂಶಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟುಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ 15ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದಸುರರುಸೇವಿಸುವುದಕೆ ನಿನ್ನಿಚ್ಛೆ ದಯದಿಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿಪರಿಪರಿವಿಧದಲ್ಲಿ ಕೃತ ಕೃತ್ಯರಾದರು16ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿಅವತಾರಕ್ಕನುಸರಿಸಿ ಬಂದು ತೆರಳಿದಳುದೇವ ನಿನ್ನ ಕಲಾ ಸಂಯುಕ್ತ ಶೇಷನುಭವಿಸಿದನು ನಿನ್ನಣ್ಣ ಬಲರಾಮನೆಂದು 17ನಿರ್ದೋಷನೀ ಸರ್ವ ಜಗನ್ನಿವಾಸನು ದೇವ-ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗವಿಧಿಭವಾದಿಗಳೆಲ್ಲ ಬಂದು ಸಂಸ್ತುತಿಸಿದರುಸತ್ಯಜ್ಞÕನಾನಂತಗುಣಪೂರ್ಣನಿನ್ನ18ಯಾವನು ಸರ್ವದಾ ಸರ್ವ ಬಹಿರಂತಸ್ಥಯಾವನು ಸರ್ವ ಹೃತ್ ಯೋಮದೊಳು ಇರುವಯಾವನಲ್ಲಿ ಸರ್ವವೂ ಸಮಾಹಿತವೋಅವನೇವೇ ನೀಹರಿವಿಷ್ಣು ಕೃಷ್ಣ ಅವತಾರ19ಪ್ರಾಕೃತಶರೀರ ವಿಕಾರಗಳು ನಿನಗಿಲ್ಲಪ್ರಾಕೃತಕಲಾವಿಲ್ಲ ಭಿನ್ನಾಂಶನಲ್ಲಏಕಪ್ರಕಾರಅಕ್ಷರಪೂರ್ಣಅಜನಿನ್ನಅಜ್ಞಾನದಲಿ ನರರು ಜನಿಸಿದಿ ಎಂಬುವರು 20ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನಕಿರೀಟಕುಂಡಲಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯಕೌಮೋದಕೀ ಸುದರ್ಶನ ಸರೋಜ 21ಉದ್ದಾಮ ಕಾಂಚಂಗದ ಕಂಕಣಾದಿಗಳಪೀತಾಂಬರ ಪಾದನೂಪುರ ಪೂರ್ಣೇಂದುಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟಮೋದಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ22ಈರೂಪವಾಸುದೇವನೋಡಿ ಸ್ತುತಿಸಿದನು ನಿನ್ನಅರಿಯೇ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ 23ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯುಕಾಣುತ್ತಾ ನರಲೋಕ ವಿಡಂಬನಕ್ಕಾಗಿತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ 24ದೇವಕಿಯ ಸ್ತುತಿಕೇಳಿಯುಕ್ತ ಮಾತುಗಳಾಡಿದೇವ ನಿನ್ನೀಚ್ಛಾ ಶಕ್ತಿಯಿಂದಲೇವೇಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡುತೀವ್ರ ಹೊರಟನು ವೈಜಕೆ ನೀ ಪೇಳಿದಂತೆ 25ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲುಆಶ್ಚರ್ಯವಲ್ಲ ನದಿಮಾರ್ಗಬಿಟ್ಟಿದ್ದುಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿವಸುದೇವ ಎತ್ತಿಪೋದನು ಅವಳ ಮಗಳ 26ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯವಸುದೇವ ತಂದು ದೇವಕಿ ಬದಿ ಇಡಲುಪ್ರಸವ ಸುದ್ದಿಯಕೇಳಿಕಂಸ ಆರ್ಭಟದಿಂದಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ 27ಅಂಬರದಿ ದಿವ್ಯ ರತ್ನಾಭರಣ ಭೂಷಿತೆಕಂಬುಚಕ್ರಾದಿಧರೆ ಅಷ್ಟ ಮಹಾಭುಜೆಯುಅಂಬಾ ಮಹಾದುರ್ಗಾ ಭಗವತೀ ಮಯಾದೇವಿಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ 28ಕಂಸನ್ನ ಎಚ್ಚರಿಸಿ ಭಗವತಿ ತೆರಳಲುಕಂಸನುಪರಮವಿಸ್ಮಿತನಾಗಿ ಬೇಗವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿಅಸುರ ಮಂತ್ರಿಗಳೊಡೆ ಆಲೋಚಿಸಿದನು 29ನಂದ ಯಶೋದೆಯು ತಮ್ಮ ಶಿಶು ನೀನೆಂದುನಂದ ಆನಂದದಿವಿಪ್ರವೈದಿಕರ ಕರೆದುಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿಚೆಂದದಿ ಅಲಂಕೃತ ಧೇನುಗಳ ಕೊಟ್ಟ 30ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 31-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯಬಾಲಲೀಲಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಸಣ್ಣ ಶಿಶುರೂಪ ನೀ ಪೂತನೀ ಶಕಟತೃಣಾವರ್ತರ ಕೊಂದಿ ನಮೋ ಅಮಿತಶೌರಿನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳಕಾಣಿಸಿದಿ ಮಾತೆಗೆ ನಮೋವಿಶ್ವವಿಷ್ಣೋ1ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲಅಗಣಿತಮಹಿಮ ಶ್ರೀ ವಿಷ್ಣು ನೀ ಎಂದುಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆಕಾಕುದುರ್ಮತಿಗಳು ದ್ವೇಷ ಬೆಳೆಸಿದರು2ಕಂಸ ಜರಾಸಂಧ ಕಾಲಯವನ ಕಲಿಯಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನಹಿಂಸಿಸಬೇಕೆಂದು ಆಗಾಗ ಯತ್ನಿಸಲುದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ 3ವತ್ಸಬಕಅಘಧೇನುಕ ಪ್ರಲಂಬಾರಿಷ್ಟಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿವಸುಮತಿಯ ಸಾಧುಗಳ ಭಯ ನಿವಾರಿಸಿದಿ 4ಬಲವಂತ ರಾಮ ಸಹ ಅಮಿತ ಪೌರುಷ ನೀನುಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿಶೀಲ ಭಕ್ತರಿಹಪರಸುಖ ಒದಗಿಸಿದಿಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ 5ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀಸಂರಕ್ಷಿಸಿದಿ ವೃಜಗೋಪ ಜನರನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದಸಮ್ಮುದದಿ ನಂದನ್ನ ಕರತಂದಿ ಅಜಿತ 6ನಾಗಪತ್ನೀಯರು ಬಂದು ನಮಸ್ತುಭ್ಯಂಭಗವತೇ ಪೂರುಷಾಯ ಮಹಾತ್ಮನೇ ಎಂದುಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ 7ಶ್ರೀಧರನೇ ನಿನ್ನಯ ವೇಣುನಾದದ ಸುಧೆಯಮಾಧುರ್ಯ ರಸವನ್ನು ವರ್ಣಿಸಲಶಕ್ಯಶ್ರೀದೇವಿ ಕೊಳಲÉೂಳು ಪ್ರವೇಶಿಸಿ ನಿನ್ನ ಅರ-ವಿಂದ ಮುಖದ ಆನಂದ ಸವಿದು ಸುಖಿಸುವಳು 8ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬಸೊಲ್ಲಿನ ತತ್ವವ ಬಲ್ಲವರೇ ಬಲ್ಲರುಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ 9ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದುಮುಖ್ಯ ವಾಯು ಅಖನರ್ಮ ಸಮಗಿಲ್ಲಹೊಯ್ಯಿಸೆ ಮಳೆಶಕ್ರನೀ ಲೀಲೆಯಂ ಗೌರಿ ಎತ್ತಿಕಾಯ್ದಿ ಗೋಜನಗಳ ಅನ್ನದ ಅನ್ನಾದ 10ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂರಾಧಾದಿ ಗೋಪಿಗಳ ಅನಂದ ಉಕ್ಕಿಸಿಸ್ವರತಇಂದಿರಾಪತಿ ಗೋವಿಂದ ಗೋ ಕಾಯ್ದ 11ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟುಅದರಂತೆ ಭಕ್ತಿಯಲಿ ಅವರೋಚ್ಯ ಉಂಟುಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿಮಂದಗಮನೆಯರಿಗೆ ರಾಸಕ್ರೀಡೆಯಲಿ 12ನಂದವ್ರಜಗೋಕುಲ ಮಥುರೆ ಬೃಂದಾವನಚಂದ್ರ ಯಮುನೆವನಲತೆ ಪುಷ್ಪ ವೃಕ್ಷಸಿಂಧುದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂವಂದಿಸುವೆ ಕೃಷ್ಣ ಸಂಬಂಧಿಗಳು ಎಂದು 13ವಿದ್ಯಾಧರ ಸುದರ್ಶನನು ಶಾಪದಿ ಅಹಿಯುನಂದನ್ನ ಕಾಯ್ದಿ ಆ ಅಹಿಯ ಬಾಯಿಂದಪಾದಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ 14ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿದುರುಳವ್ರಜನ ಶಿರವ ಕತ್ತರಿಸಿ ಬಿಸುಟುವಿಪ್ರನಾರಿಯರ ಅನ್ನ ಉಂಡು ಒಲಿದಂತೆಕ್ಷಿಪ್ರವಾಯಕ ಗೊಲಿದಿ ಮಾಲಾಕಾರನಿಗೂ15ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದುಖಳದುಷ್ಟ ಕಂಸನ್ನ ದ್ವಂಸ ಮಾಡಿದಿಯೋಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿಬಲರಾಮ ಕೃಷ್ಣ ನಮೋಪಾಹಿಸಜ್ಜನರ16ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನುಗುರುವಿನ ಮೃತ ಪುತ್ರನ್ನ ಕರೆತಂದಿಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನುನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ 17ಈರಾರುಯೋಜನವು ದ್ವಾರಕಾ ದುರ್ಗವುಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ -ಪುರಗಳು ನವರತ್ನ ಸ್ವರ್ಣಮಯ ಗೃಹಗಳು 18ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆನೀಚ ದುರ್ಮತಿ ಕಾಲಯವನ ಹಿಂಬಾಲಿಸಿಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇಭಸ್ಮವಾದನು ಅಲ್ಲೇ ರಾಜ ಕಣ್ತೆರೆದು 19ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದುಸುಪವಿತ್ರ ನರನಾರಾಯಣ ಕ್ಷೇತ್ರಯೈದೇಉಪಾಯದಿಂದಲಿ ಮಾಗಧನ ಸಮ್ಮೋಹಿಸಿನೀ ಬಲರಾಮ ಸಹ ಸ್ವಪುರ ಸೇರಿದಿಯೋ 20ವನಜಸಂಭವಪ್ರೇರಿಸಲು ರೇವತರಾಜಅನರ್ತ ದೇಶಾಧಿಪತಿಯು ಶ್ರೀಮಂತತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು 21ಸುಧಾ ಕಲಶವ ಗರುಡ ಕಿತ್ತಿ ತಂದಂತೆಚೈದ್ಯಮಾಗಧಶಾಲ್ವಾದಿ ಕಡೆಯಿಂದಎತ್ತಿ ತಂದಿ ಸ್ವಯಂವರದಿಂ ಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 22ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 23-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಅಧ್ಯಾಯಕಲ್ಯಾಣ ಸುಧಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪವಿಧರ್ಭ ದೇಶಾಧಿಪತಿ ಭೀಷ್ಮಕರಾಜನುಸದ್ಧರ್ಮನಿಷ್ಟ ಕುಂಡಿನಿಪುರವಾಸಿಐದು ಮಂದಿ ಗಂಡು ಮಕ್ಕಳು ಅವನಿಗೆಮೊದಲನೆಯವನಿಗೆ ರುಗ್ಮಿ ಎಂದು ಹೆಸರು 1ರುಗ್ನಿ ಬಹು ದುಷ್ಟನು ಕೃಷ್ಣ ದ್ವೇಷಿ ಖಳರುಮಾಗಧಾದಿಗಳಲ್ಲಿ ಬಹು ಸ್ನೇಹರುಗ್ಮಿಗೆ ರುಕ್ಮರಥ, ರುಕ್ಮಬಾಹು ಮತ್ತುರುಕ್ಮಕೇಶಿ, ರುಕ್ಮಮಾಲಿ ಅನುಜರು2ಈ ಪುಣ್ಯವಂತ ರಾಜನಿಗೊಂದು ಮಗಳುಂಟುಈ ಪುತ್ರಿ ರುಕ್ಮಿಣಿ ಸ್ಫುರದ್ವಾರಾನನೆಯುಹೇ ಪುರುಷೋತ್ತಮನೇ ನಿನ್ನ ನಿಜಸತಿ ಲಕ್ಷ್ಮೀಅಪ್ರಮೇಯನೇ ನಿನ್ನ ಬಿಟ್ಟಗಲದವಳು 3ಉರುಗುಣಾರ್ಣವ ನಿನ್ನ ಅವತಾರಕನುಸರಿಸಿಶ್ರೀ ರಮಾದೇವಿಯೇ ಪ್ರಾದುರ್ಭವಿಸಿದಳುನರರ ನೋಟಕೆ ರಾಜಪುತ್ರಿಯಂತೆ ಇಹಳುಪುರಟಗರ್ಭನ ತಾಯಿ ಸರ್ವಜಗನ್ಮಾತೆ 4ಈ ಷÉೂೀಡಶ ಕಲಾಯುಕ್ ನಮ್ಮ ತನುವೋಲ್ ಅಲ್ಲಕ್ಲೇಶಸಂತಾಪಾದಿ ವಿಕಾರಗಳು ಇಲ್ಲದೋಷ ದೊರೆ ದುಃಖ ಅಸ್ಪøಷ್ಟೆ ಎಂದೆಂದೂಕೃಷ್ಣ ವಿಷ್ಣೋ ನಿನ್ನಾಧೀನೆ ಎಂದೆಂದೂ 5ಉತ್ತಮ ಮಹಾಪೂರುಷ ಶ್ರೀಕರನೇ ನಿನ್ನಉತ್ತಮ ಕ್ರಿಯಾರೂಪ ಗುಣವಿಶೇಷಗಳನ್ನಸಂತತ ಅಲೋಚಿಸಿ, ಹೊಸ ಹೊಸ ಅತಿಶಯವಸತತ ಕಾಣುತ ತಾ ಸನ್ನುತಿಸಿ ಸುಖಿಸುವಳು 6ವಿಮಲಆನಂದಮಯನಿನ್ನ ಸಹಲಕ್ಷ್ಮೀಬ್ರಹ್ಮರುದ್ರಾದಿ ಸುರರಿಂದ ಸನ್ನುತಳುಅಮಿತೋಚ್ಛ ಭಕ್ತಿಯಿಂ ಸದಾ ನಿನ್ನಸೇವಿಪಳುರಮಾ ಸಿಂಧುಜಾ ಜಾನಕೀಯೇವೇ ಭೈಷ್ಮಿ 7ಸಿರಿದೇವಿ ತಿಳಿದಷ್ಟುಹರಿನಿನ್ನ ತಿಳಿದವರುನರರಲ್ಲಿ ಸುರರಲ್ಲಿ ಯಾರೂನೂ ಇಲ್ಲನರಲೋಕದಲ್ಲಿ ನರರಂತೆ ನಟಿಸುವ ಸಿರಿಯುಅರಿಯಬೇಕೇ ಇತರರಿಂದ ಹೊಸದಾಗಿ 8ಅರಮನೆಗೆ ಬರುವವರು ನಾರದಾದಿಗಳಿಂದಹರಿಮುಕುಂದನೆ ನಿನ್ನರೂಪಗುಣಮಹಿಮೆಹರುಷದಿಂದಲಿ ಚೆನ್ನಾಗಿಕೇಳಿಮನದಲ್ಲಿವರಿಸಿದಳು ಸದಾ ನಿನ್ನ ಪ್ರೇಮದಿ ಭೈಷ್ಮಿ 9ಕೃಷ್ಣನಿಗೆಸಮ ಸದೃಶ ಪುರುಷ ಯಾರೂ ಇಲ್ಲರುಕ್ಮಿಣಿಗೆ ಸಮ ಸದೃಶ ಸ್ತ್ರೀ ಯಾರೂ ಇಲ್ಲಗುರುರೂಪ ಔದಾರ್ಯ ಬುದ್ದಿ ಲಕ್ಷಣಾಶ್ರಯಳುನಿನ್ನ ನಿಜಪತ್ನಿ ರುಕ್ಮಿಣಿ ಎಂದು ನೀ ಅರಿವಿ 10ಮದುವೆ ಮಾಡಲು ರುಕ್ಮಿಣಿಗೆ ಯೋಚಿಸಿನೃಪಬಂಧುಗಳು ಕೃಷ್ಣಗೆ ಕೊಡಲು ಇಚ್ಛೈಸೆಧೂರ್ತರುಗ್ಮಿ ಕೃಷ್ಣ ದ್ವೇಷಿ ತಡೆ ಮಾಡಿದನುಚೈದ್ಯ ಶಿಶುಪಾಲನಿಗೆ ಕೊಡಲು ನೆನೆದು 11ಸುತಗೆ ಕೃಷ್ಣನು ಮಾತ್ರ ವರನೆಂದು ತಿಳಿದರೂಪುತ್ರ ಸ್ನೇಹದಿ ರುಕ್ಮಿಗೆ ಒಡಂಬಟ್ಟ ರಾಜಚೈದ್ಯನಿಗೆ ಕೊಡಲು ಏರ್ಪಾಡು ಮಾಡಲುಆಪ್ತ ದ್ವಿಜವರ್ಯನ ಕರೆದಳು ಭೈಷ್ಮೀ 12ವಿಪ್ರನ ದ್ವಾರ ಸಂದೇಶ ಕಳುಹಿಸಿದಳುಪತ್ರ ಬರೆದಳು ನಿನಗೆ ಸತ್ತತ್ವ ನಿಮಿಡಆ ಬ್ರಾಹ್ಮಣ ಶ್ರೇಷ್ಟ ದ್ವಾರಕಾ ಪುರಿಯೈದುಪರಮಪೂರುಷ ನಿನ್ನ ನೋಡಿದನÀು ಮುದದಿ13ಕಾಂಚನಾಸನದಲ್ಲಿ ಕುಳಿತಿದ್ದ ನೀನುದ್ವಿಜವರ ಶ್ರೇಷ್ಠ ಬರುವುದು ಕಂಡಾಕ್ಷಣದಿತ್ಯಜಿಸಿಆಸನಪೋಗಿ ಎದುರ್ಗೊಂಡು ಕರೆತಂದುಪೂಜಿಸಿದೆಯೋ ಸ್ವಾಮಿ ಬ್ರಹ್ಮಾಂಡದೊಡೆಯ 14ಅಖಂಡೈಕ ಸಾರಾತ್ಮಾ ಸರ್ವರೂಪಾಟಿಭಿನ್ನಅಕಳಂಕ ಉರು ಸರ್ವ ಸಚ್ಛÀಕ್ತಿಪೂರ್ಣಏಕಾತ್ಮ ನೀ ಪೂಜ್ಯ ಪೂಜಕ ನೀಚೋಚ್ಛಗಳಕಾಕುಜನಮೋಹಕ್ಕೆ ಅಲ್ಲಲ್ಲಿ ತೋರ್ವಿ15ಸಜ್ಜನರ ಗತಿಪ್ರದನು ಅವ್ಯಯನು ನೀನುಭೋಜನಾದಿ ಬಹು ಉಪಚಾರ ಮಾಡಿದ್ವಿಜವರ್ಯನ ಹೊಗಳಿ ಸಾಧುಸನ್ಮತಿನೀತಿನಿಜ ಸುಖಪ್ರದಮಾರ್ಗಬೋಧಕ ಮಾತಾಡಿದಿ16ಭೂತ ಸಹೃತ್ತಮ ಸದಾ ಸಂತುಷ್ಟ ಮನಸ್ಸುಳ್ಳಸಾಧು ಆ ಬ್ರಾಹ್ಮಣನು ನಿನಗೆ ಸನ್ನಮಿಸಿಬಂದ ವಿಷಯವ ಪೇಳಿ ಪತ್ರವ ಸಮರ್ಪಿಸಿದವಂದೇ ಆ ಅಕುಟಿಲಗೆ ಭೈಷ್ಮೀ ಕೃಷ್ಣರಿಗೆ 17ಪತ್ರಸಾರಭುವನಸುಂದರ ನಿನ್ನ ಕಲ್ಯಾಣ ಗುಣಗಳಶ್ರವಣ ಮನನವಪರಮಆದರದಿ ಮಾಳ್ಪಜೀವರುಗಳ ಕಾಯಜಾದಿ ತಾಪಂಗಳುದ್ರಾವಿತವು ಆಗುವೆವು ಎಂದು ಕೇಳಿಹೆನು 18ಗುಣಕ್ರಿಯಾರೂಪಸುಶ್ರವಣ ಮನನವ ಮಾಡಿಧ್ಯಾನಿಪರಿಗೆ ನಿನ್ನರೂಪದರ್ಶನವುನಿನ್ನ ಅರಿತ ಭಕ್ತರಿಗೆ ಅವತಾರಾದಿ ದರ್ಶನವುಕಾಣುವವರಿಗೆ ಅಖಿಲಾರ್ಥ ಲಭಿಸುವವು 19ಇವು ಇಂತಹ ನಿನ್ನ ಉನ್ನತ ಮಹಿಮೆಗಳಶ್ರವಣ ಮಾಡಿ ಅಂತರಂಗದಿ ತನ್ನ ಮನಸ್ಧಾವಿಸುತ್ತೇ ನಿನ್ನಲ್ಲೇಅಚ್ಯುತಮುಕುಂದದೇವಿ ರುಕ್ಮಿಣಿ ಹೀಗೆ ಬರೆದಿಹಳು ವಿಭುವೇ 20ಸುಖರೂಪ ಲಕ್ಷ್ಮೀಶವಿಧಿಪಿತಜಗಜನ್ಮಾದಿಕರ್ತಶುಕ್ರ ನಿಷ್ಕಲಅಪ್ರಾಕೃತಅವ್ಯಕ್ತಅಖಂಡೈಕ ಸಾರಾತ್ಮ ಅನಂತೋರು ಸೌಂದರ್ಯನಿಗಮಗ್ಯ ಗಾಯತ್ರಿ ಅಮಾತ್ರ ತ್ರಿಮಾತ್ರ 21ಬೃಹತೀಸಹಸ್ರ ಸ್ವರವ್ಯಂಜನಾಕ್ಷರ ವಾಚ್ಯಅಹರ್ನೇತ್ರು ಭೂಮನ್ನಿತ್ಯನೀ ಸ್ವತಂತ್ರಮಹೈಶ್ವರ್ಯ ಪೂರ್ಣೇಂದ್ರ ಅಶೇಷ ಗುಣಾಧಾರಮಹಾಶಕ್ತಿ ದಿವಃಪರ ಪರಮೇಶ್ವರ - ಸ್ವ 22ನಿನ್ನ ಈ ಕುಲಶೀಲ ವಿದ್ಯಾದಿ ಗುಣರೂಪಅನುಪಮೈಶ್ವರ್ಯದಿ ನಿನಗೆ ನೀನೇತುಲ್ಯನಿನ್ನ ಗುಣಗಳು ಸರ್ವಾಕರ್ಷಕವಾಗಿರುವವುತನ್ನಾತ್ಮ ನಿವೇದನ ಮಾಡಿಯೇ ಎಂದಳು 23ಉನ್ನಾಮ ಉದ್ಧಾಮ ಅಚ್ಯುತನು ನೀನಿತ್ಯಆನಂದಚಿತ್ ತನು ಯದುಪತೇ ಕೃಷ್ಣನೀನೇವೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀ ಭೈಷ್ಮಿ ಸೂಚಿಸಿಹಳು24ರಾಜಪುತ್ರ ಎಂಬ ವಿಡಂಬನಾ ರೀತಿಯಲಿದುರ್ಜನರ ಭಯ ತನಗೆ ಇರುವಂತೆ ಬರೆದುಸೂಚಿಸಿದಳು ತನ್ನ ಅಂಬಿಕಾ ಗುಡಿಯಿಂದಅಚ್ಯುತನೇ ನೀ ಕರಕೊಂಡು ಹೋಗೆಂದು 25ರುಕ್ಮಿಣಿಯಲಿ ನಿನ್ನ ಪ್ರೇಮ ಪ್ರಕಟಿಸುತಬೇಗಸಾರಥಿದಾರುಕನ್ನ ನೀ ಕರೆದುಮೇಘಪುಷ್ಪ, ಶೈಭ್ಯ, ಬಲಾಹಕ ಸುಗ್ರೀವನಾಲ್ಕಶ್ವ ರಥದಲ್ಲಿ ದ್ವಿಜವರ ಸಹ ಕುಳಿತಿ 26ಖಗವೇಗದಿ ರಥದಿ ಏಕ ರಾತ್ರಿಯಲ್ಲೇಪೋಗಿ ಸೇರಿದಿ ಆ ಕುಂಡಿನಾಪುರವಸೊಗಸಾದ ಅಲಂಕಾರ ಪಚ್ಚೆ ತೋರಣಗಳುಪೂಗಿ ಮಾವು ಮೊದಲಾದ ಗೊಂಚಲುಗಳು 27ಎಲ್ಲಿ ನೋಡಿದರಲ್ಲಿ ಕಾಂಚನಾಭರಣದಿಪೊಳೆವ ಪೀತಾಂಬರ ಪಟ್ಟೆ ಉಟ್ಟಿದ್ದಲೋಲಾಯಿತಾಕ್ಷಿಯರು ವಿಪ್ರಜನ ಗುಂಪುಕೋಲಾಹಲವಾಗಿ ಕಂಡಿ ಕುಂಡಿನವ 28ಕಾರಣವು ತಿಳಿದಿದ್ದೆ ಭೀಷ್ಮಕರಾಜನುಪುತ್ರಸ್ನೇಹದಿ ಚೈದ್ಯಶಿಶುಪಾಲನಿಗೆಪುತ್ರಿಯ ಕೊಡಲಿಕ್ಕೆ ಕಾರ್ಯೋನ್ಮುಖನಾಗಿಪಿತೃ ದೇವಾರ್ಚನೆ ವಿಪ್ರಪೂಜೆಯಗೈದ 29ಚೇದಿಪತಿ ದಮಘೋಷ ಪುತ್ರ ಶಿಶುಪಾಲಗೆಮದುವೆಪೂರ್ವದ ಕಾರ್ಯ ತಾನೂ ಮಾಡಿಸಿದಮದುವೆ ಸಂಭ್ರಮಕ್ಕಾಗಿ ಸೈನ್ಯ ಸಹ ಬಂದರುವೈದರ್ಭ ಪೂಜಿಸಿದ ಉಪಚಾರದಿಂದ 30ಮಾಧವನೇ ನಿನ್ನಲ್ಲಿ ಭಯ ದ್ವೇಷ ಕಾರಣದಿಚೈದ್ಯ ಪಕ್ಷೀಯರು ಜರಾಸಂಧ ಸಾಲ್ವದಂತ ವಕ್ರಾದಿಗಳು ಸಹಸ್ರಾರು ಮಂದೀರುಬಂದುತುಂಬಿಎಚ್ಚರಿಕೆಯಲಿ ಇದ್ದರು31ಆ ಪರಿಸ್ಥಿತಿಯಲ್ಲಿ ಕುಂಡಿನಾಪುರಕೆ ನೀಒಬ್ಬನೇ ಪೋದದ್ದುಕೇಳಿಬಲರಾಮಕ್ಷಿಪ್ರದಿ ರಥಾದಿ ಯಾದವಸೈನ್ಯ ಸಹಿತತಾ ಬಂದ ಅಚ್ಯುತನೇ ನಿನ್ನ ಬದಿಗೆ 32ಸರೋರುಹಾಸನನಿಗೂ ಕೋಟಿಗುಣ ಉತ್ತಮಳುಸಿರಿದೇವಿ ರುಕ್ಮಿಣಿ ಭೀಷ್ಮ ಕನ್ಯಾಹರಿಯೇ ನಿನ್ನಾಗಮನ ಆಕಾಂಕ್ಷಿಯಾಗಿ ತಾನಿರೀಕ್ಷಿಸಿದಳು ನಿನ್ನ ಹಾಗೂ ಆ ದ್ವಿಜವರನ್ನ 33ಮೇದಿನಿಸ್ತ್ರೀಯರಿಗೆ ಎಡಗಣ್ಣು ತೊಡೆ ಭುಜಅದುರುವುದುಶುಭಸೂಚಕವೆಂದು ಪೇಳುವರುಸದಾನಿತ್ಯಸುಶುಭ ಮಂಗಳರೂಪಿ ದೇವಿಗೆಅದರಿದವು ಎಂಬುವುದು ಲೌಕಿಕ ದೃಷ್ಟಿ 34ಮುಖದಲ್ಲಿ ಸಂತೋಷ ಪ್ರಕಟಿಸುತ ವಿಪ್ರನುರುಕ್ಮಿಣಿ ಬಳಿ ಬಂದು ಸಮಸ್ತವೂ ಪೇಳೆಶ್ರೀ ಕೃಷ್ಣ ನಿನ್ನನ್ನು ಸಂಸ್ಮರಿಸುತ ಭೈಷ್ಮಿಲೋಕ ರೀತಿಯಲಿ ಆದ್ವಿಜಶ್ರೇಷ್ಠನ್ನ ಪೂಜಿಸಿದಳು35ಕೃಷ್ಣ ಬಲರಾಮರಿಗೆ ಬಿಡಾರವ ಕೊಟ್ಟುಭೀಷ್ಮಕನು ಪೂಜಿಸಿದ ಪುರದ ಸಜ್ಜನರುಕೃಷ್ಣನಿಗೆ ರುಕ್ಮಿಣಿಯೇ ರುಕ್ಮಿಣಿಗೆ ಕೃಷ್ಣನೇಘೋಷಿಸಿದ ರೀತಿ ಸಂತೋಷದಿಂದ 36ಸಂಪ್ರದಾಯವನುಸರಿಸಿ ಭೀಷ್ಮಕನುತನ್ನ ಪುತ್ರಿಯ ಕಾಲುನಡೆಯಲ್ಲಿ ಕರೆಕೊಂಡುಅಂಬಿಕಾಪೂಜೆಯ ಮಾಡಲು ಪೋಗಲುಸಂಭ್ರಮವ ಬಂದಿದ್ದ ರಾಜರು ನೋಡಿದರು 37ಮುಕುಂದ ನಿನ್ನಯ ಪಾದಪಂಕಜವ ಧ್ಯಾನಿಸುತರುಕ್ಮಿಣಿ ಅಂಬಿಕಾಆಲಯವ ಸೇರಿಬಾಗಿನಾದಿಗಳ ಕೊಟ್ಟು ನಿನ್ನ ಸಂಸ್ಮರಿಸುತ್ತರಾಕೇಂದುಮುಖಿ ನಿನ್ನಾಕಾಂಕ್ಷೆಯಿಂ ತಿರುಗಿದಳು38ರಥಗಜತುರಗಪದಾದಿಸೈನ್ಯಗಳುಪ್ರತಿರಹಿತರು ತಾವೆಂಬ ಡಾಂಭಿಕರಾಜರುಅತಿಗೂಢಚಾರ ರಾಜಭೃತ್ಯರು ಅಲ್ಲಲ್ಲಿಇತ್ತ ಅತ್ತ ಎಲ್ಲೂ ಪುರಜನ ಗುಂಪು 39ಮಂದಗಜಗಮನೆಯು ಸ್ವಚ್ಛ ಹಂಸದವೋಲುಚಂದಪಾದವ ಮೆಲ್ಲ ಮೆಲ್ಲನೆ ಇಡುತಸ್ವಯಂವರದಿ ಸಯಂದನದಿ ನೀ ಇರೆ ವಾರೆನೋಟ ನೋಡಿಬಂದಳು ಉದಯಾರ್ಕ ಪದುಮಮುಖ ಮುದದಿ 40ಮಂದಜಭವಾಂಡದಲ್ಲಿ ಎಲ್ಲೆಲ್ಲೂ ಇಲ್ಲದರೂಪಸೌಂದರ್ಯವತಿಯ ಮೋಹದಲ್ಲಿ ನೋಡಿಮಂಧಧೀ ರಾಜರು ಕಾಯದಿ ಮೈಮರೆಯೇಮಂದಜಕರದಿಂದ ನೀ ಎತ್ತಿಕೊಂಡಿ ಭೈಷ್ಮಿಯ41ಗರುಡಧ್ವಜದಿಂದ ಶೋಭಿಸುವ ರಥದಲ್ಲಿಸಿರಿರುಕ್ಮಿಣಿ ಸಹ ಕುಳಿತು ನೀನುಹೊರಟಿ ಸಸೈನ್ಯ ಬಲರಾಮ ಸಹ ಅದುರುಳರ ಕಣ್ಣು ಮುಂದೆಯೇ ಶ್ರೀಧರಾಚ್ಯುತನೇ 42ಹಾಹಾಕಾರದಲಿ ಕೂಗಿ ಆರ್ಭಟಮಾಡಿಮಹಾಸೈನ್ಯ ಸಹ ಜರಾಸಂಧಾದಿ ರಾಜರುಬಹುವಿಧ ಧನುರ್‍ಸ್ತ್ರಯುತ ಹಿಂಬಾಲಿಸಿಕುಹಕರು ಅತಿಘೋರ ಯುದ್ದ ಮಾಡಿದರು 43ಲೀಲೆಯಿಂದಲಿ ನೀನು ಬಲರಾಮ ಯಾದವರುಖಳಜರಾಸಂಧಾದಿಗಳ ಸೈನ್ಯದವರತಲೆ ಕಾಲು ಕತ್ತರಿಸಿ ಛಿನ್ನ ಭಿನ್ನ ಮಾಡೇಪೇಳದೆ ಓಡಿದನು ಜರಾಸುತನು ಸೋತ 44ಧಾಮಘೋಷನಲಿ ಪೋಗಿ ಅವನ್ನ ಆಶ್ವಾಸಿಸಿತಾಮರಳಿ ಪೋದನು ತನ್ನ ಪಟ್ಟಣಕ್ಕೆತಮ್ಮ ತಮ್ಮ ಪುರಿಗಳಿಗೆ ಇತರ ರಾಜರೂ ಪೋಗೇವರ್ಮದಿ ಯುದ್ಧವ ಮುಂದುವರೆಸಿದ ರುಗ್ಮಿ 45ಶಪಥ ಮಾತುಗಳಾಡಿ ಯುದ್ಧ ಮಾಡಿದ ರುಗ್ಮಿಚಾಪಶರಸಾರಥಿಅಶ್ವಗಳ ಕಳಕೊಂಡುಕೋಪೋಚ್ಛದಿ ಖಡ್ಗದಿ ಎತ್ತಿಕೊಂಡು ಬರಲುಶ್ರೀಪ ನೀ ಆ ಖಳನ್ನ ಕಟ್ಟಿಹಾಕಿದೆಯೋ 46ಜಲಜಾಕ್ಷಿ ಭೈಷ್ಮೀ ಪ್ರಾರ್ಥಿಸಲು ನೀ ರುಗ್ಮಿಯಕೊಲ್ಲದೇ ವಿರೂಪ ಮಾತ್ರವ ಮಾಡೇ ಆಗಬಲರಾಮ ವಾದಿಸಿ ಬಿಡುಗಡೆ ಆಗಿ ಆಖಳಓಡಿ ಪೋದನು ಭೋಜಘಟಕ್ಕೆ47ಜಯ ಕೃಷ್ಣ ಶ್ರೀರುಕ್ಮಿಣಿ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರುವಿಪ್ರಮುತ್ತೈದೆಯರುಜಯ ಜಯ ಎನ್ನುತ್ತ ಆನಂದದಿ ಮುಳುಗಿದರು 48ಯದುಪುರಿಯಲ್ಲಿ ಮನೆಮನೆಯಲ್ಲಿ ಮಹೋತ್ಸವವುಮುದದಿ ಅಲಂಕೃತರಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ಜಲ ದೀಪಾವಳಿ ಪೂರ್ಣ ಕುಂಭಗಳುಚೆಂದ ಗೊಂಚಲು ಪುಷ್ಪ ರತ್ನ ತೋರಣಗಳು 49ಸಂಜಯ ಕುರುಕೇಕಯಾದಿ ರಾಜರುಗಳುರಾಜಕನ್ಯೇಯರ ಗಜಗಳ ಒಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆಯ ಪೊಗಳಿದರು ನರನಾರಿಯರೆಲ್ಲಾ 50ಚತುರ್ಮುಖ ಸುವೀರೆ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದ ಸುರರ ಮುನೀಂದ್ರರ ವೇದಮಂತ್ರಗಳಮದುವೆ ಮಹೋತ್ಸವದ ವೈಭವಏನೆಂಬೆ ಜಯ ಜಯ ಜಯತು 51ಪೂರ್ಣ ಜ್ಞÕನಾತ್ಮನೇ ಪೂರ್ಣ ಐಶ್ವರ್ಯಾತ್ಮಪೂರ್ಣ ಪ್ರಭಾನಂದ ತೇಜಸ್ ಶಕ್ತ್ಯಾತ್ಮಆ ನಮಿಪೆ ಅಚ್ಯುತಾನಂದ ಗೋವಿಂದ ವಿಭೋಕೃಷ್ಣ ರುಕ್ಮಿಣೀನಾಥ ಜಗದೇಕವಂದ್ಯ 52ಆದರದಿ ಸುರವೃಂದ ರಾಜರೂ ವಿಪ್ರರೂಯಾದವರುಗಳು ಶ್ರೀ ಕೃಷ್ಣ ರುಕ್ಮಿಣೀನಿತ್ಯಸತಿಪತಿ ಮದುವೆ ನೋಡಿ ಮಹಾನಂದಹೊಂದಿದರು ಸೌಭಾಗ್ಯಪ್ರದ ಇದು ಪಠಿಸೆ 53ಯೋಗೇಶ್ವರ ದೇವ ದೇವ ಶ್ರೀಯಃಪತಿಅನಘಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀ ರಮಾರುಕ್ಮಿಣೀಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 54ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 55-ಇತಿ ಶ್ರೀ ರುಕ್ಮಿಣೀಶ ಕಲ್ಯಾಣ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು