ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾರಿದ ಡಂಗುರ ಯಮನು ಪ ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ. ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳಾ ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕೂ ಮಲಗಿಪ್ಪಳ ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2 ಉತ್ತಮ ಗುರುಹಿರಿಯರನು ನಿಂದಿಸುವಳ ಪೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3 ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ ಡಳಿ ಮೊದಲಾದವು ದೈವವೆಂದು ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ ಲಲನೇರಾ ಸೆಳೆದು ತನ್ನಿರೋ ಎಂದು 4 ನಾಗೇಂದ್ರ ಶಯನನ ದಿನದುಪವಾಸದ ಜಾಗರ ಮಾಡದೆ ಮಲಗಿಪ್ಪಳಾ ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ ಳಾಗಿರುವಳ ಎಳೆದು ತನ್ನಿರೆಂದು 5 ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ ಉಂಡ ಶೇಷಾನ್ನುವನುಣಿಸುವಳಾ ಕೊಂಡೆ ಮಾತುಗಳಾಡಿ ಕಳವಳಗೊಳಿಪಳ ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿಗಂಡನ ಒಗೆತನವೆನ್ನುತಾ ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7 ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರ ಬಡಿದಳಿಸುತಿಪ್ಪಳ ಹಿಂ ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8 ಪತಿಗೆ ಬೇಕಾದವರ ಅಪಮಾನ ಮಾಳ್ಪಳ ಮೃತವತ್ಸ ಗೋವಿನ ಪಾಲುಂಬಳಾ ಹುತವಾದ ಅಗ್ನಿ ತೊಳೆದು ನಂದಿಸುವಳ ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9 ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳಾ ಕಳವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10 ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11 ಲಶನು ವೃಂತಕಾದಿಗಳನು ಭಕ್ಷಿಸುವಳಾ ಸೊಸೆಯರೊಡನೆ ಮತ್ಸರಿಸುತಿಪ್ಪಳಾ ಹಸಿದು ಬಂದವರಿಗೆ ಅಶನವಿಲ್ಲೆಂಬಳಾ ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12 ತುಲಸಿ ವೃಂದಾವನಕಭಿನಮಿಸದವಳ ಜಲವ ಸೋಸದೆ ಪಾನವ ಮಾಳ್ಪಳಾ ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13 ಮೀಸಲು ಮಡಿ ಎನ್ನದೆ ಭಕ್ಷಿಸುವಳ ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ ನಾಸಿಕ ಬಂಧಿಸಿ ಎಳೆ ತನ್ನಿರೋ 14 ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ ಪಾಲೆರೆವುತ ಬೀಸುತ ಕಟ್ಟುತಾ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ ಲೋಲನ ಗುಣವ ಪಾಡುವರ ಮುಟ್ಟದಿರೆಂದು15 ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16 ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ ಬಗೆಬಗೆಯಿಂದ ಪಾಡುತಲೀ ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
--------------
ಜಗನ್ನಾಥದಾಸರು
ಇಂಥ ಬುದ್ಧಿಯಲ್ಲಿ ಸೇರಿತೊ ಕೃಷ್ಣ ಗೋಕುಲದೊಳುಎಂಥವರೂ ನಿನ್ನ ದೂರು ಹೇಳುತಿಪ್ಪರೊ ಹೀಗಾದರೆ ನಿಲ್ಲರೋ ಪಗಂಡನುಳ್ಳ ನಾರಿಯರಾ ಮಂದಿಯೆಲ್ಲ ನೋಡ ಬಲು ಉ-ದ್ದಂಡತನದಲ್ಲಿ ಸೀರೆ ಸೆರಗ ಪಿಡಿವರೇ ಇಂಥ ದುಡುಕು ಮಾಡುವರೇ ||ಚಂಡಾಡುವಾಗೆನ್ನವಸನ ಮರೆತೆ ಕೊಂಡು ಪೋಗಲವಳು |ಕಂಡು ಕೊಸರಿಕೊಂಡರಿಂಥ ಸುದ್ದಿ ಹುಟ್ಟಿಸಿ ಪೇಳುವಳಮ್ಮ ಹೊಂದಿಸಿ 1ಹಿರಿಯರುಳ್ಳಾ ಸೊಸೆಯ ಕೂಡ ಒಗೆತನವ ಕೆಡಿಸುವಂತೆ |ಸರಸವಾಡುವದು ನಿನಗೆ ಸಲ್ಲುವದೇನೋ ಯನಗೆ ಭೂಷಣವೇನೋ ||ನಿರುತ ಅವಳ ತಾಯಿ ನಂದಗೋಪಗಣ್ಣಾಯೆಂದು ಕರೆಯ- |ಲರಿತೆನತ್ತೆ ದುಗಳು ನಾದಿನಿಯೆಂದು ಮನಸಿಗೆ ಚರ್ಚೆ ಮಾಡಿದೆನೀ ಬಗೆ2ಕುಲದೇವತೆಯ ಮೀಸಲು ತುಪ್ಪ ನೆಲವಿನ ಮೇಲಿಟ್ಟಿರಲು ಮದ್ದು |ಕಲಶವ ಒಡೆದು ಬಾಹುವದೆಲ್ಲ ಚಿನ್ನಾಟವೇನೋ, ಅವರು ಮುದ್ದಿಸುವರೇನೋ ||ತಿಳಿಯದೆ ನೆಳಲಿದುಯೆಂದು ಕಳ್ಳನ ಒಳಗಿರಿಸಿಹಳೇಕೆಂದು ವಡದೆ |ನೆಲಖರಿಧೋಗುವಘೃತನೋಡಲೆ ತಿಂದೆನಮ್ಮಯ್ಯ ತಪ್ಪಿರೆ ಕಟ್ಹ್ಯಾಕು ಕಯ್ಯ 3ಚಿನ್ನನಂತೆಯಾಗಿಯವರ ಮಗ್ಗುಲೊಳು ಮಲಗಿಯೆಂಥ |ಸಣ್ಣ ಕೃತ್ಯ ಮಾಡಿ ಬಾಹುವೆಂತಲ್ಲೋ ಕಂದ ಕೇಳುವರಿಗೇನುಛಂದ||ನಿನ್ನ ಸಲಿಗೆ ಬಹಳ ಕಂಡು ಇಲ್ಲದ್ದೊಂದೆ ಹುಟ್ಟಿಸುವರು |ಯನ್ನ ದಿಸವಕ್ಕೀ ಜಾರತ್ವ ಕಲಿತಿದ್ದೇನೇನೇ ನಿನಗೇನೂ ತಿಳಿಯದೇನೇ 4ಕದ್ದು ಮೊಲೆಯುಂಡು ಕರು ಬಿಟ್ಟು ಹರಕೊಂಡಿತು ನೋಡಿರಿ ಎಂಬೆಯಂತೆ |ದುಗ್ಧವೆಮಾರಿಬಾಳಿವೆ ಮಾಡುವರೆಂತು ತಾಳುವರೋ ಹೀಗಾದರೆ ನಿಲ್ಲರೋ ||ಇದ್ದಾ ಮನೆಯವರಿಗೆ ನಂಬವು ಅಂಥಾಲಾಳ ಮೊಲೆಯ ನಾನುಂಡರೆ ಮೋರೆಗೆ |ಒದ್ದರೆ ರೋದನ ಮಾಡುತ ನಿನ್ನ ಬಳಿಗೊಂದಿನ ಬಾರೆನೇ ಹುಡುಗರಿಗಂಬುವ ಮಾತೇನೇ 5ಇಡಲುದಕವ ಬೆರಸಿ ಮಜ್ಜನಕೆ ಛಲದಿಂದಲಿ ಚಲ್ಲಿ ಬಾಹುವರೇ |ಬಡಿವೆನೊ ನಾ ತಾಳದೆ, ಮುದ್ದಾದರೆ ಮತ್ತೊಮ್ಮೆಯುಣಬೇಕು ಆಡುತ ಮನೆಯೊಳಗಿರಬೇಕು ||ಹುಡುಗರ ಸಂಗಡ ಅಣ್ಣನೂ ನಾನೂ ಇದ್ದೆವೆ, ಅಲ್ಲಾಕೆಯ ಮೊಮ್ಮಗನು |ಗಡಿಗೆಯ ಉರುಳಿಸೆ ನಾ ಕಂಡವರಿಗೆ ಹೇಳಿದೆನೆ ಇಷ್ಟಾ ಯನ್ನನು ಕಾಡುವದದೃಷ್ಟಾ 6ಎದೆಗಳ ಮುಟ್ಟುವದೇಕೋ ಎರಕೊಂಬುವರಲ್ಲಿಗೆ ಪೋಗಿಯಿನ್ನನ್ನಾ |ಹದದಿಂದಲೆ ಯಿರು ಶಿಕ್ಷೆಯ ಮಾಳ್ಪೆ ಎಚ್ಚರಿಕೆಯಿರಲಿ ಕಾಲ್ಪಡಿದರೆ ಬಿಡೆನೋ ಮರಳಿ ||ಮುದದಿಂದಲಿ ಚಂಡೊಗೆಯಲು ಅವಳಾ ಬಚ್ಚಲಿಯೊಳು ಬಿತ್ತು ತಕ್ಕೊಂಡೇ |ಹದ ತಪ್ಪಿದರೀ ಹೆಂಗಸರೆಲ್ಲಾ ಪ್ರಾಣೇಶ ವಿಠಲನಾಣೇ ಸುಳ್ಳಲ್ಲವು ಕಾಣೇ 7
--------------
ಪ್ರಾಣೇಶದಾಸರು
ಎಲ್ಲಿ ಬೆಣ್ಣೆಯ ಬಚ್ಚಿಡುವೆನಾ-ಈ |ಕಳ್ಳ ಕೃಷ್ಣನ ಹಾವಳಿ ಘನವಾಯಿತು ಪನೆಲುವು ನಿಲುಕದೆಂದಿಡುವೆನೆ-ನೋಡೆ |ಬೆಳೆಯಬಲ್ಲನಿವ ಬ್ರಹ್ಮಾಂಡಕೆ ||ತಿಳಿಸದೆ ಕತ್ತಲೊರೆಳಿಡುವೆನೆ-ಅಕ್ಕ |ಬೆಳಕೆಲ್ಲವೀತನ ಕಂಗಳ ಢಾಳ 1ಎವೆಯಿಕ್ಕದಲ್ಲಿ ಕಾದಿಡುವೆನೆ-ನೋಡೆ |ದಿವಿಜರೆಲ್ಲ ಈತನಮಾಯೆ||ಅವರಬಳಿಗೆ ಮೊರೆಯಿಡುವೆನೆ-ಅಕ್ಕ |ಇವನಿಟ್ಟ ಬಂಟರಿಂದ್ರಾದಿಗಳೆಲ್ಲರು 2ಈಗಲೆ ಇಂತು ಮಾಡುವನು-ಮುಂದೆ |ಅಗಲಿಸುವನು ನಮ್ಮ ಒಗೆತನವಮ್ಮ ||ಕೂಗಿ ಹೇಳಲು ಮತ್ತೆ ಕೇಡಮ್ಮ-ಮುಂದೆ |ಹೇಗೆ ಪುರಂದರವಿಠಲನಟ್ಟುಳಿಗೆ? 3
--------------
ಪುರಂದರದಾಸರು
ಮುತ್ತು ರತ್ನದಕೋಲಮತ್ತಮಲ್ಲಿಗಿಕೋಲತತ್ವ ಸೂಸ್ಸಾಡುವಕೋಲಮಿತ್ರೆಯರು ಹರುಷದಿ ಎತ್ತಿ ಕೋಲ್ಹಾಕುವಅತ್ಯಂತ ಸೊಬಗಿನಕೋಲಪ.ನಳಿನಾಕ್ಷಿಯರ ಮನ ಕೊಳಲೂದಿ ರಾತ್ರಿಲೆಸೆಳಿದೆಲ್ಲ್ಯೊಕಪಟಭಾವದಲೆ ಕೃಷ್ಣಸೆಳಿದೆಲ್ಲ್ಯೊಕಪಟಭಾವದಲೆಎಳೆಯ ಮಕ್ಕÀಳುಗಂಡಉಳಿದ ಭಾಗ್ಯವ ಬಿಟ್ಟುಅಳೆದೆಲ್ಲೊಅವರಒಗೆತನವ1ಕಂಜಾಕ್ಷ ಶ್ರೀಕೃಷ್ಣ ರಂಜಿಸಿ ಕೊಳಲೂದಿಮಂಜುಳ ಸ್ವರಕೆ ಮೋಹಿಸುತ ಬಾಲೆಮಂಜುಳ ಸ್ವರಕೆ ಮೋಹಿಸುತಕುಂಜರಗಮನೆಯರು ಸಂಜಿಲೆ ಬಂದರುಅಂಜದೆ ಅತ್ತೆಮಾವರಿಗೆ 2ಭಾವಮೈದುನರನ್ನ ಕೇವಲ ತುಚ್ಛಿಸಿಧಾವಿಸಿ ಬಂದ ಬಾಲೆಯರ ಕೃಷ್ಣಧಾವಿಸಿ ಬಂದ ಬಾಲೆಯರಪಾವನ ಮಾಡದೆ ದೇವ ರಾತ್ರಿಯೊಳುಯಾವ ಪಾಶವ ಬಿಡಿಸಿದಯೊ 3ತಂದೆತಾಯಿ ಬಳಗ ಬಂಧು ಜನರ ಬಿಟ್ಟುಹೊಂದಲು ನಿನ್ನಂಘ್ರಿಗಾಗಿ ಕೃಷ್ಣಹೊಂದಲು ನಿನ್ನಂಘ್ರಿಗಾಗಿಬಂದ ಕಾರಣವ ಒಂದೂ ಮಾತಾಡದೆಕಂದಿಕುಂದಿಸಿದೆಲ್ಲಾ ಅವರ 4ಚಿತ್ತ ಚಂಚಲವಾಗಿ ಎತ್ತಿಗೆ ಮುರವಿಟ್ಟುಮತ್ತೊಂದು ಹೋರಿಯ ತರಿಸೆ ಬಾಲೆಮತ್ತೊಂದು ಹೋರಿಯ ತರಿಸೆಹತ್ತಿರಿದ್ದವರೆಲ್ಲ ಅತ್ಯಂತ ನಗುವರುಒಂದು ಅರ್ಥಿಯು ಮಾಡಿಸಿದೆಲ್ಲೊ 5ಮಂಗನ ಮರಿಯೆತ್ತಿ ಅಂಗಿಯ ತೊಡಿಸುತರಂಗನ ಬಳಿಗೆ ಬಾರೆಂದು ಕಂದರಂಗನ ಬಳಿಗೆ ಬಾರೆಂದುಅಕ್ಕ ತಂಗಿಯರು ಕಂಡು ಹಂಗಿಸಿ ನಗುವರುಶ್ರೀರಂಗ ಮಾಡಿದ ಕೌತುಕವ 6ಬೆಕ್ಕಿನ ಬಾಯೊಳಗೆ ಇಕ್ಕುತ ತುತ್ತನೆಚಿಕ್ಕ ಕಂದಯ್ಯ ಉಣ್ಣೆನುತ ಬಾಲೆಚಿಕ್ಕಕಂದ ಉಣ್ಣೆನುತ ನಕ್ಕರುಗೆಳತಿಯರು ಚಕ್ಕನೆ ಜರಿದರುಚಕ್ಕಂದವೇನು ಮಾಡಿದೆಯೊ 7ಪಟ್ಟಿ ಮಂಚದ ಮೇಲೆ ಬಿಟ್ಟು ಕಂದನ ಬಾಲೆತೊಟ್ಟಿಲ ತೂಗಲು ಭರದಿ ಬಾಲೆತೊಟ್ಟಿಲ ತೂಗಲು ಭರದಿಬಟ್ಟಿ ಬಂದವರು ಅಷ್ಟೂರು ನಗುವಂತೆಎಷ್ಟು ಸೋಜಿಗವ ಮಾಡಿದೆಯೊ 8ಉಟ್ಟ ಪೀತಾಂಬರ ಬಿಟ್ಟು ಹಾಕಿಸಿ ಮ್ಯಾಲೆಕೃಷ್ಣನ ಕೊಳಲು ಲಾಲಿಸುತ ಬಾಲೆಕೃಷ್ಣನ ಕೊಳಲು ಲಾಲಿಸುತ ಧಿಟ್ಟನಕೊಳಲೊಳು ಧಿಟ್ಟೆ ಲಾಲಿಸಿದಳುಶ್ರೀಕೃಷ್ಣ ಮಾಡಿದ ಕೌತುಕವ 9ಕಾಲಿನ ಗೆಜ್ಜೆಯು ಮ್ಯಾಲೆ ಕೊರಳಿಗೆಕಟ್ಟಿಮೇಲಾದ ಸರ ಕಾಲಿಗ್ಹಾಕಿ ಬಾಲೆಮೇಲಾದ ಸರ ಕಾಲಿಗ್ಹಾಕಿಶಾಲೆ ಹಂಬಲ ಬಿಟ್ಟು ಲೋಲಾಕ್ಷಿ ನಡೆದಳುಕೋಲಾಹಲವ ಮಾಡಿಸಿದಿಯೊ 10ಹಣೆಗೆ ಕುಂಕುಮ ಗಲ್ಲಕ್ಕೆ ಕಾಡಿಗೆಚಲ್ವ ಫಣಿಗೆ ಅರಿಷಿಣವು ಬಾಲೆಚಲ್ವ ಫಣಿಗೆ ಅರಿಷಿಣವುನಲ್ಲೆಯರೆಲ್ಲರು ತಮ್ಮ ವಲ್ಲಭರನ ಬಿಟ್ಟುಅಲ್ಲೆ ರಾತ್ರಿಲೆ ಒರಗಿದರು 11ಕಜ್ಜಲ ನೇತ್ರಿಯರ ಲಜ್ಜವಗೈಸಿದೆಸಜ್ಜಾಗಿ ಕೊಳಲೂದಿದೊಮ್ಮೆಸಜ್ಜಾಗಿ ಕೊಳಲೂದಿಗುಜ್ಜಿರಮಾದೇವಿಹೆಜ್ಜೆ ಹೆಜ್ಜೆಗೆ ಹಂಗಿಸುವಳುಅರ್ಜುನ ಆಡಿದ ನಗುತ ರಾಮೇಶ ಇದಕೆ ಮೆಚ್ಚಿದ12
--------------
ಗಲಗಲಿಅವ್ವನವರು
ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.ಆರುಮಂದಿ ಗಂಡರಾಳುವರು ಎನ್ನಆರುಮಂದಿಗೆ ಮೂರು ಸುತರೆನಗೆಆರು ಮೂರೇಳ್ಪರುಭಾವ - ಮೈದುನರೆಲ್ಲಆರರೆಂದರೆ ಬಿಡರು ಆರಿಗುಸುರಲಮ್ಮ 1ಹತ್ತುಮಂದಿ ಬೆನ್ನ ಮುತ್ತಿಕೊಂಡರೆಮತ್ತೆ ಬಿಟ್ಟೆನೆಂದೆ ಬಿಡಗೊಡರುಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2ಪಂತರೈವರು ಎನ್ನ ತೊಂತ ಹಂತಯೆಂದುಸಂಚಿತದ ಕರ್ಮವನುಣಿಸುವರುವಂಚನೆಯಳಿದ ಪ್ರಪಂಚವನು ಕಳೆದಿಹಮಿಂಚಿನ ಪರಿಯವಿರಿಂಚಿಬರೆದಿಹನಮ್ಮ3ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿಭ್ರಷ್ಟ ಆತ್ತೆಯು ಮೈತ್ಯುವಾಗಿಹಳುಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನುದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4ಒಂಬತ್ತು ಬಾಗಿಲ ಊಳಿಗವನು ಮಾಳ್ಪಕುಂಬತದ ನರತ ಕಾವರ ದಾಳಿಢಂಭಕವನು ಬಿಟ್ಟು ಇಂಬಿನೊಳಟ್ಟು ವಿಶ್ವಂಭರ ಪುರಂದರವಿಠಲ ಧ್ಯಾನದಗುಟ್ಟು5
--------------
ಪುರಂದರದಾಸರು