ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು