ಮದ್ದಾನೆ ಗತಿ ಸಖಿ ಬಾರಮ್ಮಾ||
ಮುದ್ದು ಮೊಗದ ರಂಗನ ತಂದು ತೋರಮ್ಮಾ 1
ಇಂದು ಎನ್ನ ಚಿತ್ತ ಸ್ವಸ್ಥವಾಗದೇ|
ಒಂದುಗಳಿಗಿ ಕ್ರಮಣವಾಗಿ ಹೋಗದೇ 2
ಬಿಗಿದವೇನೆ ಮಾಯಿ ಫಣಿಗಳು|
ವೇಗದಿಂದ ಬರುತಿದೇ ತಂಗಾಳಿಗಳು 3
ಮಂದರಧರನು ಯಾಕೆ ಬಾರನೇ|
ಚಂದ್ರ ಕಿರಣ ಝಳಕ ನಿಲ್ಲಲಾರೆನೇ 4
ಮೊದಲೆನ್ನ ಬಿನ್ನಹವ ಹೋಗಿ ನೀನು ಹೇಳಮ್ಮಾ 5
ಮೊದಲೆನ್ನ ಕೈಯ್ಯಾ ತಾ ಹಿಡುವರೇ|
ತದನಂತರದಿ ತಪ್ಪ ನೋಡುವರೇ 6
ಆರಿಸಿಬ್ಯಾಡೆಂದು ಹೇಳಿ ಕುಂದೆನ್ನಾ|
ಕರೆತಾರೆ ಮಹಿಪತಿ ಸುತ ಜೀವನಾ 7