ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಿಲ್ಲದ ಮೇಲೆರಡುಂಟೇ ಭಕ್ತಿ ಒಂದಲ್ಲದೆ ಹರಿಯೊಲವುಟೇ ಪ ರುಚಿ ಔಷಧಿಯುಂಟೇ ನೊಂದಲ್ಲದೆ ರಂಗಾ ಎಂಬುವುದುಂಟೇ ಅ.ಪ ಗಿಡಮರವಾಗದೆ ಕೃಮಿಯಾಗುವೆನೇ ಅಡವಿಯೊಳಿರದೆ ಗೋವಾಗುವೆನೇ ಪಡೆಯದೆ ಪುಣ್ಯವ ನರನಾಗುವೆನೇ ಮೃಡನ ಪೂಜಿಸದೇ ದ್ವಿಜನಾಗುವೆನೇ 1 ಸುಗುಣವಿರದೆ ಮಾತಿನಿದಾಗುವುದೇ ಸೊಗಮಿಲ್ಲದೆ ಬಾಯಿ ನಗೆದೋರುವುದೇ ಸುಗುಣವಿಲ್ಲದೆ ನಿರ್ಗುಣಬಹುದೇ ಮುಗಿಲಿಲ್ಲದೆ ಮಳೆ ಧರೆಗೆ ಬೀಳುವುದೇ 2 ತಂಗಿದ್ದಲ್ಲದೆ ಭಾವ ಎಂಬೋದುಂಟೋ ಹಂಗಿ[ಗ]ಲ್ಲದೆ ಮರೆ ಹಿತಕುಂಟೋ ತಂಗಿನೋಡಲು ಭಾವ ಮರೆಯಹುದುಂಟೋ ಮಾಂಗಿರಿರಂಗ ನೀನೆನ್ನಯ ನಂಟೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ 1 ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ ಕಾಲ ಬದಕುವುವದ್ಯಾಕೆ ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ 2 ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು