ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಬೇಡಲಿ ನಾನು ಏನ ನೀಡುವೆಯೋ ನೀನು ನೀನೆನ್ನ ಪ್ರಭುವಾಗಿರೆ ಹೇಳೋ ರಂಗ ಪ ನಾನಿನ್ನ ವಂದಿಸಿ ಧ್ಯಾನವ ಗೈವಾಗ ಏನನೀ ಕೊಡಲಾರೆ ಹೇಳೋ ರಂಗಯ್ಯಅ.ಪ ಕರಣಕಾರಣ ನೀನು ಕೊರಡಬೊಂಬೆಯು ನಾನು ಕರವ ಪಿಡಿದು ಎನ್ನ ನಡೆಸುವೆ ನೀನು ಕಾನನ ಸಿರಿ ಸುಖ ಭೋಗವು ಸ್ಥಿರವಲ್ಲ ಹರಿ ನಿನ್ನ ಚರಣಸೇವೆಯೆ ಸಾಕೋ 1 ಬೇಡಿ ಬೇಡಿ ನಿನ್ನ ಕಾಡುವ ಮನವೀಯಬೇಡಯ್ಯ ನೀಡಯ್ಯ ಮಂಗಳನಾಮಂಗಳ ಪಾಡಿ ಕೊಂಡಾಡುತ ನಾಡೆ ವಂದನೆಗೈವ ರೂಢಿ ಒಂದಿರಲಿ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ಪ ಆಚಾರಿಯೆನಲಿ ಬಹು ದು | ರಾಚಾರಿಯೆನಲಿ ಜನರೆಲ್ಲನೀಚನೆಂದೆನಲಿ ಅನದಿರಲಿ 1 ಜ್ಞಾನಿ ಎಂದೆನಲಿ ದುರ್ಮಾರ್ಗ | ನಾನೆನಲಿ ಜನರೆಲ್ಲ ಬಹು ಮಾನವಂತನೆನಲಿ ಅನದಿರಲಿ 2 ಪಾಪಿಯಾಗಿರಲಿ ಬಹು ಸಂ | ತಾಪಿಯಾಗಿರಲಿ ಜನರೆಲ್ಲಪಾಪಿಯೆಂದೆನಲಿ ಅನದಿರಲಿ 3 ರಾಗವೇ ಬರಲಿ ಬಹು ವೈ | ಭೋಗವೇ ಬರಲಿ ವಿಷಯ ನಿಯೋಗವೇ ಬರಲಿ ಬರದಿರಲಿ 4 ಒಲಿದರೆ ನೀ ವ್ಯಾಸವಿಠಲ ಜನ | ರೆಲ್ಲ ಮತ್ತ್ಹಳಿಯುತಿರಲಿ ಇರದಿರಲಿ ಏನಾದರಾಗಲಿ ಹರಿಯೆ 5
--------------
ವ್ಯಾಸವಿಠ್ಠಲರು
ಶರಣು ಗುರು ಬ್ರಹ್ಮಣ್ಯ | ಶರಣು ಶಿರಿ ಸುರಮಾನ್ಯಪರಿಹರಿಸು ಭವತಾಪ | ಬಿನ್ನವಿಪೆ ಮುನಿಪ ಪ ಪುರುಷೋತ್ಮ ಕರಜಾತ | ಕಣ್ವತಟದಲಿ ಖ್ಯಾತನರಹರಿಯ ಪದಕಮಲ | ಭಜಕಶೀಲಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪಪರಿಹರಿಸೊ ಮುನಿಮೌಳಿ | ನಾನು ಪದಧೂಳಿ 1 ಯೋನಿ ಅನೇಕದಲಿ | ಬಂದಿರುವೆ ನಾಬಳಲಿಮಾನ ನಿಧಿ ನೀಯನ್ನ | ಕಾಯೊ ದಯ ಪೂರ್ಣ |ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ 2 ವಿಕಳ ಮತಿಯನು ಹರಿಸು | ಅಕಳಂಕನೆಂದೆನಿಸುಸುಖತೀರ್ಥ ಮತ ಸುಧೆಯ | ಉಣುವ ಪರಿಯ |ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ 3 ಸುಕೃತ ಒಂದಿರಲಿ | ನಿನ್ನ ದಯವಿರಲಿ 4 ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವಸುಷ್ಠು ಹೃದ್ಗುಹದಲ್ಲಿ | ಕಾಣಿಪುದು ಅಲ್ಲಿ 5
--------------
ಗುರುಗೋವಿಂದವಿಠಲರು
ಶ್ರೀ ವೇಣುಗೋಪಾಲಕೃಷ್ಣಮೂರ್ತೇ ಪ ಕಾವುದೀತನ ನಿನ್ನ ದಾಸನೆಂದನವರತಅ.ಪ ಕಾಯದಿಂದಲಿ ನಿನ್ನ ಚರಣಸೇವೆಯ ಮಾಡಿ ತೋಯಜಾಂಬಕ ನಿನ್ನ ನಾಮ ವಾಚಿಸುತ ಮೂರ್ತಿ ಮಾನಸದಿ ಧೇನಿಸುತ ಈ ಉಪಾಸನೆಯನ್ನನವರತ ಕೊಡು ದೇವ 1 ಲೌಕಿಕದಲ್ಲಿದ್ದರು ಲೋಕೈಕನಾಥನೆ ಏಕಾಂತದಲಿ ನಿನ್ನ ನೆನಪು ಒಂದಿರಲಿ ಮಾಕಳತ್ರನೆ ನಿನ್ನ ಸಕಲಮಂಗಳವಿತ್ತು ಲೋಕದೊಳು ನಿನ್ನ ಭಕುತರೊಳಿಡು ಇನ್ನು 2 ಪವನಾಂತರಾತ್ಮ ಶ್ರೀ ವೇಂಕಟೇಶಾತ್ಮಕ ಶ್ರೀ ವೇಣುಗೋಪಾಲಕೃಷ್ಣಮೂರುತೇ ಭಾವಶುದ್ಧನಮಾಡಿ ಶ್ರೀವರನ ದಾಸರ ಸೇವೆಯನು ಕೊಟ್ಟು ಭವದುಃಖವನೆ ಹರಿಸೊ3
--------------
ಉರಗಾದ್ರಿವಾಸವಿಠಲದಾಸರು