ಒಂದೆ ಮಾತನು ಕೇಳು ಒಂದೆ ನುಡಿಯ ಕೇಳು
ಒಂದಿಪೆ ನಿನ್ನ ನಾನಿಂದು ಮಂದರಧರ
ಚಂದದಿ ನೀತೆನಗಿಷ್ಟವರಾ ಪ
ದುರಿತ ತನ್ಮಯವಾಗಿ ಇರುತಿರ್ಪ ಭವದೊಳು
ಕಂಟಕ ಹೋರಿ ಹೋರಿಯು
ಹರಿನಾಮ ಮಂತ್ರವ ಮರೆಯದೆ ಜಪಿಸಲು
ಉರಿದರ ತಕ್ಷಣದೊಳು ಗಮಿಸುವವು 1
ಭವ ಬಾಧೆಗೆ ಶಿಲ್ಕಿ ತಾ
ಶೋಧಿಸುತಿರೆ ನರ ಬಾದ್ಯವನು
ಆದಿಮುನಿಯು ರಾಮ ಬೋಧನೆ ಪೇಳಲು
ಬೂದಿಗೈದವಘರಾಶಿಗಳು 2
ಸುರಗಣನಾಯಕ ನರಸಿಂಹವಿಠಲ ಪೊಗಲಳವೆ ನಿನ್ನ
ವರಲೀಲೆಯು ಮರೆಯದೆ ಪಿಡಿದಿಹೆ ನಿನ್ನಂಘ್ರಿಕಮಲವ
ನಿರುತದಿ ನೀಡೋ ನೀ ಸೇವೆಯನು3