ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ ತಾಳು ಕ್ಷಮೆಯ ಕೃಪೆದೋರಿ ಕೇಳು ಸಂಸೃತಿ ದುಃಖ ತಾಳಲಾರೆನು ಮಾತ ನಾಲಿಸು ಮಲ್ಲಕಂಸಾರಿ ಪ. ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು ಸಾರಿ ಕಡೆಗೆ ಮಾನುಷ್ಯವನು ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ ಗಾರು ಮಾಡುವುದನೇನೆಂಬೆ 1 ದೂರಾಪುರದ ಕಾಮ ವಾರುಧಿವಳಗೀಸ ಲಾರದೆ ಬಾಯಬಿಟ್ಟೊರವೆ ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು- ರಾರಿ ನೀನ್ಯಾಕೆನ್ನ ಮರೆವೆ 2 ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ ಮುದ್ದೆಯಂತಾಯ್ತನಂತರದಿ ಹದ್ದಿನಂದದಿ ಹಂಗಿನನ್ನವ ಕಾಯುತ್ತ ಇದ್ದೆನು ಪರರ ಮಂದಿರದಿ 3 ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು ಬಿದ್ದು ಹೊರಳಿ ಬಹು ಬಳಲಿ ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ- ರುದ್ಧರಿಸೆನ್ನ ಬೇಗದಲಿ 4 ನೇಮವ್ರತಗಳನೊಂದಾದರು ಮಾಡದೆ ಕಾಮಲಾಲಸನಾದೆ ಬರಿದೆ ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ ಧಾಮನ ಬಿಡೆ ನಿನ್ನ ಸ್ಮರಣೆ 5 ಸಾಮಜೋದ್ಧಾರ ಸಕಲಸುರವೈರಿ ನಿ- ರ್ನಾಮವತಾರ ಭೂಧಾರ ನಿತ್ಯ ಸವಿದು ಬಾಳುವ ಮುಖ್ಯ ಕಾಮಿತಾರ್ಥವ ನೀಡು ವರದಾ 6 ಸುರಮುನಿ ಪಿತೃಋಣ ಭರವ ನೀಗುವ ಮೂರು ಕಾಲ ಕಳೆದೆ ವರ ದೇವಾಲಯ ಕೂಪಾ ರಾಮಯಜ್ಞಾದಿ ಸ- ತ್ಕರಗಳ ವಾರ್ತೆಯ ತೊರೆದೆ 7 ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ ಸರಿಯಲ್ಲ ಎನಗೆಂದು ತಿಳಿದೆ ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ- ಳಿರುವೆ ಈ ಪರಿಯಿನ್ನು ಥರವೆ 8 ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ ಸಾಕೆಂಬ ಶ್ರುತಿ ಪುರಾಣಗಳು ವಾಕಾನುವಾಕುಗಳು ಸುರಿದ ಸರ್ವಜ್ಞ ಶ್ರೀಕರ ಪಾದದ ಮತವ 9 ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ- ನ್ಯಾಕಿನ್ನು ಡಾಂಭಿಕರ ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ ಬೇಕು ಶ್ರೀವರ ನಿನ್ನ ಪಥವಾ 10
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ ಪ ಈ ಕರೆಕರೆ ಸಂಸಾರಶರಧಿಯೊಳು ನಿಂದೆ ಹರಿಯೆ ನಿಲ್ಲೊಂದರಘಳಿಗೆಯಾದರೂ ಮನದಿಅ.ಪ ತೋಯಜಾಂಬಕ ನಿನ್ನ ನಾನೆಂದಿಗೆ ಕಾಯದೊಳು ಕಾಂಬೆನೊ ಮಾಯಾರಮಣನೆ ನೀ ಮಾಯವ ಹರಿಸಯ್ಯ ಆಯಾಸಗೊಳಿಸದೆ ಕಾಯುವುದೀಗಲೆ 1 ನಾನಾಯೋನಿಗಳಲ್ಲಿ ನಾ ಬರಲಂಜೆನೋ ಶ್ವಾನಸೂಕರ ಜನ್ಮದಿ ನೀನಿಟ್ಟರಾದರು ಶ್ರೀನಿಧಿಯೆ ನಿನ್ನಯ ಸ್ಮ- ರಣೆ ಒಂದಿದ್ದರೆ ನಾ ಧನ್ಯ ಧನ್ಯನೋ2 ಲೋಕಾಲೋಕೋದ್ಧಾರನೆ ನಿನ್ನಾಜ್ಞೆಯಿಂ ನಾಕೇಶ ಮೊದಲಾದ ಪಿ- ನಾಕಿ ಪ್ರಮುಖರು ಅನೇಕ ಕಾರ್ಯವೆಸಗಿ ಶೋಕಪಡಿಸುವರಯ್ಯ 3 ದುರ್ಗಾಶ್ರೀರಮಣ ಎನ್ನ ಸಂಸೃತಿಯೆಲ್ಲ ದುರ್ಗಮವಾಗಿಹುದೊ ಸ್ವರ್ಗ ಅಪ- ವರ್ಗಪ್ರದನೆ ಎನ್ನಯ ಭವ- ದುರ್ಗಕಡಿದು ಸನ್ಮಾರ್ಗ ಕರುಣಿಸೊ 4 ಸ್ವಾಮಿತೀರ್ಥದಿವಾಸ ಶ್ರೀಜಗದೀಶ ಸ್ವಾಮಿ ಶ್ರೀ ವೆಂಕಟೇಶ ಪಾಮರನಾದೆನ್ನ ತಾಮಸ ಹರಿಸಿ ಹೃತ್ಕಮಲದಲಿ ನಿಲ್ಲೊ ಕಮಲಾಪತಿಯೆ ದೇವ 5
--------------
ಉರಗಾದ್ರಿವಾಸವಿಠಲದಾಸರು
ಸಾರಿ ಧ್ಯಾನ ಒಂದಿದ್ದರೆ ಸಾಕೆಲೊ ಸಂ ಸಾರ ತ್ಯಜಿಸುವುದ್ಯಾಕೊ ಪ ಹಿಂಸೆಗುಣಗಳನ್ನು ತ್ಯಜಿಸಿ ಸತತ ಅ ಹಿಂಸೆಯೆಂಬ ಧರ್ಮ ಗಳಿಸಿದರಾಯ್ತೆಲೊ ಅ.ಪ ಜಡಭವತೊಡರನು ಕಡಿದುರುಳಿಸುತ ದೃಢದೆ ಬಿಡದೆ ಕಡುಸತ್ಯ ನುಡಿಯುತ ಅಡಿಗಡಿಗೊಡಲೊಳು ಜಡಜನಾಭ ಜಗ ದೊಡೆಯನಡಿಯ ಧ್ಯಾನಿವಿದ್ದರದೊಂದೆ ಸಾಕೊ 1 ಮೋಸ ಠಕ್ಕು ಕ್ಲೇಶಗುಣ ಕಳೆದು ಭವ ಮೋಸದ ಫಾಸಿಯ ಮೂಲವ ತುಳಿದು ಆಸೆನೀಗಿ ಮನ ಬೆರಿಯದೆ ಜಗ ದೀಶನ ಸಾಸಿರನಾಮ ಧ್ಯಾಸದಿರೆ 2 ಶುನಕನ ಕನಸಿನ ಪರಿಭವನೆನುತ ತನುಮನಧನವೀಡ್ಯಾಡುತ ಅನುದಿನ ಮನಸಿಜನ ಶ್ರೀರಾಮನ ಚರಣವ ಘನತರಭಕುತಿಲಿ ನೆನೆಯುತ ಕುಣಿಯಲು 3
--------------
ರಾಮದಾಸರು