ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡವೆ ಹೋಯಿತು ಮನ ದೃಢವಾಯಿತು ಪ ಹಿಡಿದರೋಡುವ ಕಳ್ಳ ಬಿಡದೆ ಕದ್ದುಕೊಂಡು ಹೋದಅ ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತುಚಾರುತರದ ಇಪ್ಪತ್ನಾಲ್ಕೆಳೆಯ ಸರವು ಒಂದಿತ್ತುಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತುದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ 1 ಎಪ್ಪತ್ತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತುಕಪ್ಪು ಬಿಳುಪು ಕೆಂಪು ವರ್ಣದ ಪದಕ ಒಂದಿತ್ತುಒಪ್ಪವಿತ್ತ ಹಸ್ತಕಡಗ ಆಶಾಪಾಶವೆರಡಿತ್ತುಒಪ್ಪವನ್ನು ಸಾಧಿಸಿ ನೇತ್ರನೆಂಬ ಕಳ್ಳ ಕದ್ದ 2 ಹುಟ್ಟು ಸಾವು ಎರಡು ಎಂಬ ಘಟ್ಟಿ ತೂಕದ ನಗವಿತ್ತುಕಷ್ಟ ಸುಖ ಕರ್ಮಗಳೆಂಬ ಸಂಚಿಗಳಿತ್ತುಅಷ್ಟು ಇಷ್ಟು ಚಿಲ್ಲರೆ ಒಡವೆ ಪೆಟ್ಟಿಗೆಯಲಿ ತುಂಬಿತ್ತುದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಕದ್ದ 3 ಎಲ್ಲ ಒಡವೆ ಹೋಯಿತಾದರು ಪುಲ್ಲಳಾಗಿ ಮೆರೆಯುತಾಳೆಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆಬಲ್ಲಿದಳು ಈಕೆ ಎಂದು ಇವಳ ಬಗೆ ತಿಳಿಯಿತೆಂದುಕೊಲ್ಲಬಾರದೆನುತ ಹೇಳಿ ಮನೆಯ ಬಿಟ್ಟು ಹೊರಗಟ್ಟಿದ4 ಇಂಥ ಒಡವೆ ಹೋಯಿತೆಂದು ಚೋದ್ಯಪಟ್ಟು ನೋಡುತಿರಲುತಂತ್ರ ಮಾಡಿ ಆದಿಕೇಶವ ಶ್ರೀಹರಿಯು ತಾನೆ ಬಂದುತಂತ್ರವನ್ನು ಹೇಳಿ ಜ್ಞಾನ ಮಾರ್ಗವನ್ನು ಬಿಟ್ಟುಕೊಟ್ಟುಸಂತಸದಿಂದ ಇರು ಎಂದು ಚಿಂತೆ ಬಿಡಿಸಿ ಸಲೆ ಸಲಹಿದ 5
--------------
ಕನಕದಾಸ
ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ ನಾನು ದೃಷ್ಟಿಯಿಂದಲಿ ನೋಡು ಮನಮುಟ್ಟಿ ಭಜಿಸುವೆನು ಸೃಷ್ಟ್ಯಾದಷ್ಟ ಕರ್ತಾ ವಿಠಲಗುಣಶೀಲ ಅಷ್ಟಯತಿಗಳಿಂದ ಇಷ್ಟದಿ ಪೂಜೆಗೊಂಡ ಮದವೋ ಅಟ್ಟಹಾಸದಿಂದಲಿ ಬೆಟ್ಟ ಬೆರಳಿನಿಂದಲಿನೆತ್ತಿದ ಮದವೊ ದಿಟ್ಟಮೂರುತಿ ನಮ್ಮ ಕಾಳೀಮರ್ಧನಕೃಷ್ಣ ಮನೋಭೀಷ್ಟೆಯ ಕೊಡೋ 1 ಇಂದಿರೇಶನೆ ನಿನ್ನ ಒಂದಿನವು ನಾನು ಗೋವಿಂದ ನಿನ್ನಯ ಪಾದಾರವಿಂದವ ಭಜಿಸಲಿಲ್ಲ ಆನಂದ ಮೂರುತಿ ನಿನಗಿಂತ ಸಮಾನ ಅನಿಮಿತ್ತ ಬಂಧುಗಳು ಯನಗಿಲ್ಲ ಎನ್ನಂಥ ಭಕುತರು ನಿನಗನಂತರರಿರುವರು ನಿನ್ನಂಥ ಕರುಣೆ ಇನ್ನಿಲ್ಲ ಜಗದೊಳು ಸರ್ಪಶಯನ ನಮ್ಮ ಕಾಳೀಮರ್ಧನಕೃಷ್ಣ ನಿರುತದಿ ವೊಲಿಯೇ 2 ಸುಂದರಿಯರ ಸೇರಿ ಆನಂದದಿಂದ ಕಳೆದ ಮದವೋ ಸೇವೆಗೊಂಬುವ ಮದವೋ ಸೋಳಸಾಸಿರ ಸುದತಿಯರೊಪ್ಪುವ ಮದವೊ ಮುರಳೀಧರ ನಮ್ಮ ಕಾಳೀಮರ್ಧನಕೃಷ್ಣ ಇಷ್ಟದಿ ಒಲಿಯೆ 3 ಪಾದ ಎಂದಿಗೆ ಲಭ್ಯವೊ ಕಂದನ ನುಡಿ ಕೇಳಿ ಆನಂದ ಪದವಿಯನಿತ್ತು ಮಾನವ ಕಾಯ್ದು ವಸುದೇವ ದೇವಕಿಯ ಬಂಧನವ ಬಿಡಿಸಿದಿ ಆನಂದದಿಂದಲಿ ಅಜಮಿಳಗೊಲಿದು ಮಡುವಿನೊಳಗಿರಲು ಗಜರಾಜ ಮಡದಿಗೆ ಹೇಳದೆ ಗರುಡವಾಹನನಾಗಿ ಬಂದು ಮಕರಿಯನ್ನು ಕೊಂದ ಸಿಂಧುಶಯನ ನಮ್ಮ ಕಾಳೀಮರ್ಧನಕೃಷ್ಣ ಆಪತ್-ಬಂಧೋ 4 ಬಾಲಕತನದಲ್ಲಿ ಏನೇನು ಲೀಲೆಯ ಮಾಡಿದ್ಯೊ ಗೋಪಾಲಕೃಷ್ಣ ಮೂರುತಿ ಎಂದು ವರ್ಣಿಸಲೋ ನಿನ್ನ ಕೀರುತಿ ಗೋವುಗಳ ಕಾಯ್ದುಕೊಂಡು ಎಂದಿಗೆ ಬರುತಿ ನಿನಗೇಕೋ ಇಂಥಾ ಮದವು ಪಾರ್ಥಸಾರಥಿ ಕ್ಷೀರಸಾಗರದಲ್ಲಿ ಲಕ್ಷ್ಮೀ ಸಹಿತವಾಗಿ ಆಲದೆಲೆಯ ಮೇಲೆ ಮಲಗಿರುತ್ತೀ ಥರವಲ್ಲವೋ ನಿನಗಿಂಥ ಮದವು ಬ್ರಹ್ಮಾದ್ಯಮರ ಒಂದಿತ ಮದವು ಜಾರಚೋರ ನಮ್ಮ ಕಾಳೀಮರ್ಧನಕೃಷ್ಣ ಕರುಣಾಸಾಗರ 5
--------------
ಕಳಸದ ಸುಂದರಮ್ಮ