ಏನಾಯಿತೀ ಜನಕೆ ಮೌನವದು ಕವಿದಂತೆ |ಮಾನುಷ್ಯರಾಗಿ ಮರೆತರು ಹರಿಯನು ಪ.ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |ಮೇಲಿನ ತುಟಿ ಎರಡು ಒಂದಾಯಿತೇ -ಅವರ - |ಕಾಲಮೃತ್ಯು ಬಂದು ಕಂಗೆಡಿಸಿತೆ ? 1ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||ಹಟ ಹಿಡಿದ ಹೊಲೆಮನಸುಹರಿ ಎನ್ನಲಾರದೆ |ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2ಹರಿಯೆಂದರವರ ಶಿರ ಹರಿದು ಬೀಳುವುದೆ |ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3