ತಿಳಿಯದೈ ಶ್ರೀ ಹರಿಯೆ ನಿನ್ನ ಮಹಿಮೆ
ನಳಿನ ಸಂಭವ ಮುಖ್ಯನಿಗಮನಾಗ ಮಂಗಳಿಗೆ ಪ
ಒಂದು ಯಜ್ಞಕೆ ಪೋಗಿ ಇರುಳ್ಹಗಲು ಕಾಯ್ದಿ ಮ
ತ್ತೊಂದು ಯಜ್ಞಕೆ ಕರ್ತನಾಗಿ ಮಾಡಿ
ಒಂದು ಯಜ್ಞಕೇ ಪೋಗಿ ವಿಧ್ವಂಸ ಮಾಡಿ ಮ
ತ್ತೊಂದು ಯಜ್ಞವ ಕೆಡಸಿದನ ಮಿತ್ರನಾದೇ1
ಒಬ್ಬರಸನನ ಕುಲವ ಪರಿಪರಿ ಸಂಹರಿಸಿ
ಒಬ್ಬರಸನನ ನೆಲಿಗೆ ನಿಲಿಸಿದೈಯ್ಯಾ
ಒಬ್ಬರಸನನ ಕರಗಸದಿ ಕೊಯಿದು ಪರೀಕ್ಷಿಸಿದೆ
ಒಬ್ಬರಸನನ ಸಭೆಯೊಳಗೆ ಶಿರವ ತರಿದೇ 2
ಒಂದಾನೆ ಏರಿದನು ಪಾಯದಲ್ಲಿ ಮರ್ದಿಸಿದೆ
ಒಂದಾನೆ ಏರುವನ ಮಗನ ಕಾಯಿದೇ
ಒಂದಾನೆಯನುಕೊಂದು ರಜಕನಸುವನು ತೆಗೆದೆ
ಒಂದಾನೆಗೊಲಿದೆ ಮಹಿಪತಿನಂದ ನೋಡಿಯಾ 3