ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ಬದಲು ನಾನೊಲ್ಲೆನೊ ವಿದಿತ ವೇದ್ಯ ಪ ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ ಕುಣಿ ಕುಣಿವೆನು ನಿನ್ನ ಜನರೆಂದರೆ ಗುಣತ್ರಯ ವಾರಣ ನಿನ್ನ ವಾರುತಿಯಿರೆ ಒಣ ಹರಟೆಗಳ ನಾ ಕೇಳಲೊಲ್ಲೆ 1 ನೀಚ ಜನರಂಗಳ ಸಂಗವ ಕೊಡದಿರು ವಾಚದಿಗನ್ಯರಿಗಾಲ್ಪರಿಸಬೇಡ ಸೂಚಿಸು ನಿನ್ನಯ ಗುಣಗಣಂಗಳೆನೆ ನಾ ಯಾಚಿಪೆ ಇದನೆ ಇದನೆ ಮುರಾರೆ 2 ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು ಕಾಸು ಬಾಳದು ಕೇಳು ಕರುಣಾಬ್ಧಿಯೆ ತಾಸು ಒಂದಾದರು ಅವನೆ ಸುಜೀವಿಯೊ ವಾಸುದೇವವಿಠಲ ನಿನ್ನವರವನೊ 3
--------------
ವ್ಯಾಸತತ್ವಜ್ಞದಾಸರು
ಇನ್ನು ಏನು ತಿಳಿಯದು ಹರಿ ಪ ಪನ್ನಗಾದ್ರಿನಿಲಯ ಪರಮ ಪಾವನ್ನ ಜಗನ್ಮೋಹನ ಅ.ಪ ಎಲ್ಲಾ ಜಗನಿನ್ನೊಳಗಿಹುದು ಎಲ್ಲರೊಳಗೆ ನೀನಿರುವೈ ಬಲ್ಲಿದನು ನೀನು ನಿನಗೆ ಸಮ ಬ್ರಹ್ಮಾದಿಸುರರೊಳಗ್ಯಾರು 1 ದೀನರು ಮಾಡಿದ ಕರ್ಮವ ನೀನು ಕಳೆಯಲಾರೆಯಾ ನಾನಿದಕೆ ಭಾಗಿಯೋ ನೀನಿದ್ದು ಮಾಡಿಸಲಿಲ್ಲವೆ 2 ಎಂದೂ ನಿನ್ನ ಆಜ್ಞೆಯಿಲ್ಲದೆ ಒಂದಾದರು ಚಲಿಸುವುದೆ ತಂದೆ ತಾಯಿ ಗುರುದೈವ ನೀನೆಂದು ನಂಬಿದೆ ಇಂದಿರೇಶ3 ಶೃತಿತತಿ ಶಾಸ್ತ್ರ ಪುರಾಣಗಳತಿಶಯದಲಿ ಪೊಗಳುವುದು ಗತಿ ನೀನೆ ಎಂದನವರತವು ಕಥೆಗಳ ಕೇಳುವುದೇಕೆ 4 ಅಗಣಿತ ಗುಣನಿಧಿ ಗುರುರಾಮವಿಠಲ 5
--------------
ಗುರುರಾಮವಿಠಲ
ನಂಬಿದೆ ನಿನ್ನ ಪಾದವ ಕಾಣಬೇಕೆಂದು ಹಂಬಲಿಸಿದೆ ಮಾಧವ ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ ಕಮಲಾಂಬಕ ರಂಗಾ ಪ ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ ಇಂದಿರಾ ಮನೋವಿಲಾಸ ವೃಂದಾರಕರ ನಿಜಕೋಶಾ ಮಂದರಧರ ವಸುಂಧರಪತಿ ಪುರಂದರ ವಂದಿತ ಸುಂದರಾಂಗ ಕಂಬು ಇಂದೀಗ ತೊಂದರೆಕಿಡದಿರು 1 ತಂದಿತಾಯಿಗಳವರಾರೊ ತಾವಳಿದು ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು ಪೊಂದದೆನಲೊ ಇಳಿಜಾರು ಎಂದೆಂದಿಗಿದರ ಗಂಧದೊಳಗೆ ನಾ ಬಂದು ಬಳಲಿ ಸಂ ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ ತಂದೆ ತಾಯಿ ಸರ್ವಂದವು ನೀನೆ 2 ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ ಕುಂದಿದೆ ಎಲ್ಲ ಕಾವಿಲಿ ಬೆಂದೆನೋ ಬಲು ಕೋವಿಲಿ ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ ಇಂದು ಚರಣರವಿಂದವ ತೋರಿಸುವ ಬಂಧು ವಿಜಯವಿಠ್ಠಲೆಂದಹುದೆಂದು 3
--------------
ವಿಜಯದಾಸ
ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ- ಮ್ಮಚ್ಚುತನಾನಂತನ ನೆನವುತ ಅನುಗಾಲ ಸ್ವಚ್ಛನಾಗಲು ಹರಿ ಮೆಚ್ಚುವನು ಪ. ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ ಪಾತಕ ಫಲಕಿನ್ನು ಗುರಿಯಾದಿಯಲ್ಲದೆ ಯಾತರ ಸುಖವೆಂದೀ ಸಂಸಾರ ಕೂಪದಿ ಪ್ರೀತಿ ಬಡುವಿ ಪಂಚಬಂಧದಲಿ ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ ಘಾತವಾಗುವುದೊಂದು ನಿಮಿಷಾರ್ಧದಲಿ ಜಗ- ನ್ನಾಥ ನಂಬಿದರೆಂದಿಗು ಪದಪಂಕ- ಜಾತಪತ್ರದ ನೆರಳಿರಿಸುವನು 1 ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ- ನ್ನಾಹವಾಗಿರುವದನೇನೆಂದು ಗ್ರಹಿಸುವಿ ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ ಮೋಹವಲ್ಲದೆ ನಿಶ್ಚಯವಲ್ಲವು ಐಹಿಕಾಮುಷ್ಮಿಕವೆಂಬ ಸಕಲ ಸುಖ ದೋಹನ ಧೇನು ಸರ್ವೇಶ್ವರ ಹರಿಯ ಸ- ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ ವಾಹ ಕೈ ಬಿಡದೆ ಕಾಪಾಡುವನು 2 ಒಂದು ದಿವಸ ನೀರೊಳದ್ದದಿದ್ದರೆ ದು- ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು ಹಿಂದಿನ ಕರ್ಮಾನುಬಂಧವು ತಿಳಿಯದು ಮುಂದಿನ ಹೊಂದಿಕೆ ಒಂದಾದರು ಇಂದಿರಾವರ ವೆಂಕಟೇಶನ ಪಾದಾರ- ವಿಂದ ಧ್ಯಾನಗಳೆಂಬದೊಂದೆ ಪರಮಸುಖ ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ ತಂದೆ ಬಿಡದೆ ಕಾವನೆಂದೆಂದಿಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಡತನವೆನ್ನನು ಬಾಧಿಪುದೈ ಹರಿ ನುಡಿಯಲೆನಗೆ ನಾಲಗೆ ಬರದೀಪರಿಪ ಅಡಿಯೊಳು ಕೆಡೆದಿಹೆ ತಡಿಗಾಣದೆಯೆ ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ ಮನುಜರು ಯೆನ್ನನು ಮಾನಿಸದಿರುವರು ಮನೆಯೊಳು ಮಕ್ಕಳು ಮಾತನಾಲಿಸರು ಅನುನಯದಿಂ ಸವಿ ವಚನವನುಸುರಲು ವನಿತೆಯುತಾಂ ಕೇಳದೆ ಕೋಪಿಪಳು 1 ಬಂದ ಭಾಗವತರ ಪೂಜೆಯ ಮಾಡಲು ಒಂದಾದರು ಸವಿ ವಸ್ತುವಿಲ್ಲವೈ ಸಂದಣಿ ಸೇರಲು ಮನಸು ಬಾರದು ಕುಂದಹರಿಸು ಮನಕಂಕೆಯ ತಂದು 2 ದಾನವ ಮಾಡಲು ದೀನತೆ ಬಿಡದು ಕಾನನದಿರುತಿಹ ಕುರುಡನಂತಿಹೆನೆ ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ ಸಿರಿನಲ್ಲ 3 ಸಾಲದವರು ಗಂಟಲೊಳು ಕೋಲಿಡುವರೊ ಶ್ರೀಲೊಲನೆ ನಾಂ ಮಾಡುವುದೇನು ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು ಲೀಲೆಯಿಂ ಬಿನ್ನೈಸಿ ಯನ್ನೊಲಿಸು 4
--------------
ಶಾಮಶರ್ಮರು