ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಿಕೆ ಒಂದಾಗಲಿ ಗುರುವೆ ಎನಿಕೆ ಒಂದಾಗಲಿಎನಿಕೆ ಒಂದಾಗಲಿ ಯೋಚನೆ ಇದಾಗಲಿಧ್ಯಾನ ಚಿದಾನಂದ ಗುರುವ ಧ್ಯಾನ ಮರೆಯದಂತೆ ಎನಗೆ ಪ ಕಂಡವರು ಉಗುಳಲಿ ಕಾಲಲೆನ್ನ ಒದೆಯಲಿಭಂಡ ಮನುಜನಿವನು ಎಂದು ಬಾಳುಗೇಡಿ ಎನಲಿ ಎನಗೆ 1 ಅನಾಯಾಸ ಬರಲಿ ಅಸಹ್ಯಿಸಿಕೊಳ್ಳುತಿರಲಿಹೀನಮನುಜನಿವನು ಎಂದು ಬಾಳುಗೇಡಿ ಎನಲಿ ಎನಗೆ2 ಮುಂದೆ ಕೆಡಹಿ ಬೀಳಲಿ ಮುಂಗೈ ಮೊಳಕಾಲ್ಮುರಿಯಲಿಹಿಂದಣಿಂದ ಕಳ್ಳರು ಕಟ್ಟಿಯೆಹಿಮ್ಮಡ ಕಡಿಯಲೆನಗೆ 3 ತನುವು ಎಲ್ಲ ನೋಯಲಿ ತಲೆ ಬೇನೆಯು ಬರಲಿಘನ ಕುರುವು ಕುತ್ತವು ಬಲಿದು ಘನವಾಗಿ ಇರಲಿ ಎನಗೆ4 ಇಂತು ಎನಗಾಗಲಿ ಇದೇ ಎನಗಿರಲಿ ಚಿಂತಾಯುತ ಚಿದಾನಂದನ ಚಿಂತೆ ಮರೆಯದಂತೆ ಎನಗೆ 5
--------------
ಚಿದಾನಂದ ಅವಧೂತರು
ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ ಶ್ರೀ ನರಹರಿ ಗತಿ ಪ್ರೀಯಾ ಪ. ಹರಿಶಯ ಮರುತರ ಆವೇಶಕೆ ನಿಲಯಾ ನಂಬಿದೆ ಶುಭಕಾಯಾ ಅ.ಪ. ತರಳತನದಿ ಶ್ರೀ ನೃಹರಿ ಶಾಂತನಾಗೇ ಸುರರೆಲ್ಲರು ನಿಮಗೇ ಎರದÀು ಕೀರ್ತಿ ಹಿರೆತನವಹಿಸಿದ ರಾಗೇ ಅದರಂದದಿ ಈಗೇ ವರ ಯತಿಗಳು ಹರಿದಾಸರು ವಂದಾಗೇ ಅಘ ನೀಗೇ ಧರೆ ಕಲ್ಪ ಧ್ರುಮವೆಂದು ನಿಮ್ಮ ಬಳಿಗೇ ವಪ್ಪಿಸುವರು ಅಡಿಗೇ 1 ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ ನಿಮ್ಮಡಿಗೆರವಾದೇ ಸಮ್ಮತದಲಿ ಮೃತ್ತಿಕೆಯನು ಸೇವಿಸದೇ ಹಮ್ಮಿನಲಿ ಮೈಮರೆದೇ ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ ಅತಿ ಭಕ್ತಿಯ ಜರಿದೇ ನಿಮ್ಮ ಕರುಣವಿರಲದರಿಂದೀಗರಿದೇ ತನುಮನವಪ್ಪಿಸಿದೇ 2 ಕೃತಿ ದ್ವಿದಳಾತ್ಮಕದಪರಾಧ ಪಡಿಸಿತು ಬಹು ಬಾಧ ಸಂದಿತು ಕಾಲವು ಮುಂದರಿಯುವ ಮೋದ ಸಂದಿಸಿತುತ್ಸಹದಾ ನಂದಕೆ ಕಲಿ ಮಲ ತೊಳೆಯಲು ಮೌನದಾ ಪರಿ ಅರಿತೆ ಸುಭೋಧಾ ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾ ಕೃಪೆತೋರಲು ಬಹು ಮೋದಾ 3 ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ ಪುರಗಳು ಜನ ತೋಷಾ ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ ಮಹಿಮೆಗಳ ಪ್ರಕಾಶ ವಲ್ಲದಾಯಿತ್ಯಾತಕೊ ಎನಗಭಿಲಾಷಾ ಬಲ್ಲವರೀಪರಿ ಮಾಡುವರೇ ಮೋಸಾ ಸದ್ಭಕ್ತರಲಾಭಾಸಾ 4 ಒಂದು ದಿನದ ಮೃತ್ತಿಕೆ ಜಲ ಸೇವಿಂದ ಪೊಂದಿದೆ ನಿಮ್ಮ ಪದಾ ಒಂದಾಗಲಿ ಗುರುವೆನಿಸಿದರೆಲ್ಲರದಾ ಮನವಮ್ಮನ ವಾದಾ ನಂದವು ಶ್ರೀ ನರಹರಿ ತಾ ಪರಿಕಿಸಿದಾ ನಂದವು ಬಹು ಮೋದಾ ಸಂದಲಿ ಗೋಪಾಲಕೃಷ್ಣವಿಠಲನಿಂದಾ ಎಣಿಸದೆ ಬಹು ಕುಂದಾ 5
--------------
ಅಂಬಾಬಾಯಿ
ಏನಾದರೂ ಒಂದಾಗಲಿ - ನಮ್ಮ -ಮನೆತುಂಬ ದೇವರು ಮರತುಂಡು ಕಲ್ಲು ಪಅತ್ತೆಯ ಕಣ್ಣೊಂದು ಹರಿಯಲಿ |ಮತ್ತೆ ಮಾವನ ಕಾಲು ಮುರಿಯಲಿ ||ಹಿತ್ತಲಗೋಡೆಯು ಬಿರಿಯಲಿ - ಕಾ -ಳ್ಗತ್ತಲೆಯಾದರೂ ಕವಿಯಲಿ ಹರಿಯೆ 1ಮನೆಯಗಂಡ ಮಾಯವಾಗಲಿ |ಉಣಬಂದ ಮೈದುನ ಒರಗಲಿ -ಸಿರಿ -ಮನೆಯು ಹಾಳು ಹಾಳಾಗಲಿ - ನಾ -ದಿನಿ ಅತ್ತಿಗೆಯರು ಸಾಯಲಿ ಹರಿಯೆ........... 2ಕಂದನ ಕಣ್ಣೊಂದು ಮುಚ್ಚಲಿ | ಆಚಂದ್ರಂಗೆ ಹಾವು ಕಚ್ಚಲಿ ||ದ್ವಂದ್ವಾರ್ಥವನು ಬಿಚ್ಚಲಿ ಪು -ರಂದರವಿಠಲ ಮೆಚ್ಚಲಿ ಹರಿಯೆ............ 3
--------------
ಪುರಂದರದಾಸರು