ಕಾಯೊ ಕರುಣಾಬ್ಧಿ ಗುರು ಎನಗೆ
ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಧ್ರುವ
ಶಿರದಲಭಯವ ನೀಡಿ ಕರುಣದಯದಲಿ ನೋಡಿ
ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ
ಗುರುತ ನಿಜ ಮಾಡರಹು ನೀಡಿ
ಪರಮ ಗತಿ ಇದರಿಡಿ ವರಕೃಪೆಯ ಮಾಡಿ 1
ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ
ಕುಂದ ದೋಷವ ತೊಳಿಸಿ
ಒಂದರೊಳು ನಿಲಿಸಿ ನೆಲೆಗೊಳಿಸಿ
ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ 2
ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ
ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ
ಸ್ಮರಣ ಸುಖ ಎದುರಿಡು ಬ್ಯಾಗೆ
ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ 3