ಏನು ಮಾಡಲಿ ವಿಠಲ ಏನು ತಿಳಿಯದು ವಿಠಲ
ಏನಿತ್ತು ಮೆಚ್ಚಿಸಲಿ ವಿಠಲಾ ಪ.
ಜ್ಞಾನ ಮೊದಲೇ ಇಲ್ಲ ಧ್ಯಾನ ಮಾಡುವುದರಿಯೆ
ನೀನಾಗೆ ವಲಿದೆನ್ನ ಸಲಹಯ್ಯ ವಿಠಲಯ್ಯ ಅ.ಪ.
ತಂದೆತಾಯಿಯು ನೀನೆ ಬಂಧು ಬಳಗವು ನೀನೆ
ತಂದವನುಭವದಲ್ಲಿ ಎನ್ನ ನೀನೆ
ಮುಂದೆ ಪೊರೆವವ ನೀನೆ ಹಿಂದೆ ಪೊರೆದವ ನೀನೆ
ಇಂದು ಪೊರೆಯುವನು ನೀನೇ
ಒಂದರಿಯೆ ತವ ಪದದ್ವಂದ್ವವೆ ಗತಿ ಎಂದು
ಇಂದು ಚರಣದಿ ಬಿದ್ದೆ ಪೊರೆಯಯ್ಯ ವಿಠಲಯ್ಯ 1
ಹಿಂದಿನಾ ಭಕ್ತರನು ಪೊರೆದ ಕೀರುತಿ ನೋಡೆ
ಒಂದು ನಿಜವೆಂದರಿಯೆ ವಿಠಲಾ
ಇಂದೆನ್ನ ಕರಪಿಡಿದ ಮುಂದಕ್ಕೆ ಕರೆದು ನೀ
ಒಂದು ಮಾತನಾಡೆ ವಿಠಲಾ
ಅಂದಿನಾ ಭಕ್ತವತ್ಸಲನೆಂಬ ಕೀರ್ತಿ ನಿಜ
ವೆಂದು ತಿಳಿಯುತಲಿ ಆನಂದಿಸುವೆ ವಿಠಲಯ್ಯ 2
ಸಿರಿವಂತರಿಗೆ ವಲಿವ ಬಿರುದೊಂದು ಘನವೆ ಕೇಳ್
ಪರಿ ವಿಠಲಾ
ಪರಿಪರಿಯಲಿ ನಿನ್ನ ಚರಣ ಪಿಡಿದಾಲ್ಪರಿಯೆ
ಥರವೆ ಗರುವಿಕೆ ಪೇಳು ವಿಠಲಾ
ತೆರದು ನೋಡದೆ ನೇತ್ರ ಕರದಭಯ ಪೇಳದಲೆ
ಪರಿ ಕರುಣೆಗೆ ಸರಿಯೆ ಪೇಳ್ ವಿಠಲಯ್ಯ3
ಹಿಂದೆ ಕೆಲವರ ಕಾಯ್ದುದೊಂದೆ ಕೀರ್ತಿಯು ಜಗದಿ
ಮಂದಿ ಹೊಗಳುವರದನೆ ಮತ್ತೆ ಮತ್ತೆ
ಇಂದು ಮುಂದೆ ಅಂಥ ಬಂದ ಭಕ್ತರು ಇಲ್ಲೆ
ಇಂದಿಲ್ಲವೇ ನಿನಗೆ ಆ ಶಕ್ತೀ
ಇಂದಿನವರಲಿ ಅಂಥ ಭಕುತಿ ಇಲ್ಲವೆ ಪೇಳು
ಇಂದಿರೇಶನೆ ಎನಗೆ ವಲಿಯದಿಹೆ ವಿಠಲಯ್ಯ 4
ಅಂತರಂಗದಿ ನಿಂತು ಶಾಂತತ್ವ ಕೊಡುವುದಕೆ
ಚಿಂತೆ ಏತಕೆ ಪೇಳು ವಿಠಲಾ
ಸಂತತದಿ ನಿನಧ್ಯಾನ ಚಿಂತನೆಯ ಕೊಡು ಎನಗೆ
ಚಿಂತಿತಾರ್ಥಪ್ರದನೆ ವಿಠಲಾ
ಕಂತುಪಿತ ಗೋಪಾಲಕೃಷ್ಣವಿಠ್ಠಲ ಗುರುಗ
ಕರ ಪಿಡಿದು 5