ಕಾಯೊ ಕಾಯೋ | ಗುರುವರ್ಯ | ಕಾಯೊ ಕಾಯೋ ಪ
ಕಾಯೊ ಕಾಯೊ ಗುರುವರ್ಯ ಪರಮ ಪ್ರಿಯಜೀಯ ನಿನ್ನಯ ಪಾದಕೆರಗುವೆನಯ್ಯಾ ಅ.ಪ.
ಒಂದರಿತವನಲ್ಲ | ಕಂದನು ಎಣಿಸದೆಬಂದು ಸಲಹೊ | ತಂದೆ ಮುದ್ದು ಮೋಹನ್ನ 1
ಹಿಂದಿನ ಸುಕೃತದಿ | ಬಂದು ಜನಿಸಿದೆನಂದ ಮುನಿಯ ಮತ | ಸಿಂಧುವಿನಲ್ಲಿ 2
ಇಂದಾದರು ತವ | ದ್ವಂದ್ವಪದವ ಮನಮಂದಿರದಲಿ ತೋರಿ | ದಂದುಗ ಬಿಡಿಸೋ 3
ಎಂದಾಗುದೊ ತಂದೆ | ಇಂದಿರೇಶ ಪದದ್ವಂದ್ವ ಸಂದರ್ಶನ | ಸಂಧಿಸೊ ಬೇಗನೆ 4
ತಂದೆ ನಿನ್ನಲಿ ಗುರುಗೋ | ವಿಂದ ವಿಠಲನಅಂದ ಮೂರುತಿಯನು | ಛಂದದಿ ತೋರೊ5