ಬ್ರಹ್ಮಾನುಭವ
ಅದಕೋ ಕೈವಲ್ಯಂ ಅದಕೋ ಕೈವಲ್ಯಂಅದಕೋ ಕೈವಲ್ಯಂ ಅದಕೋ ಕೈವಲ್ಯಂ ಪ
ಮಣಿ ಬಿದ್ದುಬೆಳಗೊಂದೆಯಾಗಿರುತಿಹುದೆ ಕೈವಲ್ಯಂ 1
ಜೋತಿ ಎರಡು ಇರೆ ಜೋತಿ ಒಂದರಲಿಡೆಜೋತಿಯೊಂದಾಗಿ ಬೆಳಗುತಲಿರೆ ಕೈವಲ್ಯಂ 2
ಕರ್ಪೂರ ಉರಿ ಸೋಂಕಿ ಉರಿ ಆವರಿಸಿರೆಕರ್ಪೂರ ಕಾಣ್ಬಾರದ ತೆರದಿಹುದೇ ಕೈವಲ್ಯಂ 3
ದರ್ಪಣಕೆ ಮುಖವೆರಡು ಆಗೆದರ್ಪಣವಿಲ್ಲದಿರೆ ಕಾಣದಿಹುದೇ ಕೈವಲ್ಯಂ 4
ಕೈವಲ್ಯ ಸ್ಥಿತಿ ನಿಲ್ಲಲವನೇ ಚಿದಾನಂದ5