ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ. ಅಂಗಜಪಿತ ನಿನ್ನ ಅನುಪಮ ರೂಪವ ನಿತ್ಯ ನೋಡಿ ನಲಿಯುತ ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ- ರಂಗದ ಭಕ್ತ ನಾನೆಂದೆನಿಸಿರಲಾಗಿ ಮಂಗಳಾಂಗ ಮನೋಹರ ನಿನ್ನ ಸಂಗ ಬಿಟ್ಟಿರಲಾರೆನೋ ಸ್ವಾಮಿ ರಂಗ ಎನ್ನಂತರಂಗವರಿಯಯಾ ಇಂಗಿತಜ್ಞ ನೀನಲ್ಲವೇ ಕೃಷ್ಣ 1 ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ- ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ ಒಂದರಲಭಿರುಚಿ ತೋರ್ಪುದೆ ಗುಣಗಣ ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು ಸಿಂಧು ಮಂದಿರ ಸುಂದರ ನಿನ್ನ ಪೊಂದಿಕೊಂಡಿಹನಲ್ಲವೇ ಕೃಷ್ಣ ತಂದೆ ಕೈ ಬಿಡಬೇಡವೊ ಎಳ- ಗಂದಿಯೆಂಬುದ ನೆನೆದು ಪಾಲಿಸೊ 2 ದೋಷ ರಹಿತ ಯಾದವೇಶ ಭಕ್ತರ ಪೋಷ ಶ್ರೀಶ ಕರಿಗಿರೀಶ ಸಕಲ ಲೋಕೇಶ ಪಾದ ಭೂಸುರ ಪ್ರಿಯ ಎನ್ನ ದೋಷಗಳೆಣಿಸದೆ ನೀ ಸಲಹಲಿ ಬೇಕೊ ವಾಸುದೇವ ಪರಾತ್ಪರ ಕೃಷ್ಣ ಕ್ಲೇಶ ಪರಿಹರನಲ್ಲವೆ ಸ್ವಾಮಿ ದಾಸ ಜನರಭೀಷ್ಟದಾಯಕ ನಾ ಶರಣು ಹೊಕ್ಕಿಹೆನು ರಕ್ಷಿಸು 3
--------------
ವರಾವಾಣಿರಾಮರಾಯದಾಸರು