ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ ನಿಲ್ಲೋ ಒಂದರಘಳಿಗೆ ಹೇ ಧೊರೆಯೆ ಪ ವಾರಿವಿಹಾರದಿ ನಿಂದು-ಗಿರಿಭಾರ ಕಳೆದು ನೀನಡಗಿದೆ ಅಂದು ಧಾರುಣಿಯನೆ ಬಗೆದು ನಿಂದು-ಧೀರ ಪೋರನ ಮಾತನ ಸಲಹಬೇಕೆಂದು 1 ವರವಟುವೇಷವ ಧರಿಸಿ-ದುಷ್ಟನೃಪರಕುಲಗೇಡಿಗನೆಂದೆನಿಸಿ ನಾರಿಯನಟವಿಯೊಳರಸಿ-ಪುರನಾರಿಯರ ಮನವನ್ನೆಅಪಹರಿಸಿ 2 ಓಡುವೆಯೊಮುಂದು ಉರಗಾದ್ರಿವಾಸ ವಿಠಲ ದಯಾಸಿಂಧು 3
--------------
ಉರಗಾದ್ರಿವಾಸವಿಠಲದಾಸರು
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ ಹರಿವಾರ ನವಮಿಯಲ್ಲಿ ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ ಹರಿಯೆ ಪರನೆಂದೆನುತಲಿ ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ ಬೆರೆದು ಸುರಸಂದಣಿಯಲಿ ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ವರವಿಷ್ಣುದೂತ ವೈಮಾನಿಕರ ಒಡಗೂಡಿ 1 ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ಖತಿದೂರರಿವರು ಜಗದೀ ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ಅತಿಶಯದಿ ಪೇಳಿ ಇಹಕೆ ಸತತವು ಶರಣರ್ಗೆ ಗತಿಯಾಗುವಂತೆ ಸ ತ್ವಥವಿಡಿಸಿ ಕರುಣದಿಂದ ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2 ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ಖೇಚರಾರೂಢ ಹರಿಯಾ ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ ಪ್ರಾಚಾರ್ಯವಂತರೆನಿಸೀ ಆ ಚತುರ್ದಶಭುವನಪತಿ ಶ್ರೀದವಿಠಲನ ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ 3
--------------
ಶ್ರೀದವಿಠಲರು
ಭಿಕ್ಷಾಂ ದೇಹಿಮೇ ಸ್ವಾಮಿನ್ ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ ಆರುಮಂದಿ ಶತ್ರುಗಳಿರುವರು ಬಲು ಕ್ರೂರರಿವರು ಎನ್ನನು ಬಿಡರೊ ದೂರ ಕಳುಹಲಾಹಾರವು ಸಾಲದು ಶಮ ದಮ 1 ನಮ್ಮವರಿರುವರು ಹತ್ತುಮಂದಿಗಳು ಸುಮ್ಮನಿರರು ಒಂದರಘಳಿಗೆ ಸಮ್ಮತಿಗೊಡದಿರೆ ಬಳಲಿಸುವರು ಇವ ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ 2 ಕತ್ತಲೆಯಲಿ ಬಂದಿರುವೆನು ಹೊಟ್ಟೆಯು ಹತ್ತಿ ಹೋಯಿತೊ ಹಸಿವಿನಲಿ ಎತ್ತ ಸುತ್ತಿದರೂ ತುತ್ತನು ಕಾಣೆನೊ ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ. ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ 1 ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ 2 ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ 3 ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ 4 ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ5
--------------
ಮೋಹನದಾಸರು